ರಾಯಚೂರಿನಲ್ಲಿ ವ್ಯಾಕ್ಸಿನ್ ನೀಡಲು ಹೋದ ಅಧಿಕಾರಿ ಮುಂದೆ ನಾಟಕದ ಡೈಲಾಗ್ ಹೊಡೆದ ವ್ಯಕ್ತಿ; ವಿಡಿಯೋ ಇದೆ ನೋಡಿ
ಸಹಾಯಕ ಆಯುಕ್ತರೇ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡರೂ ಅಜ್ಜಿ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ. ಆರ್ಎಂಪಿ ಡಾಕ್ಟರ್ ಹೇಳಿದ ನಂತರ ಅಜ್ಜಿ ಲಸಿಕೆ ಪಡೆದಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ವ್ಯಾಕ್ಸಿನ್ ನೀಡಲು ಹರಸಾಹಸಪಡುತ್ತಿದ್ದಾರೆ. ವ್ಯಾಕ್ಸಿನ್ ಹಾಕಲು ಹೋದ ಸಹಾಯಕ ಆಯುಕ್ತ ಸಂತೋಷ್ ಕಾಮೇಗೌಡ ಮುಂದೆ ವ್ಯಕ್ತಿಯೊಬ್ಬ ನಾಟಕದ ಡೈಲಾಗ್ ಹೊಡೆಯುತ್ತಾರೆ. ನಾಟಕದ ಡೈಲಾಗ್ ಹೊಡೆದ ವ್ಯಕ್ತಿ ವ್ಯಾಕ್ಸಿನ್ಗೆ ಜೈ ಎಂದದಿದ್ದಾರೆ. ಪ್ರಾರಂಭದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ವ್ಯಕ್ತಿ ಓಡಿದ್ದರು. ವ್ಯಾಕ್ಸಿನ್ ಅಂದರೆ ಭಯಬಿದ್ದು ಓಡಿದ್ದ ವ್ಯಕ್ತಿಗೆ ಮನವೊಲಿಸಿದ್ದಾರೆ. ನಂತರ ವ್ಯಾಕ್ಸಿನ್ ಪಡೆದು ಡೈಲಾಗ್ ಹೊಡೆದು ವ್ಯಕ್ತಿ ಸಂಭ್ರಮಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೊಟ್ನೇಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇನ್ನು ಸಹಾಯಕ ಆಯುಕ್ತರೇ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡರೂ ಅಜ್ಜಿ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ. ಆರ್ಎಂಪಿ ಡಾಕ್ಟರ್ ಹೇಳಿದ ನಂತರ ಅಜ್ಜಿ ಲಸಿಕೆ ಪಡೆದಿದ್ದಾರೆ.
Latest Videos