ಅನ್ಯ ಕೋಮಿನ ಯುವತಿ ಜತೆಗೆ ಯುವಕನ ಪ್ರೀತಿ ಪ್ರೇಮ; ಪೋಷಕರು ವಾರ್ನ್ ಮಾಡಿದ ಬಳಿಕ ಯುವಕ ನಾಪತ್ತೆ

ರವಿ ಪೋಷಕರು ಕೂಡ ಆಲಮೇಲ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಯುವತಿ ಪೋಷಕರು ನಾಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಲಮೇಲ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯಪುರ: ಅನ್ಯಕೋಮಿನ ಯುವತಿಯನ್ನು ಯುವಕ ಪ್ರೀತಿಸುತ್ತಿದ್ದ ಹಿನ್ನೆಲೆ, ಯುವತಿಯ ಪೋಷಕರು ಯುವಕನಿಗೆ ಎಚ್ಚರಿಕೆ ನೀಡಿದ್ದಾರೆ. ಯುವತಿ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಬಳಿಕ ಯುವಕ ನಾಪತ್ತೆಯಾಗಿದ್ದಾನೆ. ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಬಳಗಾನೂರು ಗ್ರಾಮದಿಂದ ಯುವಕ ರವಿ ನಾಪತ್ತೆಯಾಗಿದ್ದಾನೆ. ಪ್ರಿಯಕರ ರವಿಯನ್ನು ನನ್ನ ಪೋಷಕರೇ ಕೊಲೆ ಮಾಡಿದ್ದಾರೆ ಎಂದು 112ಕ್ಕೆ ಕರೆ ಮಾಡಿದ ಯುವತಿ, ಆ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ರವಿ ಪೋಷಕರು ಕೂಡ ಆಲಮೇಲ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಯುವತಿ ಪೋಷಕರು ನಾಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಲಮೇಲ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕನ ಶವ ಸಿಗುವವರೆಗೆ ಕೊಲೆ ಎಂದು ಪರಿಗಣಿಸಲ್ಲ. ಯುವತಿ ಮನೆಯವರನ್ನು ಪತ್ತೆ ಮಾಡಿ ವಿಚಾರಣೆ ಮಾಡುತ್ತೇವೆ ಎಂದು ವಿಜಯಪುರ ಜಿಲ್ಲೆ ಆಲಮೇಲ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ: ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಹೇಗೆ?

ಹಿಮಾಚಲ ಪ್ರದೇಶದ ಕಿನ್ನೌರ್​ನಲ್ಲಿ 17 ಚಾರಣಿಗರು ನಾಪತ್ತೆ

Click on your DTH Provider to Add TV9 Kannada