AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಭಾರಿ ಮಳೆ; ಗುಡಿಬಂಡೆ ಪಟ್ಟಣದಲ್ಲಿ ಕೆರೆಗಳಂತಾದ ರಸ್ತೆಗಳು

ಚಿಕ್ಕಬಳ್ಳಾಪುರ: ಭಾರಿ ಮಳೆ; ಗುಡಿಬಂಡೆ ಪಟ್ಟಣದಲ್ಲಿ ಕೆರೆಗಳಂತಾದ ರಸ್ತೆಗಳು

TV9 Web
| Edited By: |

Updated on: Oct 23, 2021 | 9:37 AM

Share

Chikkaballapur: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ವಿಪರೀತ ಮಳೆಯ ಪರಿಣಾಮ ವಾಹನ ಸವಾರರು, ನಿವಾಸಿಗಳು ಅಕ್ಷರಶಃ ಪರದಾಡುವಂತಾಗಿದೆ. ಇಂದು ಕೂಡ ಚಿಕ್ಕಬಳ್ಳಾಪುರಕ್ಕೆ ಎಲ್ಲೊ ಅಲರ್ಟ್ ಘೋಷಿಸಲಾಗಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾರಿ ಮಳೆಯ ಕಾರಣ, ಗುಡಿಬಂಡೆ ಪಟ್ಟಣದಲ್ಲಿ ಮನೆಗಳು, ಮಸೀದಿಗೆ ನೀರು ನುಗ್ಗಿದೆ. ರಸ್ತೆಗಳು ಕೆರೆಗಳಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯ ಮೇಲೆ ನೀರು ನಿಂತಿರುವ ಕಾರಣ, ಅಪಾಯ ಸಂಭವಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅನಿವಾರ್ಯ ಕಾರಣಗಳಿಂದ ವಾಹನ ಸವಾರರು ನೀರು ನಿಂತಿರುವ ರಸ್ತೆಯ ಮೇಲೆಯೇ ಸಂಚರಿಸುತ್ತಿದ್ದಾರೆ. ಮನೆಗಳಿಗೆ ಹಾಗೂ ಮಸೀದಿಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ವರದಿಯಲ್ಲಿ ಇಂದು ಚಿಕ್ಕಬಳ್ಳಾಪುರಕ್ಕೆ ಎಲ್ಲೊ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಅ. 23ರವರೆಗೆ ಕರ್ನಾಟಕದಲ್ಲಿ ಮಳೆಯಾಗಲಿದೆ. ನಂತರ ಅಕ್ಟೋಬರ್ 25 ಮತ್ತು 26ರಂದು ವಿಪರೀತ ಮಳೆಯಾಗಲಿದೆ. ಹವಾಮಾನ ತಜ್ಞರ ಪ್ರಕಾರ ಅ. 25 ಅಥವಾ 26ರಂದು ಹಿಂಗಾರು ಮಳೆ ಶುರುವಾಗಲಿದೆ. ಇಂದಿನಿಂದ ಅ. 26ರವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಅ. 24ರಂದು ಮಳೆ ಕೊಂಚ ಕಡಿಮೆ ಇರಲಿದೆ. ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಕಡಿಮೆಯಾಗಿದ್ದು, ಇಂದಿನಿಂದ ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಮನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ.

ಇದನ್ನೂ ಓದಿ:

ಯೂಟ್ಯೂಬರ್​ಗಳ ಮೇಲೆ ಮಾನಹಾನಿ ಕೇಸ್​ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್​ ಹೇಳಿದ್ದೇನು?

BMTC Revenue: ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿಯಿಂದ ಟಾರ್ಗೆಟ್ ಟಾರ್ಚರ್!

ಮ್ಯುಚುವಲ್ ಫಂಡ್​​​​ನ ಮ್ಯಾನೇಜರ್​ಗಳನ್ನು ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಒಬ್ಬ ನುರಿತ ಅಡುಗೆಯವನಿಗೆ ಹೋಲಿಸುತ್ತಾರೆ