Bhajarangi 2: ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರದ ಟ್ರೇಲರ್ನಲ್ಲಿ ಡೈಲಾಗ್ಸ್ ಯಾಕಿಲ್ಲ?; ಇಲ್ಲಿದೆ ಉತ್ತರ
Shiva Rajkumar: ಅಕ್ಟೋಬರ್ 29ರಂದು ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರ ಬಿಡುಗಡೆಯಾಗುತ್ತಿದೆ. ಭಜರಂಗಿ ಚಿತ್ರದಿಂದ ಗುರುತಿಸಿಕೊಂಡ ನಟ ‘ಭಜರಂಗಿ ಲೋಕಿ’ ಭಜರಂಗಿ 2ನಲ್ಲೂ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅವರು ಟಿವಿ9ನೊಂದಿಗೆ ಮಾತನಾಡುತ್ತಾ ಹಲವು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
‘ಭಜರಂಗಿ’ ಚಿತ್ರ ಬಿಡುಗಡೆಯಾಗಿ 8 ವರ್ಷಗಳ ಬಳಿಕ ‘ಭಜರಂಗಿ 2’ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 29ರಂದು ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಜರಂಗಿ ಚಿತ್ರದಿಂದ ‘ಭಜರಂಗಿ ಲೋಕಿ’ ಎಂದು ಗುರುತಿಸಿಕೊಂಡ ಕಲಾವಿದ ಲೋಕೇಶ್ ಚಿತ್ರದ ಕುರಿತು ಟಿವಿ9ನೊಂದಿಗೆ ಮಾತನಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ನಲ್ಲಿ ಅಭಿಮಾನಿಗಳು ಸಂಭಾಷಣೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ಕೇವಲ ಬಿಜಿಎಮ್ ಹಾಗೂ ಮಂತ್ರದ ಘೋಷವಷ್ಟೇ ಟ್ರೇಲರ್ನಲ್ಲಿ ಕೇಳಿಬರುತ್ತದೆ. ಉಳಿದಂತೆ ಸಂಪೂರ್ಣವಾಗಿ ದೃಶ್ಯ ವೈಭವವಿದೆ. ಇದೇಕೆ ಹೀಗೆ ಎಂಬ ಪ್ರಶ್ನೆಗೆ ಲೋಕಿ ಉತ್ತರಿಸಿದ್ದಾರೆ. ಈ ವೇಳೆ ಅವರು ಕೆಲವೊಂದು ಕುತೂಹಲಕರ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ.
‘‘ಟ್ರೇಲರ್ನಲ್ಲಿ ಸಂಭಾಷಣೆಯಿಲ್ಲದಿರುವುದು ನಿರ್ದೇಷಕ ಹರ್ಷ ಅವರ ಪ್ರಯೋಗಗಳಲ್ಲಿ ಒಂದು ಎನ್ನಬಹುದು. ಹಾಲಿವುಡ್ ಚಿತ್ರಗಳಲ್ಲಿ ಇಂತಹ ಮಾದರಿಯಿದೆ. ಆ ರೀತಿ ಹರ್ಷ ಅವರು ಮಾಡಿರಬಹುದು ಎಂದು ನನ್ನ ಅನಿಸಿಕೆ. ಆದರೆ ಯಾವುದೇ ಒಂದು ಪ್ರಾಡಕ್ಟ್ ಯಶಸ್ಸು ಕಂಡಾಗ ಅದಕ್ಕೆ ಕಾರಣವನ್ನು ಹುಡುಕಿಕೊಂಡು ಹೋಗಬಾರದು. ಟ್ರೇಲರ್ ಕೂಡ ಯಶಸ್ವಿಯಾಗಿದೆ. ಆದ್ದರಿಂದ ಸಂಭಾಷಣೆ ಇರುವುದು, ಇಲ್ಲದಿರುವುದು ಮುಖ್ಯವಾಗುವುದಿಲ್ಲ’’ ಎಂದು ಲೋಕಿ ವಿವರಿಸಿದ್ದಾರೆ. ಭಜರಂಗಿ 2 ಚಿತ್ರದಲ್ಲಿ ಪಾತ್ರಗಳು ಬಹಳ ವೈವಿಧ್ಯಮಯವಾಗಿ ಮೂಡಿಬರಲು ನಿರ್ದೇಶಕರು ಹಾಗೂ ಶಿವರಾಜ್ ಕುಮಾರ್ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಇದೇ ವೇಳೆ ಲೋಕಿ ತಿಳಿಸಿದ್ದಾರೆ.
ಇದನ್ನೂ ಓದಿ:
Bhajarangi 2 Trailer: ‘ಭಜರಂಗಿ 2’ ಟ್ರೇಲರ್ ಮೂಲಕ ಮೋಡಿ ಮಾಡಿದ ಶಿವರಾಜ್ಕುಮಾರ್; ದುಪ್ಪಟ್ಟಾಯಿತು ನಿರೀಕ್ಷೆ