ರಮ್ಯಾಗೆ ಸಖತ್​ ಇಷ್ಟವಾಯ್ತು ‘ರತ್ನನ್​ ಪ್ರಪಂಚ’; ಈ ಚಿತ್ರಕ್ಕೆ ಅವರೇ ನಾಯಕಿ ಆಗಬೇಕಿತ್ತು, ಆದರೆ…

Rathnan Prapancha: ‘ರತ್ನನ್​ ಪ್ರಪಂಚ’ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್​ ಕಥೆ ಇದೆ. ಕ್ಲೈಮ್ಯಾಕ್ಸ್​ ಕೂಡ ಸಖತ್​ ಭಾವುಕವಾಗಿದೆ. ಆ ಕಾರಣಕ್ಕಾಗಿ ರಮ್ಯಾ ಒಂದು ವಿಶೇಷ ಮಾತು ತಿಳಿಸಿದ್ದಾರೆ.

ರಮ್ಯಾಗೆ ಸಖತ್​ ಇಷ್ಟವಾಯ್ತು ‘ರತ್ನನ್​ ಪ್ರಪಂಚ’; ಈ ಚಿತ್ರಕ್ಕೆ ಅವರೇ ನಾಯಕಿ ಆಗಬೇಕಿತ್ತು, ಆದರೆ...
ಉಮಾಶ್ರೀ, ಧನಂಜಯ, ರಮ್ಯಾ

ಡಾಲಿ ಧನಂಜಯ ನಟನೆಯ ‘ರತ್ನನ್​ ಪ್ರಪಂಚ’ ಸಿನಿಮಾ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಅ.22ರಂದು ಈ ಚಿತ್ರ ರಿಲೀಸ್​ ಆಗಿದೆ. ಮೊದಲಿನಿಂದಲೂ ‘ರತ್ನನ್​ ಪ್ರಪಂಚ’ ಬಗ್ಗೆ ನಟಿ ರಮ್ಯಾ ಆಸಕ್ತಿ ಹೊಂದಿದ್ದರು. ಕೆಲವೇ ದಿನಗಳ ಹಿಂದೆ ಅವರು ಟ್ರೇಲರ್​ ನೋಡಿ ಮೆಚ್ಚಿಕೊಂಡಿದ್ದರು. ಈಗ ಅವರಿಗೆ ಸಿನಿಮಾ ಕೂಡ ಇಷ್ಟ ಆಗಿದೆ. ತಮ್ಮ ಅನಿಸಿಕೆಯನ್ನು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಹಂಚಿಕೊಂಡಿದ್ದಾರೆ. ಅಚ್ಚರಿ ಏನೆಂದರೆ, ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡುವಂತೆ ತಮಗೆ ಆಫರ್ ಬಂದಿತ್ತು ಎಂಬ ವಿಚಾರವನ್ನು ರಮ್ಯಾ ಈಗ ಬಾಯಿ ಬಿಟ್ಟಿದ್ದಾರೆ.

