‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಬಗ್ಗೆ ರಜನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ ಮೊದಲ ಪ್ರತಿಕ್ರಿಯೆ ಏನು?
ಸಿನಿಮಾ ನಟ ಆಗುವುದಕ್ಕೂ ಮುನ್ನ ರಜನಿಕಾಂತ್ ಬಸ್ ಕಂಡಕ್ಟರ್ ಆಗಿದ್ದರು. ಅದೇ ಬಸ್ನಲ್ಲಿ ಚಾಲಕನಾಗಿದ್ದ ರಾಜ್ ಬಹುದ್ದೂರ್ ಅವರು ರಜನಿಗೆ ಆಪ್ತ ಸ್ನೇಹಿತನಾಗಿದ್ದರು. ಇಂದಿಗೂ ಅವರ ಸ್ನೇಹ ಮುಂದುವರಿದಿದೆ.
‘ಸೂಪರ್ ಸ್ಟಾರ್’ ರಜನಿಕಾಂತ್ ಅವರಿಗೆ ಸೋಮವಾರ (ಅ.25) ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಅವರ ಅಭಿಮಾನಿ ಬಳಗಕ್ಕೆ ಭಾರಿ ಖುಷಿ ನೀಡಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಅವರು ತಮ್ಮ ಸ್ನೇಹಿತ ರಾಜ್ ಬಹದ್ದೂರ್ ಅವರನ್ನು ನೆನಪಿಸಿಕೊಂಡರು. ತಲೈವಾಗೆ ಈ ಪ್ರತಿಷ್ಠಿತ ಗೌರವ ಸಿಕ್ಕ ಬಳಿಕ ರಾಜ್ ಬಹದ್ದೂರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಜನಿಕಾಂತ್ ಜೊತೆಗಿನ ತಮ್ಮ 50 ವರ್ಷಗಳ ಹಳೇ ಸ್ನೇಹವನ್ನು ಅವರು ಮೆಲುಕು ಹಾಕಿದ್ದಾರೆ.
ರಜನಿಕಾಂತ್ ಅವರು ಸಿನಿಮಾದಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣವೇ ರಾಜ್ ಬಹದ್ದೂರ್ ನೀಡಿದ್ದ ಪ್ರೋತ್ಸಾಹ ಮತ್ತು ಬೆಂಬಲ. ಅದನ್ನು ರಜನಿಕಾಂತ್ ಇಂದಿಗೂ ಮರೆತಿಲ್ಲ. ಬೆಂಗಳೂರಿಗೆ ಬಂದಾಗೆಲ್ಲ ತಮ್ಮ ಸ್ನೇಹಿತನನ್ನು ಅವರು ಭೇಟಿ ಮಾಡುತ್ತಾರೆ. ಇಬ್ಬರ ನಡುವಿನ ಆ ಸ್ನೇಹ ಎಲ್ಲರಿಗೂ ಮಾದರಿ ಆಗುವಂತಿದೆ. ರಜನಿಕಾಂತ್ ಅವರು ಸಿನಿಮಾ ನಟ ಆಗಿದ್ದು ಹೇಗೆ ಎಂಬ ಬಗ್ಗೆ ರಾಜ್ ಬಹದ್ದೂರ್ ಮಾತನಾಡಿದ್ದಾರೆ.
ಇದನ್ನೂ ಓದಿ:
‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್; ಧನ್ಯಾ ರಾಮ್ಕುಮಾರ್-ಸೂರಜ್ಗೆ ತಲೈವಾ ಬೆಂಬಲ