ಲೀಟರ್ ಪೆಟ್ರೋಲ್ ಬೆಲೆ ರೂ.112 ಆಗಿದ್ದೇ ಅಚ್ಛೇ ದಿನಗಳಾ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ!
ತಮ್ಮ ಎಲ್ಲ ಭಾಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವ ಸಿದ್ದರಾಮಯ್ಯ ಶುಕ್ರವಾರವೂ ಅದನ್ನು ಮುಂದುವರಿಸಿದರು. ಮೋದಿಯವರ ಚುನಾವಣಾ ಘೋಷವಾಕ್ಯ ಅಚ್ಚೇ ದಿನ್ ಅನ್ನು ಗೇಲಿ ಮಾಡಿದ ಅವರು ಎಲ್ಲಿವೆ ಅಚ್ಛೇ ದಿನ್ ಎಂದು ಪ್ರಶ್ನಿಸಿದರು.
ಹಾನಗಲ್ ಮತ್ತು ಸಿಂಧಗಿ ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗಳಿಗೆ ರಾಜಕೀಯ ಪಕ್ಷಗಳ ಪ್ರಚಾರ ಅಬ್ಬರದಿಂದ ಸಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟಕ್ಕೆ ಇಳಿದು ಪ್ರಚಾರ ನಡೆಸುತ್ತಿದ್ದಾರೆ. ಈ ಚುನಾವಣೆಗಳನ್ನು ಎಲ್ಲ ಮೂರು ಪಕ್ಷಗಳು ಪ್ರತಿಷ್ಠೆಯನ್ನಾಗಿ ಪರಿಗಣಿಸಿವೆ. ಶುಕ್ರವಾರದಂದು ಕಾಂಗ್ರೆಸ್ ಹಿರಿಯ ನಾಯಕರು ಹಾವೇರಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಮಾಜಿ ಮುಖ್ಯಮಂತ್ರಿ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ತಮ್ಮ ಎಲ್ಲ ಭಾಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವ ಸಿದ್ದರಾಮಯ್ಯ ಶುಕ್ರವಾರವೂ ಅದನ್ನು ಮುಂದುವರಿಸಿದರು. ಮೋದಿಯವರ ಚುನಾವಣಾ ಘೋಷವಾಕ್ಯ ಅಚ್ಚೇ ದಿನ್ ಅನ್ನು ಗೇಲಿ ಮಾಡಿದ ಅವರು ಎಲ್ಲಿವೆ ಅಚ್ಛೇ ದಿನ್ ಎಂದು ಪ್ರಶ್ನಿಸಿದರು. ಅಚ್ಛೇ ದಿನ್ ಗಳನ್ನು ಮೈಕ್ರೋಸ್ಕೋಪ್ ಮೂಲಕ ಹುಡುಕಬೇಕು ಅಂತ ಹೇಳಿ ಖುದ್ದು ಗೇಲಿಗೊಳಗಾಗುವುದರಲ್ಲಿದ್ದ ಸಿದ್ದರಾಮಯ್ಯನವರನ್ನು ಅವರ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತ ದುರ್ಬೀನು ಅಂತ ಹೇಳಿ ಸರಿಮಾಡಿದರು!
ಮನ್ಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ, ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ರೂ. 47 ಆಗಿತ್ತು. ಈಗ ಅದು 100 ರೂ. ಗಡಿ ದಾಟಿದೆ ಎಂದ ಸಿದ್ದರಾಮಯ್ಯ, ಅದರ ಮೇಲಿನ ತೆರಿಗೆ ರೂ. 3.45 ರಿಂದ ರೂ. 31.84 ತಲುಪಿದ್ದು 10 ಪಟ್ಟು ಹೆಚ್ಚಳವಾಗಿದೆ ಎಂದರು.
ಹಾಗೆಯೇ, ಸಿಂಗ್ ಪ್ರಧಾನಿಯಾಗಿದ್ದಾಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 70 ಇದ್ದಿದ್ದು ಈಗ ರೂ. 112 ರೂ. ಆಗಿದೆ. ಅದರ ಮೇಲಿದ್ದ ರೂ. 9.20 ತೆರಿಗೆ ಈಗ ರೂ. 32.98 ಆಗಿದೆ. ಅಚ್ಛೇ ದಿನ್ ಅಂದ್ರೆ ಇದೇನಾ ಮೋದಿಯವರೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಧುರೀಣರು ಎತ್ತಿನ ಗಾಡಿ ಮತ್ತು ಟಾಂಗಾಗಳ ಮೇಲೆ ಪ್ರತಿಭಟನೆ ನಡೆಸಿ, ತೆರಿಗೆಯನ್ನು ರಾಜ್ಯ ಸರ್ಕಾರ ರೂ. 10 ಕಡಿಮೆ ಮಾಡಲಿ, ಕೇಂದ್ರ ಸರ್ಕಾರಕ್ಕೆ ರೂ. 10 ಕಡಿಮೆ ಮಾಡಲು ಅಗ್ರಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ಅವಲತ್ತುಕೊಂಡರೂ ಅವರು ಕ್ಯಾರೆ ಅನ್ನಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Viral Video: ಇಬ್ಬರು ಮಹಿಳೆಯರ ನಡುವೆ ಜಟಾಪಟಿ; ರಸ್ತೆಯಲ್ಲಿ ಬಿದ್ದು ಉರುಳಾಡಿದ ವಿಡಿಯೋ ವೈರಲ್