ಯೂಟ್ಯೂಬರ್​ಗಳ ಮೇಲೆ ಮಾನಹಾನಿ ಕೇಸ್​ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್​ ಹೇಳಿದ್ದೇನು?

ಕೆಲವು ಯೂಟ್ಯೂಬರ್​ಗಳ ಮೇಲೆ ಸಮಂತಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕೇಸ್​ ವಿಚಾರಣೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಸಮಂತಾ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲ ಕೋರ್ಟ್​ ಒಪ್ಪಿಕೊಂಡಿಲ್ಲ.

ಯೂಟ್ಯೂಬರ್​ಗಳ ಮೇಲೆ ಮಾನಹಾನಿ ಕೇಸ್​ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್​ ಹೇಳಿದ್ದೇನು?
ಸಮಂತಾ

ನಟಿ ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲಿ ಎಷ್ಟು ಸುಳ್ಳು, ಎಷ್ಟು ನಿಜ ಎಂಬುದು ತಿಳಿದಿಲ್ಲ. ನಾಗ ಚೈತನ್ಯ ಜೊತೆಗಿನ ಕಿರಿಕ್​, ವಿಚ್ಛೇದನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಬಣ್ಣಬಣ್ಣದ ಗಾಸಿಪ್​ಗಳು ಕೇಳಿಬಂದಿದ್ದು ಸಮಂತಾಗೆ ನಿಜಕ್ಕೂ ಬೇಸರ ಮೂಡಿಸಿದೆ. ಹಾಗಾಗಿ ಅವರು ಕಾನೂನು ಸಮರ ಸಾರಿದ್ದಾರೆ. ತಮ್ಮ ವಿರುದ್ಧ ಮಾನಹಾನಿ ಆಗುವಂತಹ ಮಾಹಿತಿಯನ್ನು ಪ್ರಸಾರ ಮಾಡಿದ ಯೂಟ್ಯೂಬರ್​ಗಳ ಮೇಲೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯದಲ್ಲಿ ಸಮಂತಾಗೆ ಹಿನ್ನಡೆ ಆಗಿದೆ.

ಹೈದರಾಬಾದ್​ನ ಸ್ಥಳೀಯ ನ್ಯಾಯಾಲಯದಲ್ಲಿ ಸಮಂತಾ ಈ ಮೊಕದ್ದಮೆ ಹೂಡಿದ್ದಾರೆ. ಅಲ್ಲದೇ ಈ ಕೇಸ್​ ವಿಚಾರಣೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಸಮಂತಾ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲ ಕೋರ್ಟ್​ ಒಪ್ಪಿಕೊಂಡಿಲ್ಲ. ಸೆಲೆಬ್ರಿಟಿ ಎಂದಮಾತ್ರಕ್ಕೆ ತುರ್ತಾಗಿ ಈ ಕೇಸ್​ನ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನಿಯಮದ ಪ್ರಕಾರವೇ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಸೆಲೆಬ್ರಿಟಿಗಳು ಸಾರ್ವಜನಿಕ ವಲಯದಲ್ಲಿ ಇರುತ್ತಾರೆ. ಆ ಕಾರಣದಿಂದ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡುವುದು ಕೂಡ ಸಹಜ. ಅದಕ್ಕೆಲ್ಲ ಮಾನಹಾನಿ ಮೊಕದ್ದಮೆ ದಾಖಲಿಸುವ ಬದಲು, ಅಂಥ ಮಾಹಿತಿ ಪ್ರಸಾರ ಮಾಡಿದವರು ಕ್ಷಮೆ ಕೇಳಲಿ ಅಂತ ಸಮಂತಾ ಒತ್ತಾಯಿಸಬಹುದು ಅಂತ ಕೋರ್ಟ್​ ಹೇಳಿದೆ ಎಂದು ವರದಿ ಆಗಿದೆ.

ನಾಗ ಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಸಮಂತಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್​ ಆಗಿದ್ದಾರೆ. ಅಲ್ಲದೇ ಹಲವು ಸ್ಥಳಗಳಿಗೆ ಅವರು ಪ್ರವಾಸ ಕೈಗೊಂಡಿದ್ದಾರೆ. ಪ್ರಕೃತಿ ಸೌಂದರ್ಯದ ತಾಣಗಳ ಜೊತೆಗೆ ಆಧ್ಯಾತ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಪೂಜೆ, ಹೋಮ-ಹವನ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮಹಾರಿಷಿ ಮಹೇಶ್​ ಯೋಗಿ ಆಶ್ರಮದ ಧ್ಯಾನ ಕೇಂದ್ರಕ್ಕೆ ತೆರಳಿದ್ದರು. ಆ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿ ಯಶಸ್ಸಿನ ಬಳಿಕ ಸಮಂತಾಗೆ ಬೇಡಿಕೆ ಹೆಚ್ಚಿದೆ. ಸದ್ಯ ಅವರು ತೆಲುಗಿನ ‘ಶಾಕುಂತಲಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾ ಕೂಡ ಅನೌನ್ಸ್​ ಆಗಿದೆ. ಅದರ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ.

ಇದನ್ನೂ ಓದಿ:

Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ

ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್​ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ

Click on your DTH Provider to Add TV9 Kannada