Rajinikanth: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಜನಿಕಾಂತ್; 67ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಲೈವಾ
Dadasaheb Phalke Award: ನಟ ರಜನಿಕಾಂತ್ ಪಾಲಿಗೆ ಇಂದು (ಅ.25) ಮಹತ್ವದ ದಿನ. ದೆಹಲಿಯ ವಿಜ್ಞಾನ ಭವನದಲ್ಲಿ ಅವರು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಭಾರತೀಯ ಚಿತ್ರರಂಗದ ‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಅವರು ಇಂದು (ಅ.25) ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ (Dadasaheb Phalke Award) ಸ್ವೀಕರಿಸಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಈ ಸಮಾರಂಭ ನಡೆದಿದೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆಗಾಗಿ ರಜನಿಕಾಂತ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 67ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ (67th National Film Awards) ಇದಾಗಿದ್ದು, 2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.
ಮಲಯಾಳಂ ಸಿನಿಮಾ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಭೋಂಸ್ಲೆ’ ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ಹಾಗೂ ‘ಅಸುರನ್’ ಚಿತ್ರಕ್ಕಾಗಿ ಧನುಶ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಪಂಗಾ’ ಮತ್ತು ‘ಮಣಿಕರ್ಣಿಕಾ’ ಚಿತ್ರಗಳಿಗಾಗಿ ಕಂಗನಾ ರಣಾವತ್ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.
Superstar Rajinikanth receives the Dadasaheb Phalke Award at 67th National Film Awards ceremony in Delhi. pic.twitter.com/x8hVKuCgE0
— ANI (@ANI) October 25, 2021
#WATCH | Superstar Rajinikanth receives the Dadasaheb Phalke Award at 67th National Film Awards ceremony in Delhi. pic.twitter.com/3l51GaQBix
— ANI (@ANI) October 25, 2021
ಕನ್ನಡದ ಅತ್ಯುತ್ತಮ ಸಿನಿಮಾ ಎಂಬ ಖ್ಯಾತಿಗೆ ಈ ವರ್ಷ ‘ಅಕ್ಷಿ’ ಚಿತ್ರ ಪಾತ್ರವಾಗಿದೆ. ಇದಕ್ಕೆ ನಿರ್ದೇಶನ ಮಾಡಿರುವುದು ಹೊಸ ನಿರ್ದೇಶಕ ಮನೋಜ್ ಕುಮಾರ್. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಅವರಿಗೆ ನಿರ್ದೇಶಕನಾಗಿ ‘ಅಕ್ಷಿ’ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ತಂತಸದ ವಿಚಾರ.
ಪ್ರಶಸ್ತಿ ವಿಜೇತರ ಪಟ್ಟಿ
ಅತ್ಯುತ್ತಮ ಸಿನಿಮಾ: ಮರಕ್ಕರ್: ಲೈನ್ ಆಫ್ ದಿ ಅರೇಬಿಯನ್ ಸೀ
ಅತ್ಯುತ್ತಮ ನಟಿ: ಕಂಗನಾ ರಣಾವತ್ (ಮಣಿಕರ್ಣಿಕಾ, ಪಂಗಾ)
ಅತ್ಯುತ್ತಮ ನಟ: ಧನುಷ್ (ಅಸುರನ್) ಮನೋಜ್ ಬಾಜಪಯ್ (ಭೋನ್ಸ್ಲೆ)
ಅತ್ಯುತ್ತಮ ಚಿತ್ರ ಕನ್ನಡ ಸಿನಿಮಾ: ಅಕ್ಷಿ
ಅತ್ಯುತ್ತಮ ಚಿತ್ರ ಸಾಹಸ ನಿರ್ದೇಶನ: ವಿಕ್ರಂ ಮೋರ್ (ಅವನೇ ಶ್ರೀಮನ್ನಾರಾಯಣ)
ಅತ್ಯುತ್ತಮ ನಿರ್ದೇಶನ: ಬಹತಾರ್ ಹುರೈನ್
ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ (ಸೂಪರ್ ಡಿಲಕ್ಸ್)
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ತಾಷ್ಕೆಂಟ್ ಫೈಲ್ಸ್)
ಅತ್ಯುತ್ತಮ ನೃತ್ಯ ನಿರ್ದೇಶನ: ಮಹರ್ಷಿ (ತೆಲುಗು)
ಅತ್ಯುತ್ತಮ ಜನಪ್ರಿಯ ಮನರಂಜನೆ ಸಿನಿಮಾ: ಮಹರ್ಷಿ (ತೆಲುಗು)
ಅತ್ಯುತ್ತಮ ಗೀತ ಸಾಹಿತ್ಯ: ಪ್ರಭಾವರ್ಮಾ-ಕೊಲಾಂಬಿ (ಮಲಯಾಳಂ)
ಅತ್ಯುತ್ತಮ ಸಂಗೀತ ನಿರ್ದೇಶಕ: ಡಿ. ಇಮ್ಮಾನ್-ವಿಶ್ವಾಸಮ್(ತಮಿಳು)
ಅತ್ಯುತ್ತಮ ಸಂಕಲನ: ಜೆರ್ಸಿ (ತೆಲುಗು)
ಅತ್ಯುತ್ತಮ ಮೇಕಪ್ ಆರ್ಟಿಸ್ಟ್: ರಂಜಿತ್-ಹೆಲನ್ (ಮಲಯಾಳಂ)
ಚೊಚ್ಚಲ ಅತ್ಯುತ್ತಮ ನಿರ್ದೇಶನ: ಮತ್ತುಕುಟ್ಟಿ (ಹೆಲನ್ -ಮಲಯಾಳಂ)
ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ)
ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ: ಆನಂದಿ ಗೋಪಾಲ್ (ಮರಾಠಿ)
ಇದನ್ನೂ ಓದಿ:
National Film Awards 2019: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಒಲಿದ ರಾಷ್ಟ್ರ ಪ್ರಶಸ್ತಿ
‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್; ಧನ್ಯಾ ರಾಮ್ಕುಮಾರ್-ಸೂರಜ್ಗೆ ತಲೈವಾ ಬೆಂಬಲ
ಎವರ್ಗ್ರೀನ್ ಹೀರೋ ರಜನಿಕಾಂತ್ಗೆ ನಾಯಕಿಯಾಗಲಿದ್ದಾರೆ ಯಂಗ್ ಬ್ಯೂಟಿ ದೀಪಿಕಾ ಪಡುಕೋಣೆ
Published On - 12:49 pm, Mon, 25 October 21