‘ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಈಗ ರತ್ನನ್​ ಪ್ರಪಂಚ ಸಿನಿಮಾ ನೋಡುವ ಸಮಯ. ಈ ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡುವಂತೆ ನನಗೆ ಆಫರ್​ ನೀಡಲಾಗಿತ್ತು. ನಾನೇನು ಮಿಸ್​ ಮಾಡಿಕೊಂಡೆ ಅಂತ ನೋಡೋಣ’ ಎಂದು ಸಿನಿಮಾ ವೀಕ್ಷಿಸುವುದಕ್ಕೂ ಮುನ್ನ ರಮ್ಯಾ ಬರೆದುಕೊಂಡಿದ್ದರು. ಸಿನಿಮಾ ನೋಡಿದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ಕಲಾವಿದರಾದ ಡಾಲಿ ಧನಂಜಯ, ಉಮಾಶ್ರೀ, ಪ್ರಮೋದ್​, ಶ್ರುತಿ, ವೈನಿಧಿ, ಅಚ್ಯುತ್​ ಕುಮಾರ್​, ಅನು ಪ್ರಭಾಕರ್​, ರವಿಶಂಕರ್​ ಎಲ್ಲರೂ ಬ್ರಿಲಿಯಂಟ್​. ರೆಬಾ ಮೋನಿಕಾ ಅವರೇ, ನಾನು ನಿಮಗಿಂತಲೂ ಉತ್ತಮವಾಗಿ ನಟಿಸುತ್ತಿರಲಿಲ್ಲ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ಮುಡಿಗೆ ಇನ್ನೊಂದು ಗರಿ ಸೇರಿದೆ. ನಿರ್ದೇಶಕ ರೋಹಿತ್​ ಪದಕಿ ಅವರ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ರಮ್ಯಾ ಪೋಸ್ಟ್​ ಮಾಡಿದ್ದಾರೆ.

ಈ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್​ ಕಥೆ ಇದೆ. ತಾಯಂದಿರ ಪಾತ್ರದಲ್ಲಿ ಉಮಾಶ್ರೀ ಮತ್ತು ಶ್ರುತಿ ಅಭಿನಯ ಮನಸೆಳೆಯುವಂತಿದೆ. ಕ್ಲೈಮ್ಯಾಕ್ಸ್​ ಕೂಡ ಸಖತ್​ ಭಾವುಕವಾಗಿದೆ. ಆ ಕಾರಣಕ್ಕಾಗಿ ರಮ್ಯಾ ಒಂದು ವಿಶೇಷ ಮಾತು ತಿಳಿಸಿದ್ದಾರೆ. ‘ಅವಶ್ಯವಾಗಿ ಒಂದಷ್ಟು ಟಿಶ್ಯೂ ಇಟ್ಟುಕೊಳ್ಳಿ. ಕೊನೇ ದೃಶ್ಯದಲ್ಲಿ ಮನಸಾರೆ ಅತ್ತುಬಿಡಿ’ ಎಂದು ಅವರು ಚಿತ್ರದ ಕ್ಲೈಮ್ಯಾಕ್ಸ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಂದು ವೇಳೆ ರಮ್ಯಾ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದರೆ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗುತ್ತಿತ್ತು.

ರಮ್ಯಾ ಜೊತೆ ನಟಿಸುವ ಆಸೆ ಇದೆ ಎಂದು ಡಾಲಿ ಧನಂಜಯ​ ಅವರು ಇತ್ತೀಚೆಗೆ ಟಿವಿ9 ಡಿಜಿಟಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆ ಆಸೆ ಮುಂದಿನ ದಿನಗಳಲ್ಲಾದರೂ ಈಡೇರಲಿ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಧನಂಜಯ ನಟನೆಯ ‘ಸಲಗ’ ಸಿನಿಮಾ ಅ.14ರಂದು ಚಿತ್ರಮಂದಿರದಲ್ಲಿ ತೆರೆಕಂಡು ಸೂಪರ್​ ಹಿಟ್​ ಆಗಿದೆ. ಅದರ ಬೆನ್ನಲ್ಲೇ ಅವರಿಗೆ ‘ರತ್ನನ್​ ಪ್ರಪಂಚ’ ಮೂಲಕವೂ ಗೆಲುವು ಸಿಕ್ಕಿದೆ.

ಇದನ್ನೂ ಓದಿ:

Rathnan Prapancha Movie Review: ಸಂಬಂಧಗಳ ಅರ್ಥ ತಿಳಿಯಲು ಪ್ರಪಂಚ ಸುತ್ತಿದ ರತ್ನ; ಧನಂಜಯ ಖಾತೆಗೆ ಇನ್ನೊಂದು ಭಿನ್ನ ಸಿನಿಮಾ

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Click on your DTH Provider to Add TV9 Kannada