AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಬಿಲಿಯನ್ ಕೋವಿಡ್​ ಲಸಿಕೆ ಡೋಸ್​ಗಳು: ಭಾರತದ ಸಾಧನೆ ಬೇರೆ ದೇಶಗಳಿಗೆ ಮಾದರಿಯಾಗಿದೆ!

1 ಬಿಲಿಯನ್ ಕೋವಿಡ್​ ಲಸಿಕೆ ಡೋಸ್​ಗಳು: ಭಾರತದ ಸಾಧನೆ ಬೇರೆ ದೇಶಗಳಿಗೆ ಮಾದರಿಯಾಗಿದೆ!

TV9 Web
| Edited By: |

Updated on: Oct 23, 2021 | 4:13 PM

Share

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಲಿಯನ್ ಡೋಸ್ ಸಾಧನೆಯ ಹಿನ್ನೆಲೆಯಲ್ಲಿ ಶುಕ್ರವಾರದಂದು ಇಡೀ ದೇಶವನ್ನು ಅಭಿನಂದಿಸಿದರು. ಈ ಸಾಧನೆ ಕೇವಲ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ನಿರ್ಣಾಯಕವಾಗಿದೆ.

ಎಲ್ಲ ದೇಶಗಳು ಭಾರತದ ಸಾಧನೆಯ ಬಗ್ಗೆ ಮಾತಾಡುತ್ತಿವೆ. ಯಾರೂ ಊಹಿಸದ ರೀತಿಯಲ್ಲಿ ಭಾರತ 100 ಕೋಟಿ ಕೊವಿಡ್ ಲಸಿಕೆಯ ಡೋಸ್ಗಳನ್ನು ನೀಡಿ ವಿಕ್ರಮ ಮೆರೆದಿದೆ ಮತ್ತು ಬೇರೆ ದೇಶಗಳ ನಾಯಕರು ಹುಬ್ಬೇರಿಸುವಂತೆ ಮಾಡಿದೆ. ಭಾರತದಂಥ ವಿಶಾಲ ಮತ್ತು 1.4 ಬಿಲಿಯನ್ ಜನಸಂಖ್ಯೆಯುಳ್ಳ ದೇಶದಲ್ಲಿ ಕೇವಲ 9 ತಿಂಗಳ ಅವಧಿಯಲ್ಲಿ 1 ಬಿಲಿಯನ್ ಡೋಸು ಲಸಿಕೆ ನೀಡುವುದು ಅಸಾಮಾನ್ಯ ಸಾಧನೆ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್ಮೆಂಟ್ ಎನಿಸಿಕೊಳ್ಳುತ್ತದೆ. ಒಂದು ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆಯ ಶೇಕಡಾ 75ರಷ್ಟು ವಯಸ್ಕರು ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಅದಕ್ಕೂ ಮಿಗಿಲಾದ ಸಂಗತಿಯೇನೆಂದರೆ, ಅವರಲ್ಲಿ ಶೇಕಡಾ 48 ಮಹಿಳೆಯರಾಗಿದ್ದಾರೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಲಿಯನ್ ಡೋಸ್ ಸಾಧನೆಯ ಹಿನ್ನೆಲೆಯಲ್ಲಿ ಶುಕ್ರವಾರದಂದು ಇಡೀ ದೇಶವನ್ನು ಅಭಿನಂದಿಸಿದರು. ಈ ಸಾಧನೆ ಕೇವಲ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ನಿರ್ಣಾಯಕವಾಗಿದೆ. ಭಾರತದ ಬೃಹತ್ ಪ್ರಮಾಣದ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ, ಸಾಂಕ್ರಾಮಿಕದ ಹರಡುವಿಕೆ ವಿಶ್ವದ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾಕೆಂದರೆ, ಕೊರೊನಾ ಪಿಡುಗು ಹರಡದಂತೆ ತಡೆಯುವುದು ದೇಶಗಳ ಗಡಿಗಳಿಗೆ ಸಾಧ್ಯವಿಲ್ಲ.

ಓಕೆ, ಅಂಕಿ-ಅಂಶಗಳ ಮತ್ತೊಮ್ಮೆ ಗಮನ ಹರಿಸುವ. ಭಾರತದ ಒಟ್ಟಾರೆ ಜನಸಂಖ್ಯೆಯ ಶೇಕಡಾ 30 ರಷ್ಟು ಜನರಿಗೆ ಸಂಪೂರ್ಣ ವ್ಯಾಕ್ಸಿನೇಶನ್ ಆಗಿದೆ. ಅಂಕಿಗಳಲ್ಲಿ ಹೇಳುವುದಾದರೆ, 70,82,81,784 ಜನ ಸಿಂಗಲ್ ಡೋಸ್ ಮತ್ತು 29,16,28,140 ಜನ ಡಬಲ್ ಡೋಸ್​ಗಳನ್ನು ಪಡೆದಿದ್ದಾರೆ.

ನಿಮಗೆ ನೆನಪಿರಬಹುದು, ಭಾರತದಲ್ಲಿ ಜನೆವರಿ 16,2021 ರಿಂದ ಲಸಿಕಾ ಅಭಿಯಾನ ಶುರುವಾಯಿತು. ಮೇ 1 ರಿಂದ 18ಕ್ಕೆ ಮೇಲ್ಪಟ್ಟು ಪ್ರಾಯದವರಿಗೆ ಲಸಿಕೆ ನೀಡುವುದನ್ನು ಆರಂಭಿಸಲಾಯಿತು.

ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅಂದಹಾಗೆ, 100 ಕೋಟಿ ಸಂಖ್ಯೆಯ ಲಸಿಕೆ ಪಡೆದವರು ಯಾರು ಅಂತ ನಿಮಗೆ ಗೊತ್ತಾ? ಈ ಡೋಸನ್ನು ದೆಹಲಿಯ ರಾಮ ಮನೋಹರ್ ಲೊಹಿಯಾ ಆಸ್ಪತ್ರೆಯಲ್ಲಿ ನೀಡಲಾಯಿತು ಮತ್ತು ಅದನ್ನು ಪಡೆದವರ ಹೆಸರು ಅರುಣ್ ರಾಯ್.

ಇದನ್ನೂ ಓದಿ:   ರಾಯಚೂರಿನಲ್ಲಿ ವ್ಯಾಕ್ಸಿನ್ ನೀಡಲು ಹೋದ ಅಧಿಕಾರಿ ಮುಂದೆ ನಾಟಕದ ಡೈಲಾಗ್ ಹೊಡೆದ ವ್ಯಕ್ತಿ; ವಿಡಿಯೋ ಇದೆ ನೋಡಿ