Mysuru: ಭಾರಿ ಮಳೆಯಿಂದ ಕೆರೆಯಂತಾದ ಆರ್​ಎಂಪಿ ಕ್ವಾರ್ಟರ್ಸ್; ಮೇಯರ್ ಪ್ರತಿನಿಧಿಸುವ ವಾರ್ಡ್​ನಲ್ಲಿಯೇ ನಿವಾಸಿಗಳ ಪರದಾಟ

Mysuru: ಭಾರಿ ಮಳೆಯಿಂದ ಕೆರೆಯಂತಾದ ಆರ್​ಎಂಪಿ ಕ್ವಾರ್ಟರ್ಸ್; ಮೇಯರ್ ಪ್ರತಿನಿಧಿಸುವ ವಾರ್ಡ್​ನಲ್ಲಿಯೇ ನಿವಾಸಿಗಳ ಪರದಾಟ

TV9 Web
| Updated By: shivaprasad.hs

Updated on:Oct 23, 2021 | 10:44 AM

ಮೈಸೂರಿನಲ್ಲಿ ಭಾರಿ ಮಳೆಯ ಪರಿಣಾಮ ಕುವೆಂಪು ನಗರದ ಆರ್​ಎಂಪಿ ಕ್ವಾರ್ಟರ್ಸ್​ನಲ್ಲಿ ಅವಾಂತರ ಸೃಷ್ಟಿಯಾಗಿದೆ. ಮೇಯರ್ ಪ್ರತಿನಿಧಿಸುವ ಕ್ಷೇತ್ರದಲ್ಲೇ ನಿವಾಸಿಗಳಿಗೆ ಸಮಸ್ಯೆ ಸೃಷ್ಟಿಯಾಗಿದೆ.

ಮೈಸೂರು: ಭಾರಿ ಮಳೆಯ ಕಾರಣ, ಮೈಸೂರಿನ ಕುವೆಂಪುನಗರದ ಐಶ್ವರ್ಯ ಲೇ ಔಟ್​ನ ಆರ್‌ಎಂಪಿ ಕ್ವಾರ್ಟರ್ಸ್ ಕೆರೆಯಂತಾಗಿದೆ. ಮೇಯರ್ ಪ್ರತಿನಿಧಿಸುವ ವಾರ್ಡ್‌ನಲ್ಲಿಯೇ ಅವಾಂತರ ಸೃಷ್ಟಿಯಾಗಿದ್ದು, ಸೇತುವೆ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಭಾರಿ ಮಳೆಯಾದರೆ ಕ್ವಾರ್ಟರ್ಸ್‌ಗೆ ನೀರು ನುಗ್ಗುತ್ತಿದ್ದು, ನಿವಾಸಿಗಳು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಜನರು ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಪರಿಹರಿಸಲು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮೈಸೂರಿಗೆ ಇಂದು ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ, ಅಕ್ಟೋಬರ್ 23ರವರೆಗೆ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿತ್ತು. ಅಕ್ಟೋಬರ್ 25 ಹಾಗೂ 26ರಂದು ವಿಪರೀತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹವಾಮಾನ ತಜ್ಞರ ಪ್ರಕಾರ ಅ. 25 ಅಥವಾ 26ರಂದು ಹಿಂಗಾರು ಮಳೆ ಶುರುವಾಗಲಿದೆ. ಇಂದಿನಿಂದ ಅ. 26ರವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಅ. 24ರಂದು ಮಳೆ ಕೊಂಚ ಕಡಿಮೆ ಇರಲಿದೆ. ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಕಡಿಮೆಯಾಗಿದ್ದು, ಇಂದಿನಿಂದ ಮೈಸೂರು, ಮಂಡ್ಯ,  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಮನಗರ, ಕೋಲಾರ, ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ.

ಇದನ್ನೂ ಓದಿ:

Karnataka Weather Today: ಕರ್ನಾಟಕದಲ್ಲಿ ಇಂದು ಹವಾಮಾನ ಹೇಗಿರಲಿದೆ? ಇಲ್ಲಿದೆ ಮಾಹಿತಿ

Crime News: ಮೈಸೂರು ಹೊರವಲಯದಲ್ಲಿ ಡಬಲ್ ಮರ್ಡರ್; ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ

Published on: Oct 23, 2021 09:59 AM