Crime News: ಮೈಸೂರು ಹೊರವಲಯದಲ್ಲಿ ಡಬಲ್ ಮರ್ಡರ್; ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ

ಪ್ರಕಾಶ್ ಮತ್ತು ಲತಾರನ್ನು ಹತ್ಯೆಗೈದು ಪುತ್ರ ಸಾಗರ್ ಪರಾರಿಯಾಗಿದ್ದಾನೆ. ಸದ್ಯ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾಗಾರ್​ನನ್ನು ಸೆರೆಹಿಡಿಯಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Crime News: ಮೈಸೂರು ಹೊರವಲಯದಲ್ಲಿ ಡಬಲ್ ಮರ್ಡರ್; ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ
ಸಾಗರ್

ಮೈಸೂರು: ತಂದೆ ಮತ್ತು ತಂದೆಯ ಪ್ರೇಯಸಿಯನ್ನು ಮಗನೇ ಹತ್ಯೆಗೈದ ಘಟನೆ ಮೈಸೂರು ಹೊರವಲಯದ ಶ್ರೀ ನಗರದಲ್ಲಿ ನಡೆದಿದೆ. ಪ್ರಕಾಶ್ ಮತ್ತು ಲತಾರನ್ನು ಹತ್ಯೆಗೈದು ಪುತ್ರ ಸಾಗರ್ ಪರಾರಿಯಾಗಿದ್ದಾನೆ. ಸದ್ಯ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾಗಾರ್​ನನ್ನು ಸೆರೆಹಿಡಿಯಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ರಾಯಚೂರು: ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ
ರಾಯಚೂರು ತಾಲೂಕಿನ ಮಾಲದೊಡ್ಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಮಿರ್ಜಾಪುರದ ಹನುಮಂತ(35) ಮೃತ ದುರ್ದೈವಿ. ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬಿಡದಿ‌: ಕೆರೆ ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರ ಸಾವು
ರಾಮನಗರ ತಾಲೂಕಿನ ಕೆಂಚನಗುಪ್ಪೆ ಗ್ರಾಮದ ಕುಂಬಾರ ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ನಡೆದಿದೆ. ಕೌಶಿಕ್(11) ಮತ್ತು ಕರಣ್(12) ಮೃತ ಬಾಲಕರು. ಬಿಡದಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಬಾಲಕರಿಬ್ಬರೂ ರಾಮನಗರ ‌ತಾಲೂಕಿನ ಬಿಡದಿ ಪಟ್ಟಣದ ನಿವಾಸಿಗಳು. ನಿನ್ನೆ ಗುರುವಾರ ಇಬ್ಬರೂ ಈಜಾಡಲು ಹೋಗಿದ್ದರು. ಕಟ್ಟೆಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ರಾತ್ರಿ ಮನೆಗೆ ಬಾರದ ಹಿನ್ನೆಲೆ ಪೋಷಕರು ‌ಹುಡುಕಾಟ ನಡೆಸಿದ್ದರು. ಇಂದು ಕುಂಬಾರ ಕಟ್ಟೆಯಲ್ಲಿ ಬಾಲಕರ ಮೃತ ದೇಹಗಳು‌ ಪತ್ತೆಯಾಗಿವೆ.

ಇದನ್ನೂ ಓದಿ:
ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು!

ಅರ್ಚಕನನ್ನು ದೇಗುಲದ ಆವರಣದಲ್ಲೇ ಹತ್ಯೆಗೈದ ದುಷ್ಕರ್ಮಿಗಳು; ಪುತ್ರನೇ ಕಾರಣವಂತೆ ತಂದೆಯ ಕೊಲೆಗೆ !

Click on your DTH Provider to Add TV9 Kannada