ಪ್ರಾರ್ಥನಾ ಮಂದಿರಗಳ ಮುಂದೆ ಭಕ್ತರು ಕಳಚಿರುವ ಚಪ್ಪಲಿಗಳು ಹೇಗೆ ಕಳುವಾಗುತ್ತವೆ ಗೊತ್ತಾ? ವಿಡಿಯೋ ನೋಡಿ
ಹಾಗೆ ನೋಡಿದರೆ ಅದು ಕಳ್ಳರ ಗುಂಪಿನ ಥರ ಕಾಣುತ್ತಿಲ್ಲ. ಭುಜದ ಮೇಲೆ ಶಲ್ಯದ ಹಾಗೆ ಬಟ್ಟೆ ಹೊದ್ದಿರುವವನ ಚಪ್ಪಲಿ ಕಿತ್ತುಹೋದಂತಿದೆ. ಹೊಸ ಜೊತೆ ಕೊಳ್ಳಲು ಜೇಬಿನಲ್ಲಿ ದುಡ್ಡು ಇದ್ದಂತಿಲ್ಲ.
ಪ್ರಾರ್ಥನಾ ಮಂದಿರ ಯಾವುದೇ ಧರ್ಮದ್ದಾಗಿರಲಿ, ಅಲ್ಲಿ ಚಪ್ಪಲಿಗಳ ಕಳ್ಳತನ ಆಗೋದು ಬಹಳ ಕಾಮನ್ ಸಂಗತಿ. ಕೆ ಅರ್ ಮಾರ್ಕೆಟ್ ಎಡಭಾಗದಲ್ಲಿ ಅಂದರೆ ಕೋಟೆಯ ಹತ್ತಿರ ಚಪ್ಪಲಿ ಮಾರುವವರನ್ನು ನೀವು ನೋಡಿರಬಹುದು. ಚಪ್ಪಲಿ ಮತ್ತು ಬೂಟುಗಳು ಹೊಸ ಜೊತೆಗಳಲ್ಲದಿದ್ದರೂ ಅವು ಹೊಸವೇನೋ ಎನ್ನುವಷ್ಟು ಬೆಳಗಿಸಲಾಗಿರುತ್ತದೆ. ಅಸಲಿಗೆ ಅವು ಕದ್ದ ಚಪ್ಪಲಿಗಳು. ದೇವಸ್ಥಾನ, ಚರ್ಚ್ಗಳಿಗೆ ಹೋಗುವ ಜನ ಚಪ್ಪಲಿಗಳನ್ನು ಹೊರಗಡೆಯೇ ಬಿಡುತ್ತಾರೆ. ಚಪ್ಪಲಿ ಕಳ್ಳರು ಅಲ್ಲಿಂದಲೇ ಚಪ್ಪಲಿಗಳನ್ನು ಎತ್ತೋದು. ಮನೆಗಳ ಮುಂದೆ ಬಿಟ್ಟಿರುವ ಚಪ್ಪಲಿಗಳನ್ನು ಸಹ ಅವರು ಕದಿಯುತ್ತಾರೆ. ಅವರು ಹೇಗೆ ಕಳುವು ಮಾಡುತ್ತಾರೆ ಅಂತ ನಿಮಗೆ ಗೊತ್ತಿರಲಿಕ್ಕಿಲ್ಲ.
ಇಲ್ಲಿರುವ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ನಿಮಗೆ ವಿಡಿಯೋದ ಬಲಭಾಗದಲ್ಲಿ ಕಾಣುತ್ತಿರೋದು ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಸೆಂಟ್ ಸೆಬಾಸ್ಟಿಯನ್ ಚರ್ಚ್. ಎದುರುಗಡೆಯಿಂದ ಮೂರು ಜನರ ಒಂದು ಗುಂಪು ಬರುತ್ತಿರುವುದು ಕಾಣಿಸುತ್ತದೆ. ಹಾಗೆ ನೋಡಿದರೆ ಅದು ಕಳ್ಳರ ಗುಂಪಿನ ಥರ ಕಾಣುತ್ತಿಲ್ಲ. ಭುಜದ ಮೇಲೆ ಶಲ್ಯದ ಹಾಗೆ ಬಟ್ಟೆ ಹೊದ್ದಿರುವವನ ಚಪ್ಪಲಿ ಕಿತ್ತುಹೋದಂತಿದೆ. ಹೊಸ ಜೊತೆ ಕೊಳ್ಳಲು ಜೇಬಿನಲ್ಲಿ ದುಡ್ಡು ಇದ್ದಂತಿಲ್ಲ.
ಇದು ರವಿವಾರ ಸೆರೆಯಾಗಿರುವ ದೃಶ್ಯ. ಸಂಡೆ ಮಾಸ್ ಗೆ ಜನ ಚರ್ಚ್ನಲ್ಲಿ ಸೇರಿದ್ದಾರೆ. ಚಪ್ಪಲಿ ಮತ್ತು ಶೂಗಳನ್ನು ಹೊರಗಡೆ ಕಳಚಿರುವುದು ವಿಡಿಯೊನಲ್ಲಿ ಕಾಣಿತ್ತಿದೆ. ಚರ್ಚ್ ಹೊರಗಡೆ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವ ಈ ವ್ಯಕ್ತಿಯು ತನ್ನ ಹಳೆಯ ಇಲ್ಲವೇ ಕಿತ್ತುಹೋಗಿರುವ ಚಪ್ಪಲಿಗಳನ್ನು ಆ ಪಕ್ಕ ಬಿಟ್ಟು ಈ ಪಕ್ಕದಲ್ಲಿರುವ ಚೆನ್ನಾಗಿರೋ ಚಪ್ಪಲಿಗಳನ್ನು ಧರಿಸಿ ಅಲ್ಲಿಂದ ಹೊರಡುತ್ತಾನೆ. ತನ್ನ ಕಳುವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗುತ್ತಿರುವುದು ಅವನ ಗಮನಕ್ಕೆ ಬರೋದೇ ಇಲ್ಲ.
ಇದನ್ನೂ ನೋಡಿ: 13 ವರ್ಷಗಳ ಹಿಂದೆ ಜೆನಿಲಿಯಾ ಕೆನ್ನೆಗೆ ಹೊಡೆದಿದ್ದ ಆಯಾಜ್; ಕೊನೆಗೂ ಸೇಡು ತೀರಿಸಿದ ರಿತೇಶ್: ತಮಾಷೆಯ ವಿಡಿಯೋ ನೋಡಿ