ನಿಂತಿಲ್ಲ ಡ್ರಗ್ಸ್ ಹಾವಳಿ: ಡಾರ್ಕ್ ವೆಬ್ ಮಾದಕ ಜಾಲದಿಂದ ಕೊರ್ಟ್ ದಾಖಲೆಯೆಂದು ಸ್ಪೀಡ್ ಪೋಸ್ಟ್ ಮೂಲಕ ಡ್ರಗ್ಸ್ ರವಾನೆ!
ಪುಸ್ತಕದ ಮೂಲಕ ಬೆಂಗಳೂರಿnಲ್ಲಿರುವ ಬೆಳ್ಳಂದೂರಿನ ಪಿಜಿಗೆ ಬರುತ್ತಿದ್ದ ಮಾದಕ ವಸ್ತುಗಳು ಅಲ್ಲಿಂದ ಮುಂದಕ್ಕೆ ಸೋಪ್, ಫೋಟೋ, ಗ್ರೀಟಿಂಗ್ ಕಾರ್ಡ್, ಇತರೆ ಪುಸ್ತಕಗಳ ಪುಟಗಳ ಮಧ್ಯೆ, ಗಿಫ್ಟ್ ಕವರ್ ಆಗಿ ರವಾನೆ ಯಾಗುತ್ತಿತ್ತು. ಸ್ವಿಗ್ಗಿ, ಜಿನಿ, ಡೊನ್ಜೋ ಮುಖಾಂತರ ಗ್ರಾಹಕರ ಮನೆಗೆ ರವಾನೆಯಾಗುತ್ತಿತ್ತು.
ಬೆಂಗಳೂರು: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮಾದಕ ವಸ್ತುಗಳಿಗೆ ಕಡಿವಾಣ ಹಾಕಲು ಹರಸಾಹಸ ಪಡುತ್ತಿದ್ದರೂ ದುಷ್ಕರ್ಮಿಗಳು ತಮ್ಮ ಆಟಾಟೋಪವನ್ನು ಉಂದುವರಿಸಿದ್ದಾರೆ. ತಾಜಾ ಪ್ರಕರಣದಲ್ಲಿ ಭಾರೀ ಮಾದಕ ಜಾಲವೊದನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಾರ್ಕ್ ವೆಬ್ ಮಾದಕ ಜಾಲದ ಮೂಲಕ ಮಾದಕ ವಸ್ತುಗಳು ದೇಶದೊಳಕ್ಕೆ ಎಂಟ್ರಿ ಆಗುತ್ತಿರುವುದು ಮತ್ತೊಮ್ಮೆ ದೃಢಪಟ್ಟಿದೆ. ದೇಶದೊಳಕ್ಕೆ ಬಂದ ಮೇಲೆ ಬಿಟ್ ಕಾಯಿನ್ ಮೂಲಕ ಸ್ಥಳೀಯ ಪೆಡ್ಲರ್‌ಗಳಿಂದ ಮಾದಕ ವಸ್ತುಗಳು ಖರೀದಿ ಆಗುತ್ತಿವೆ.
ಮೊದಲು ದೆಹಲಿಯಲ್ಲಿ ರಿಸೀವ್ ಆಗುವ ಮಾದಕ ವಸ್ತುಗಳು ಬಳಿಕ, ಪುಸ್ತಕ ಕೊರೆದು ಅದರೊಳಗೆ ಇಟ್ಟು ಡ್ರಗ್ಸ್ ರವಾನೆಗೊಳ್ಳುತ್ತಿವೆ. ಸ್ಪೀಡ್ ಪೋಸ್ಟ್ ಮೂಲಕ ಡ್ರಗ್ಸ್ ರವಾನೆ ಆಗುತ್ತಿದೆ. ಅಡ್ವೊಕೇಟ್ ಓರ್ವರ ಹೆಸರಿನಲ್ಲಿ ಕಳುಹಿಸಲಾಗುತ್ತಿದ್ದ ಪುಸ್ತಕವನ್ನು ಕೊರ್ಟ್ ದಾಖಲೆಯೆಂದು ಸ್ಪೀಡ್ ಪೋಸ್ಟ್ ಮೇಲೆ ಉಲ್ಲೇಖ ಮಾಡಲಾಗಿತ್ತು. ಹೀಗಾಗಿ ಅದನ್ನು ಯಾರು ಸಹ ಮುಟ್ಟುತ್ತಿರಲಿಲ್ಲ ಎಂದು ಕೃತ್ಯ ಬಯಲಿಗೆಳೆದ ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್ ಮೂಲದ ರವಿ ಮತ್ತು ರವಿ ಪ್ರಕಾಶ್ ಬಂಧಿತ ಆರೋಪಿಗಳು. ಬೆಳ್ಳಂದೂರಿನ ಪಿ.ಜಿ.ಯಲ್ಲಿದ್ದಾಗ ಸಿಸಿಬಿ ಪೊಲೀಸರು ಇವರಿಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ದೆಹಲಿಯಲ್ಲಿ ಕುಳಿತ ಕಿಂಗ್‌ಪಿನ್‌ನಿಂದ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ತನ್ನ ಯುವಕರನ್ನು ಬಿಟ್ಟು ಡ್ರಗ್ಸ್ ದಂಧೆ ಮಾಡುತ್ತಿದ್ದ. ಬೆಳ್ಳಂದೂರಿನ ಪಿಜಿಯಲ್ಲಿ ವಾಸ ಮಾಡುತ್ತಿದ್ದ ಆರೋಪಿಗಳು ಎಂಡಿಎಂಎ, ಎಕ್ಸ್‌ಟಸಿ, ಎಲ್‌ಎಸ್‌ಡಿ, ಚರಸ್, ಹೈಡ್ರೋ ಗಾಂಜಾ ಶೇಖರಿಸಿಟ್ಟುಕೊಂಡಿದ್ದರು.
