ನೀರಿನಲ್ಲಿ ಈಜಿ ದಡ ಸೇರಿದ ಹುಲಿ ವಿಡಿಯೋ ಫುಲ್ ವೈರಲ್
ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರು ಹುಲಿ ಈಜುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ವಿಡಿಯೋ ವೈರರ್ ಆಗಿತ್ತು.
ಮೈಸೂರಿನಲ್ಲಿ ಹುಲಿಯೊಂದು ನೀರಿನಲ್ಲಿ ಈಜಿ ದಡ ಸೇರಿದೆ. ದಡ ಸೇರಿದ ದೃಶ್ಯ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲಿ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿತ್ತು. ಸಾಮಾನ್ಯವಾಗಿ ಹುಲಿಗಳು ಸಂಗಾತಿಗಾಗಿ ಅಥವಾ ಸಾಮ್ರಾಜ್ಯ ಸ್ಥಾಪನೆಗೆ ಈ ರೀತಿ ಸಂಚಾರ ಮಾಡುತ್ತಿರುತ್ತವೆ. ಆದರೆ ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆ ಸಿಗುವುದು ಅಪರೂಪ. ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರು ಹುಲಿ ಈಜುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ವಿಡಿಯೋ ವೈರರ್ ಆಗಿತ್ತು. ಇದೀಗಾ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದೆ.
Latest Videos