ಸ್ಯಾಂಡಲ್​ವುಡ್​ ನಿರ್ಮಾಪಕನ ಮಗನ ಪುಂಡಾಟ? ಕಸ ಗುಡಿಸುವಾಗ ಧೂಳು ಬಿದ್ದಿದ್ದಕ್ಕೆ ರಕ್ತಬರುವಂತೆ ಹಲ್ಲೆ

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನಲ್ಲಿ ಈ ಘಟನೆ ನಡೆದಿದೆ.  ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸ್ಯಾಂಡಲ್​ವುಡ್​ ನಿರ್ಮಾಪಕನ ಮಗನ ಪುಂಡಾಟ? ಕಸ ಗುಡಿಸುವಾಗ ಧೂಳು ಬಿದ್ದಿದ್ದಕ್ಕೆ ರಕ್ತಬರುವಂತೆ ಹಲ್ಲೆ
ಸ್ನೇಹಿತ್​ ವಿರುದ್ಧ ಹಲ್ಲೆ ಆರೋಪ

ಸೆಲೆಬ್ರಿಟಿ ಮಕ್ಕಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಹಣ ಇದೆ ಎಂಬ ಕಾರಣಕ್ಕೆ ಧಿಮಾಕು ತೋರಿಸೋಕೆ ಹೋಗಿ ಯಾರ ಜತೆಗಾದರೂ ಕಿರಿಕ್​ ಮಾಡಿಕೊಂಡು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಾರೆ. ಈಗ ಅಂತುಹದೇ ಘಟನೆ ನಡೆದಿದೆ. ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್​ ವಿರುದ್ಧ ಹೀಗೊಂದು ಆರೋಪ ಕೇಳಿ ಬಂದಿದೆ. ಬೌನ್ಸರ್​ ಜತೆ ಸೇರಿಕೊಂಡು ಅವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನಲ್ಲಿ ಈ ಘಟನೆ ನಡೆದಿದೆ.  ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ. 10 ಜನ ಬೌನ್ಸರ್​ಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮನೆಯ ಇಬ್ಬರು ಮಹಿಳಾ ಸಿಬ್ಬಂದಿಗೆ ಥಳಿಸಿದ ಆರೋಪ ಕೂಡ ಇದೆ. ಸದ್ಯ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಗಿದ್ದೇನು?

ಕೆಲಸದವರು ರಜತ್ ಮನೆಯಲ್ಲಿ ಕಸ ಗುಡಿಸುತ್ತಿದ್ದರು. ಈ ವೇಳೆ ತಮ್ಮ ದೇಹದಮೇಲೆ ಧೂಳು ಬಿದ್ದಿದೆ ಎಂದು ಸ್ನೇಹಿತ್​ ಆರೋಪಿಸಿದ್ದಾರೆ. ನಂತರ ಮನೆ ಕೆಲಸ ಮಾಡುವವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮಹಿಳಾ ಸಿಬ್ಬಂದಿಯ ಬಟ್ಟೆ ಹರಿದು ಹೋಗುವಂತೆ ಹಾಗೂ ಗಾಯವಾಗುವಂತೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆಯೂ ಹೀಗೇ ಆಗಿತ್ತು

ಸ್ನೇಹಿತ್​ ಹಾಗೂ ಅವರ ಗೆಳೆಯರು ಈ ರೀತಿ ಹಲ್ಲೆ ವಿಚಾರದಲ್ಲಿ ಸುದ್ದಿಯಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಸ್ನೇಹಿತ್ ಮತ್ತು ಅವರ ಟೀಮ್ ಮೂರು ಬಾರಿ ಇದೇ ರೀತಿ ಹಲ್ಲೆ ಮಾಡಿತ್ತು. ಇದು ಸಣ್ಣ ವಿಚಾರ ಎಂದು ರಜತ್ ಕುಟುಂಬದವರು ಸುಮ್ಮನೆ ಇದ್ದರು. ಆದರೆ, ಇದು ಪದೇಪದೇ ಪುನರಾವರ್ತನೆ ಆಗುತ್ತಿರುವುದರಿಂದ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸ್ವಿಮ್ಮಿಂಗ್​​ಪೂಲ್​ನಲ್ಲಿ ಆಯ್ರಾ, ಯಥರ್ವ್​​; ಕ್ಯೂಟ್​ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

‘777 ಚಾರ್ಲಿ’ ಸಿನಿಮಾ ಶೂಟಿಂಗ್​ ಮುಕ್ತಾಯ; ಕುಂಬಳಕಾಯಿ ಒಡೆದ ಸಂಭ್ರಮದಲ್ಲಿ ರಕ್ಷಿತ್​

Click on your DTH Provider to Add TV9 Kannada