ಹಾನಗಲ್ ಉಪಚುನಾವಣೆ | ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದರೂ ರೈತ ಮತ್ತು ಜನಸಾಮಾನ್ಯರ ಆದಾಯದಲ್ಲಿ ಏರಿಕೆಯಾಗಿಲ್ಲ: ಡಿಕೆ ಶಿವಕುಮಾರ

ಮಹಾಮಾರಿಯಿಂದ ಹಾಹಾಕಾರ ಸೃಷ್ಟಿಯಾಗಿ ಸೋಂಕಿಗೀಡಾದವರು ಸಹಾಯ ಯಾಚಿಸುತ್ತಿದ್ದಾಗ, ಸರ್ಕಾರಗಳು ಯಾರಿಗಾದರೂ ಉಚಿತವಾಗಿ ಔಷಧಿ ಒದಗಿಸಿದವಾ? ಕೊವಿಡ್ ಗೆ ಬಲಿಯಾದವರಿಗೆ ಪರಿಹಾರ ನೀಡಿದ್ದಾರಾ? ಎಂದು ಶಿವಕುಮಾರ್ ಕೇಳಿದರು

ಹಾನಗಲ್ ವಿಧಾನ ಸಭೆ ಉಪಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ ಯುನಿಟ್ನ ಘಟಾನುಘಟಿ ನಾಯಕರು ಶುಕ್ರವಾರದಂದು ಜೋರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರಿಗೆ ಅಚ್ಛೇ ದಿನಗಳು ಎಲ್ಲಿ ಅಂತ ಗೇಲಿ ಮಾಡಿದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಸಹ ಪ್ರಧಾನಿಗಳನ್ನೇ ಟಾರ್ಗೆಟ್ ಮಾಡಿದರು. ಪಕೋಡ ಮಾರುವುದನ್ನು ನಿರುದ್ಯೋಗಿಗಳು ಕಾಯಕ ಮಾಡಿಕೊಂಡರೆ ತಪ್ಪಿಲ್ಲ ಅಂತ ಹಿಂದೆ ಮೋದಿಯವರು ಹೇಳಿದ್ದನ್ನು ಪ್ರಸ್ತಾಪಿಸುತ್ತಾ ಭಾಷಣ ಆರಂಭಿಸಿದ ಶಿವಕುಮಾರ ಅವರು, ತಾವು ಪಕೋಡಾ ತಯಾರಿಸಿ ಮಾರುವ ಕೆಲಸ ಮಾಡುವ ನಿರ್ಧಾರ ಮಾಡಿಕೊಂಡಿದ್ದರೂ, ಬೇಳೆಯ ಬೆಲೆ ರೂ. 60 ರಿಂದ ರೂ. 156 ಮತ್ತು ಎಣ್ಣೆಯ ಬೆಲೆ ರೂ. 99 ರಿಂದ ರೂ. 200 ಆಗಿದ್ದರಿಂದ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಬೆಲೆಗಳು ಗಗನಕ್ಕೇರಿರುವುದನ್ನು ಮತ್ತು ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಬಗ್ಗೆ ಪ್ರಧಾನಿ ಮೋದಿಯವರು ನೀಡಿದ ಭರವಸೆಯನ್ನು ಹಾಗೆ ವಿಡಂಬನಾತ್ಮಕವಾಗಿ ಶಿವಕುಮಾರ್ ಹೇಳಿದರು.

ಚರ್ಚೆ ಮಾಡಲು ತಾನು ಬಂದಿಲ್ಲ, ಆದರೆ ವಸ್ತುಸ್ಥಿತಿಯನ್ನು ಜನರ ಮುಂದಿಡಲು ಬಂದಿರುವುದಾಗಿ ಹೇಳಿದ ಡಿಕೆಶಿ, ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿರುವಾಗ ಜನರ ತಲಾ ಆದಾಯನಲ್ಲಿ ಏನಾದರೂ ಹೆಚ್ಚಾಗಿದೆಯಾ, ರೈತರು ತಮ್ಮ ಆದಾಯದಲ್ಲಿ ಹೆಚ್ಚಳ ಕಂಡಿದ್ದಾರಾ, ಯಾರಿಗಾದರೂ ನೌಕರಿ ಸಿಕ್ಕಿದೆಯಾ ಎಂದು ಪ್ರಶ್ನಿಸಿದರು.

ಕೊರೊನಾ ಮಹಾಮಾರಿಯಿಂದ ಹಾಹಾಕಾರ ಸೃಷ್ಟಿಯಾಗಿ ಸೋಂಕಿಗೀಡಾದವರು ಸಹಾಯ ಯಾಚಿಸುತ್ತಿದ್ದಾಗ, ಸರ್ಕಾರಗಳು ಯಾರಿಗಾದರೂ ಉಚಿತವಾಗಿ ಔಷಧಿ ಒದಗಿಸಿದವಾ? ಕೊವಿಡ್ ಗೆ ಬಲಿಯಾದವರಿಗೆ ಪರಿಹಾರ ನೀಡಿದ್ದಾರಾ? ಎಂದು ಶಿವಕುಮಾರ್ ಕೇಳಿದರು.

ಮಹಾಮಾರಿ ಉಲ್ಬಣಿಸಿದಾಗ ಗುಳೆ ಎದ್ದು ಬಂದವರು ತಮ್ಮ ಊರುಗಳಿಗೆ ಹೋಗಿದ್ದು ಹೇಗೆ ಮತ್ತು ಪಿಡುಗಿನ ತೀವ್ರತೆ ಕಡಿಮೆಯಾದ ಬಳಿಕ ಪುನಃ ಬೆಂಗಳೂರಿಗೆ ಬಂದಿದ್ದು ಹೇಗೆ ಎಂದು ಅವರನ್ನೇ ಕೇಳಿದಾಗ ಕಾಂಗ್ರೆಸ್ ಪಕ್ಷ ನೀಡಿದ ಒಂದು ಕೋಟಿ ರೂಪಾಯಿಗಳ ನೆರವಿನಿಂದ ತಮಗೆ ಅದು ಸಾಧ್ಯವಾಯಿತು ಎಂದರೆಂದು ಶಿವಕುಮಾರ ಹೇಳಿದರು.

ಇದನ್ನೂ ಓದಿ:  India vs Australia: ಅತ್ತ ಪಂದ್ಯ ನಡೆಯುತ್ತಿದ್ದರೆ ಇತ್ತ ಧೋನಿಯಿಂದ ರಿಷಭ್ ಪಂತ್​ಗೆ ಭರ್ಜರಿ ಕ್ಲಾಸ್: ವಿಡಿಯೋ ವೈರಲ್

Click on your DTH Provider to Add TV9 Kannada