Bhajarangi 2: ಫ್ಯಾನ್ಸ್ ಜತೆ ಕುಳಿತು ‘ಭಜರಂಗಿ 2’ ನೋಡಿದ ಶಿವಣ್ಣನ ಮೊದಲ ಪ್ರತಿಕ್ರಿಯೆ ಏನು?
Shivarajkumar: ಅಭಿಮಾನಿಗಳ ಜೊತೆ ಕುಳಿತು ಶಿವರಾಜ್ಕುಮಾರ್ ಅವರು ‘ಭಜರಂಗಿ 2’ ಚಿತ್ರ ನೋಡಿದ್ದಾರೆ. ಪ್ರತಿಯೊಂದು ದೃಶ್ಯವನ್ನೂ ಜನರು ಎಂಜಾಯ್ ಮಾಡುತ್ತಿದ್ದಾರೆ. ಆ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ಇಂದು (ಅ.29) ಎಲ್ಲೆಡೆ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭ ಆಗಿತ್ತು. ಅಭಿಮಾನಿಗಳ ಜೊತೆ ಕುಳಿತು ಶಿವಣ್ಣ ಸಿನಿಮಾ ನೋಡಿದರು. ಜನರ ಸಂಭ್ರಮ ನೋಡಿ ಅವರು ಖುಷಿಪಟ್ಟರು. ಫಸ್ಟ್ ಡೇ ಫಸ್ಟ್ ಶೋಗೆ ಸಿನಿಪ್ರಿಯರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ ಇಡೀ ತಂಡದ ಸಂತಸಕ್ಕೆ ಕಾರಣ ಆಗಿದೆ.
ಚಿತ್ರಮಂದಿರದಲ್ಲಿ ಪ್ರತಿಯೊಂದು ದೃಶ್ಯವನ್ನೂ ಜನರು ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಅರ್ಜುನ್ ಜನ್ಯ ಸಂಗೀತ, ಸ್ವಾಮಿ ಜೆ. ಛಾಯಾಗ್ರಹಣ, ಹೊಸ ಕಲಾವಿದರ ಆರ್ಭಟಕ್ಕೆ ಶಿಳ್ಳೆ-ಚಪ್ಪಾಳೆ ಹೇರಳವಾಗಿ ಸಿಗುತ್ತಿದೆ. ಇದರ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದಾರೆ. ಎ. ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ಕಲಾವಿದೆ ಶ್ರುತಿ, ಭಾವನಾ ಮೆನನ್, ಭಜರಂಗಿ ಲೋಕಿ, ಚೆಲುವರಾಜ್, ಕುರಿ ಪ್ರತಾಪ್ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ:
Bhajarangi 2: ಶಿವಣ್ಣನ ‘ಭಜರಂಗಿ 2’ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್; ಇಲ್ಲಿದೆ ಫೋಟೋ ಗ್ಯಾಲರಿ
Bhajarangi 2: ‘ಭಜರಂಗಿ 2’ ಹಬ್ಬ; ಚಿತ್ರಮಂದಿರಗಳ ಮುಂದೆ ದೀಪಾವಳಿ ಆಚರಿಸಿದ ಶಿವರಾಜ್ಕುಮಾರ್ ಫ್ಯಾನ್ಸ್