ದೆಹಲಿ ಟು ಬೆಂಗಳೂರು ಕಾಂಟ್ಯಾಕ್ಟ್ಗೆ ತಮ್ಮದೇ ಮಾದರಿ ಕಂಡುಕೊಂಡಿದ್ದರು. ವಾಟ್ಸಾಪ್, ನಾರ್ಮಲ್ ಕಾಲ್, Wickr-Me, VoIP, Session ಅಪ್ಲಿಕೇಷನ್ ಮೂಲಕ ಕರೆ ಮಾಡಿಕೊಂಡು ಸಂಪರ್ಕ ಸಾಧಿಸಿಕೊಳ್ಳುತ್ತಿದ್ದರು. ದೆಹಲಿಯಲ್ಲಿರುವ ಸೂತ್ರಧಾರಿ ವ್ಯಕ್ತಿ Wickr-Me ಮೂಲಕ ಆರ್ಡರ್ ಪಡೆಯುತ್ತಿದ್ದ.
ಬಳಿಕ ಆತನ ಸೂಚನೆ ಮೇರೆಗೆ ಆರೋಪಿಗಳಿಂದ ಡೆಲಿವರಿಯಾಗುತ್ತಿತ್ತು. ಪುಸ್ತಕದ ಮೂಲಕ ಪಿಜಿಗೆ ಬರುತ್ತಿದ್ದ ಮಾದಕ ವಸ್ತುಗಳು ಅಲ್ಲಿಂದ ಮುಂದಕ್ಕೆ ಸೋಪ್, ಫೋಟೋ, ಗ್ರೀಟಿಂಗ್ ಕಾರ್ಡ್, ಇತರೆ ಪುಸ್ತಕಗಳ ಪುಟಗಳ ಮಧ್ಯೆ, ಗಿಫ್ಟ್ ಕವರ್ ಆಗಿ ರವಾನೆ ಯಾಗುತ್ತಿತ್ತು. ಸ್ವಿಗ್ಗಿ, ಜಿನಿ, ಡೊನ್ಜೋ ಮುಖಾಂತರ ಗ್ರಾಹಕರ ಮನೆಗೆ ರವಾನೆಯಾಗುತ್ತಿತ್ತು.
ಸಿಸಿಬಿ ಪೊಲೀಸರು ಬಂಧಿತರಿಂದ 300 ಎಂಡಿಎಂಎ ಎಕ್ಸೆಟೆಸಿ ಮಾತ್ರೆ, 100 ಎಲ್ ಎಸ್ ಡಿ, 350 ಗ್ರಾಂ ಚರಸ್, 1.5 ಕೆಜಿ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸುತಿದ್ದ ಗಿಫ್ಟ್ ಪ್ಯಾಕ್ಸ್, ಸ್ವಿಗೀ ಕಂಪನಿಯ ಟೀ ಶರ್ಟ್ಗಳು, ಡಂಝೋ ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಗಮನಾರ್ಹವೆಂದರೆ ಅರೋಪಿಗಳು ಸ್ವಿಗೀಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಆದರೆ ಸ್ವಿಗೀ ಟೀ ಶರ್ಟ್ ಬಳಸಿ, ಕುಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Novel ways of drug delivery! CCB arrest 2 drug peddlers..using Dunzo/Swiggy, delivered drugs packed in Bday gift box, hidden in Books..seized Rs 60 lakhs worth of Ecstacy pills, LSD, Ganja..procured through DARKNET,using BITCOINS..used Wickr,Session app to communicate..@CPBlr pic.twitter.com/4Jw56UGOgR
— Sandeep Patil IPS (@ips_patil) October 22, 2021
(bengaluru ccb police unearth darkweb drugs net operating from new delhi arrest 2 youths)
Published On - 1:42 pm, Fri, 22 October 21