ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್​ ಪುಂಡಾಟ ಕೇಸ್​ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್​ ನಟ?

Soundarya Jagadish: ಸ್ನೇಹಿತ್​ನಿಂದ ಹಲ್ಲೆಗೆ ಒಳಗಾಗಿರುವ ರಜತ್​ ಮತ್ತು ಮಂಜುಳಾ ಪುರುಷೋತ್ತಮ್​ ಅವರಿಗೆ ಫೋನ್​ ಕರೆ ಹೋಗಿದೆ. ಕನ್ನಡದ ಓರ್ವ ಸ್ಟಾರ್​ ನಟ ಮತ್ತು ಓರ್ವ ಸ್ಟಾರ್​ ನಿರ್ಮಾಪಕ ಕರೆ ಮಾಡಿ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್​ ಪುಂಡಾಟ ಕೇಸ್​ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್​ ನಟ?
ಸ್ನೇಹಿತ್​
Follow us
TV9 Web
| Updated By: Digi Tech Desk

Updated on:Oct 25, 2021 | 2:45 PM

Soundarya Jagadish | ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್ ಅವರು ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಅಪ್​ಡೇಟ್​ ಸಿಕ್ಕಿದೆ. 10 ಜನ ಬೌನ್ಸರ್ಸ್​ ಜೊತೆ ಬಂದು ಸ್ನೇಹಿತ್​ ಪುಂಡಾಟ ನಡೆಸಿದ್ದರು. ಆದರೆ ಈವರೆಗೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಕೇವಲ ನೋಟೀಸ್​ ನೀಡಲಾಗಿದೆ. ಇದರ ನಡುವೆ ಕೇಸ್​ನಲ್ಲಿ ರಾಜಿ ಮಾಡಿಸಲು ಸ್ಯಾಂಡಲ್​ವುಡ್​ನ ಸ್ಟಾರ್​ ನಟ ಹಾಗೂ ನಿರ್ಮಾಪಕರು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೇಳಿಬಂದಿದೆ.

ಸ್ನೇಹಿತ್​ನಿಂದ ಹಲ್ಲೆಗೆ ಒಳಗಾಗಿರುವ ರಜತ್​ ಮತ್ತು ಮಂಜುಳಾ ಪುರುಷೋತ್ತಮ್​ ಅವರಿಗೆ ಫೋನ್​ ಕರೆ ಹೋಗಿದೆ. ಕನ್ನಡದ ಓರ್ವ ಸ್ಟಾರ್​ ನಟ ಮತ್ತು ಓರ್ವ ಸ್ಟಾರ್​ ನಿರ್ಮಾಪಕ ಕರೆ ಮಾಡಿ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸ್ನೇಹಿತ್​ ಬಂಧನ ಆಗದಂತೆ ತಡೆಯಲು ಪ್ರಭಾವ ಕೂಡ ಹೇರಲಾಗುತ್ತಿದೆ. ಈ ಕಾರಣದಿಂದ ತನಿಖೆ ಮೇಲೆ ಅನುಮಾನ ಮೂಡುವಂತಾಗಿದೆ. ಪೊಲೀಸರ ಮೇಲೂ ಪ್ರಭಾವಿ ವ್ಯಕ್ತಿಗಳು ಒತ್ತಡ ಹೇರುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ.

ತನಿಖೆ ಸಂಬಂಧ ಸೌಂದರ್ಯ ಜಗದೀಶ್​ ನಿವಾಸಕ್ಕೆ ಇಬ್ಬರು ಪೊಲೀಸರು ಭೇಟಿ ನೀಡಿದ್ದಾರೆ. ಮಹಾಲಕ್ಷ್ಮೀ ಲೇಔಟ್​ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದಾಗ ಮನೆ ಬಾಗಿಲು ತೆಗೆಯದೆ ಹೈಡ್ರಾಮಾ ಮಾಡಲಾಗಿದೆ. ಕುಟುಂಬಸ್ಥರು ಕೆಲಹೊತ್ತು ಬಾಗಿಲು ತೆಗೆಯಲಿಲ್ಲ. ಹಲ್ಲೆಯಲ್ಲಿ ಜಗದೀಶ್​ ಮನೆ ಕೆಲಸದ ಭುವನಾ ಭಾಗಿಯಾಗಿದ್ದರು. ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸ್ನೇಹಿತ್​ ಹಾಗೂ ಅವರ ಗೆಳೆಯರು ಈ ರೀತಿ ಹಲ್ಲೆ ವಿಚಾರದಲ್ಲಿ ಸುದ್ದಿಯಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಸ್ನೇಹಿತ್ ಮತ್ತು ಅವರ ಟೀಮ್ ಮೂರು ಬಾರಿ ಇದೇ ರೀತಿ ಹಲ್ಲೆ ಮಾಡಿತ್ತು. ಇದು ಸಣ್ಣ ವಿಚಾರ ಎಂದು ರಜತ್ ಕುಟುಂಬದವರು ಸುಮ್ಮನೆ ಇದ್ದರು. ಆದರೆ, ಇದು ಪದೇಪದೇ ಪುನರಾವರ್ತನೆ ಆಗುತ್ತಿರುವುದರಿಂದ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಇದನ್ನೂ ಓದಿ:

Snehith: ಹಲ್ಲೆ ಆರೋಪ; ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲು

ಸ್ಯಾಂಡಲ್​ವುಡ್​ ನಿರ್ಮಾಪಕನ ಮಗನ ಪುಂಡಾಟ? ಕಸ ಗುಡಿಸುವಾಗ ಧೂಳು ಬಿದ್ದಿದ್ದಕ್ಕೆ ರಕ್ತಬರುವಂತೆ ಹಲ್ಲೆ

Published On - 2:09 pm, Mon, 25 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