ಹಿರೇಉಡನಲ್ಲಿ ತುಳಜಾ ಭವಾನಿ ದೇವಿ ಗುಡಿ ಕಟ್ಟಿದ್ದು ಛತ್ರಪತಿ ಶಿವಾಜಿಯ ತಂದೆ ಶಹಾಜಿ ಭೋಸ್ಲೆ
ಸಂತಾನ ಭಾಗ್ಯವಿಲ್ಲದ ಅದೆಷ್ಟೋ ಜನ ತುಳಜಾ ಭವಾನಿಯ ಕೃಪೆಯಿಂದ ಮಕ್ಕಳನ್ನು ಪಡೆದ ಉದಾಹರಣೆಗಳು ಇವೆ. ಈ ಭಾಗದ ಜನ ಯಾವುದೇ ಕಾರ್ಯ ಕೈಗೆತ್ತಿಕೊಳ್ಳುವ ಮೊದಲು ದೇವಿಯ ಸನ್ನಿಧಿಗೆ ಬಂದು ಆಶೀರ್ವಾದ ಪಡೆದುಕೊಳ್ಳುತ್ತಾರೆ.
ನಮ್ಮಲ್ಲೊಂದು ಪ್ರವೃತ್ತಿಯಿದೆ. ನಾವೆಲ್ಲ ದೈವಭಕ್ತರಾಗಿದ್ದು ಬೇರೆ ಬೇರೆ ದೇವರುಗಳಿಗೆ ನಡೆದುಕೊಳ್ಳುತ್ತೇವೆ. ಹರಕೆಗಳನ್ನು ಹೊತ್ತು ದೇವಸ್ಥಾನಗಳಿಗೆ ಭೇಟಿ ನೀಡುವ ನಾವು ನಮ್ಮ ಇಷ್ಟಾರ್ಥ ನೆರವೇರಿದಾಗ ದೇವರನ್ನು ಅಪಾರವಾಗಿ ಕೊಂಡಾಡುತ್ತೇವೆ. ಅದರೆ ಅದು ನೆರವೇರದೆ ಹೋದಾಗ ತಾಳ್ಮೆ ಕಳೆದುಕೊಂಡು ದೇವರ ಅಸ್ತಿತ್ವವನ್ನೇ ಪ್ರಶ್ನಿಸಲಾರಂಭಿಸುತ್ತೇವೆ. ಆದರೆ ದೇವರು ತನ್ನ ಭಕ್ತರ ತಾಳ್ಮೆಯನ್ನು ಪರೀಕ್ಷಿಸುತ್ತಾನೆ ಅನ್ನೋ ವಿಚಾರವನ್ನು ನಾವು ಮರೆತುಬಿಡುತ್ತೇವೆ. ನಮ್ಮ ಅಜ್ಞಾನಕ್ಕೆ ಯಾವ ದೇವರು ಯಾವತ್ತೂ ಕೋಪಮಾಡಿಕೊಳ್ಳುವುದಿಲ್ಲ. ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲ್ಲೂಕಿನಲ್ಲಿರುವ ತುಳಜಾ ಭವಾನಿಯ ಮಂದಿರ ಮತ್ತು ಈ ಪುಣ್ಯಕ್ಷೇತ್ರದ ಹೆಸರು ಕೇಳದವರ ಸಂಖ್ಯೆ ಕರ್ನಾಟಕದಲ್ಲಿ ಬಹಳ ಕಡಿಮೆ ಎಂದೇ ಹೇಳಬೇಕು. ತುಳಜಾಮಾತೆ 17ನೇ ಶತಮಾನದಿಂದ ತನ್ನಲ್ಲಿಗೆ ಬರುವ ಭಕ್ತರನ್ನು ಹರಸುತ್ತಾ ಬಂದಿದ್ದಾಳೆ. ಹರಕೆ ಹೊತ್ತು ದೇವಿಯ ಸನ್ನಿಧಿಗೆ ಹೋದವರು ನಿರಾಶರಾದ ಉದಾಹರಣೆಗಳೇ ಇಲ್ಲ.
