ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು; ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಟೌನ್ ವ್ಯಾಪ್ತಿಯಲ್ಲಿ ಅತಿಯಾದ ಬೈಕ್ ಕಳ್ಳತನಕ್ಕೆ ನಿವಾಸಿಗಳು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಟೌನ್ ವ್ಯಾಪ್ತಿಯಲ್ಲಿ ಪೊಲೀಸರ ಗಸ್ತಿಗೆ ಆಗ್ರಹಿಸಿದ್ದಾರೆ. ಸದ್ಯ ಈ ಬೈಕ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸದಾಶಿವನಗರದಲ್ಲಿನ ಗುರುಪ್ರಸಾದ್ ಅವರಿಗೆ ಸೇರಿದ ಬೈಕ್ ಕಳ್ಳತನ ಮಾಡಲಾಗಿದೆ. 4 ಜನ ಹುಡುಗರು ಸೇರಿ ಬೈಕ್ ಎಗರಿಸಿದ ದೃಶ್ಯ ಸದ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಟೌನ್ ವ್ಯಾಪ್ತಿಯಲ್ಲಿ ಅತಿಯಾದ ಬೈಕ್ ಕಳ್ಳತನಕ್ಕೆ ನಿವಾಸಿಗಳು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಟೌನ್ ವ್ಯಾಪ್ತಿಯಲ್ಲಿ ಪೊಲೀಸರ ಗಸ್ತಿಗೆ ಆಗ್ರಹಿಸಿದ್ದಾರೆ. ಸದ್ಯ ಈ ಬೈಕ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರನ್ನು ಸೆರೆಹಿಡಿಯಲು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ:
ಹೋಟೆಲ್ ಬ್ಯುಸಿನೆಸ್ ಮಾಡ್ತಿದ್ದವರು ಕಳ್ಳತನ ಮಾಡಿ ಅರೆಸ್ಟ್, ಕಳ್ಳತನಕ್ಕೆ ಸಹಾಯ ಮಾಡ್ತು ಸೋಶಿಯಲ್ ಮೀಡಿಯಾ
Crime News: ಬೈಕ್ ಕಳ್ಳರನ್ನು ಹಿಡಿಯಲು ಹೋದವರ ಮೇಲೆ ಫೈರಿಂಗ್; ಸಿಗರೇಟ್ ತುಂಬಿದ್ದ ಬ್ಯಾಗ್ ಕಳ್ಳತನ
Latest Videos