‘ಶಿವಣ್ಣ ಮತ್ತು ಅವರ ಕುಟುಂಬಕ್ಕೆ ನಾನು ಚಿರಋಣಿ’; ಸಲಗ ಗೆಲುವಿನಲ್ಲಿ ದುನಿಯಾ ವಿಜಯ್​ ಧನ್ಯವಾದ

‘ಶಿವಣ್ಣ ನನಗೆ ತುಂಬ ಇಷ್ಟ. ನಮಗೆಲ್ಲ ಅವರೇ ಸ್ಫೂರ್ತಿ. ಆರಂಭದಿಂದಲೂ ಅವರು ನಮ್ಮ ಜೊತೆಗೆ ಬೆಂಬಲವಾಗಿ ಇದ್ದಾರೆ’ ಎನ್ನುವ ಮೂಲಕ ಶಿವರಾಜ್​ಕುಮಾರ್​ಗೆ ದುನಿಯಾ ವಿಜಯ್​ ಧನ್ಯವಾದ ಅರ್ಪಿಸಿದರು.

ದುನಿಯಾ ವಿಜಯ್​ ನಿರ್ದೇಶನ ಮಾಡಿರುವ ‘ಸಲಗ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಚಿತ್ರಕ್ಕೆ ನಟ ಶಿವರಾಜ್​ಕುಮಾರ್​ ಅವರು ಮೊದಲಿನಿಂದಲೂ ಬೆಂಬಲ ನೀಡುತ್ತ ಬಂದಿದ್ದಾರೆ. ಈಗ ಸಿನಿಮಾ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಸಲಗ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಆಗಮಿಸಿ ಶಿವಣ್ಣ ಶುಭಕೋರಿದ್ದರು. ಇದೆಲ್ಲದರ ಫಲವಾಗಿ ಸಲಗ ಚಿತ್ರಕ್ಕೆ ಆನೆ ಬಲ ಸಿಕ್ಕಂತಾಗಿದ್ದು ನಿಜ. ಹಾಗಾಗಿ ಶಿವಣ್ಣನಿಗೆ ದುನಿಯಾ ವಿಜಯ್​ ಧನ್ಯವಾದ ತಿಳಿಸಿದ್ದಾರೆ.

‘ಶಿವಣ್ಣನ ಮನೆಗೆ ಹೋದಾಗ ಒಂದು ಮಾತು ಹೇಳಿದ್ದರು. ಹಾರ್ಡ್​ ವರ್ಕ್​ ಮಾಡಿದರೆ ಒಳ್ಳೆಯದಾಗುತ್ತದೆ ಅಂತ ಅವರು ಹೇಳಿದ ಮಾತನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಶಿವಣ್ಣ ನನಗೆ ತುಂಬ ಇಷ್ಟ. ಅವರೇ ನಮಗೆಲ್ಲ ಸ್ಫೂರ್ತಿ. ಆರಂಭದಿಂದಲೂ ಅವರು ನಮ್ಮ ಜೊತೆಗೆ ಇದ್ದಾರೆ. ಜೀವನದಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ನಾನು ಚಿರಋಣಿ ಆಗಿರುತ್ತೇನೆ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ.

ಇದನ್ನೂ ಓದಿ:

Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Click on your DTH Provider to Add TV9 Kannada