Temple Tour: ಕಿಟಕಿಯಲ್ಲಿ ದರ್ಶನ ಕೊಟ್ಟು ಭಕ್ತರನ್ನು ಹರಸುತ್ತಾನೆ ಬಂಗಾರ ತಿರುಪತಿ
ಬಂಗಾರ ತಿರುಪತಿಯು 108 ತಿರುಪತಿಗಳಲ್ಲಿ ಇದು ಒಂದು ಎಂಬ ಪ್ರತೀತಿಯೂ ಇದೆ. ಕೋಲಾರದ ಚಿನ್ನದ ಗಣಿ ಇದ್ದ ಪ್ರದೇಶವಾಗಿರುವ ಇದಕ್ಕೆ ‘ಬಂಗಾರ ತಿರುಪತಿ’ ಎಂಬ ಹೆಸರು ಬಂದಿದೆ.
ತಿರುಪತಿ ತಿಮ್ಮಪ್ಪ ಯಾರಿಗೆ ಗೊತ್ತಿಲ್ಲ ಹೇಳಿ. ಜೀವಮಾನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅನ್ನೋದೇ ಎಲ್ಲರ ಹೆಬ್ಬಯಕೆ. ಆ ತಿರುಪತಿಯ ಹಾಗೆ ನಾಡಿನಲ್ಲೂ ಒಂದು ತಿರುಪತಿ ತಿಮ್ಮಪ್ಪನ ಆಲಯವಿದೆ ಅಂದ್ರೆ ನಿಮಗೆ ಖಂಡಿತ ಅಚ್ಚರಿಯಾಗದೆ ಇರಲ್ಲ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕು ಗುಡ್ಡಹಳ್ಳಿಯಲ್ಲಿರುವ ಬಂಗಾರ ತಿರುಪತಿ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಬಂಗಾರ ತಿರುಪತಿಯು 108 ತಿರುಪತಿಗಳಲ್ಲಿ ಇದು ಒಂದು ಎಂಬ ಪ್ರತೀತಿಯೂ ಇದೆ. ಕೋಲಾರದ ಚಿನ್ನದ ಗಣಿ ಇದ್ದ ಪ್ರದೇಶವಾಗಿರುವ ಇದಕ್ಕೆ ‘ಬಂಗಾರ ತಿರುಪತಿ’ ಎಂಬ ಹೆಸರು ಬಂದಿದೆ. ಕೋಲಾರ ಜಿಲ್ಲಾ ಕೇಂದ್ರದಿಂದ 45 ಕಿ.ಮೀ ಕ್ರಮಿಸಿದರೆ ಬಂಗಾರ ತಿರುಪತಿ ಶ್ರೀನಿವಾಸನ ದರ್ಶನ ಸಿಗುತ್ತದೆ.
Latest Videos