ಸಂತಾನ ಭಾಗ್ಯವಿಲ್ಲದ ಅದೆಷ್ಟೋ ಜನ ತುಳಜಾ ಭವಾನಿಯ ಕೃಪೆಯಿಂದ ಮಕ್ಕಳನ್ನು ಪಡೆದ ಉದಾಹರಣೆಗಳು ಇವೆ. ಈ ಭಾಗದ ಜನ ಯಾವುದೇ ಕಾರ್ಯ ಕೈಗೆತ್ತಿಕೊಳ್ಳುವ ಮೊದಲು ದೇವಿಯ ಸನ್ನಿಧಿಗೆ ಬಂದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಈ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಜನ ಬರುತ್ತಾರೆ. ಅದರ ಹಿಂದೆ ಕಾರಣವೂ ಇದೆ.
ಅಸಲಿಗೆ ಈ ದೇವಸ್ಥಾನವನ್ನು ಕಟ್ಟಿದ್ದು ಛತ್ರಪತಿ ಶಿವಾಜಿ ಮಹಾರಾಜನ ತಂದೆ ಶಹಾಜಿ ಭೋಸ್ಲೆ. ಶಹಾಜಿ ಒಮ್ಮೆ ಈ ಭಾಗಕ್ಕೆ ಬಂದಾಗ ಹಿರೇಉಡದಲ್ಲಿ ತಂಗಿದ್ದನಂತೆ. ಅದೊಂದು ರಾತ್ರಿ ಶಹಾಜಿ ನಿದ್ರಿಸುತ್ತಿದ್ದಾಗ ತುಳಜಾ ಭವಾನಿ ಕನಸಿನಲ್ಲಿ ಕಾಣಿಸಿಕೊಂಡು ಈ ಜಾಗದಲ್ಲಿ ಮಂದಿರ ನಿರ್ಮಿಸಬೇಕೆಂದು ಹೇಳಿದಳಂತೆ. ಈ ಹಿನ್ನೆಲೆಯಲ್ಲೇ ಹಿರೇಉಡನಲ್ಲಿ ತುಳಜಾ ಭವಾನಿ ದೇವಸ್ಥಾನ 17 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿದ್ದು.
ಉಗ್ರಾವತಾರದ ಜೊತೆ ಕರುಣಾಸ್ವರೂಪಿಣಿಯೂ ಆಗಿರುವ ಭವಾನಿ ಮಾತೆ ಕಳೆದ 4 ಶತಮಾನಗಳಿಂದ ತನ್ನ ಭಕ್ತರನ್ನು ಆಶೀರ್ವದಿಸುತ್ತಾ ಬಂದಿದ್ದಾಳೆ. ಜಿಲ್ಲಾ ಕೇಂದ್ರದಿಂದ 56 ಕಿಮೀ ಮತ್ತು ಚೆನ್ನಗಿರಿಯಿಂದ ಕೇವಲ 12 ಕಿಮೀ ದೂರವಿರುವ ಹಿರೇಉಡ ಪುಣ್ಯಕ್ಷೇತ್ರಕ್ಕೆ ನೀವಿನ್ನೂ ಭೇಟಿ ನೀಡಿಲ್ಲವಾದರೆ, ಒಮ್ಮೆ ಬಂದುಹೋಗಿ.
ಇದನ್ನೂ ಓದಿ: ‘ಅಪ್ಪ-ಅಮ್ಮನ ವೆಡ್ಡಿಂಗ್ ಆ್ಯನಿವರ್ಸರಿಗೆ ವಿಶ್ ಮಾಡ್ಬೇಕು, ವಿಡಿಯೋ ಕಾಲ್ ಮಾಡಿಕೊಡಿ ಪ್ಲೀಸ್’; ಆರ್ಯನ್ ಅಳಲು?