AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ವಿಷಯವನ್ನು ಬಹಿರಂಗ ಪಡಿಸುವುದಕ್ಕೂ ಮುನ್ನ ಅವರ ಸಂಸಾರದ ಬಗ್ಗೆ ಶ್ರೀರೆಡ್ಡಿ ತುಂಬ ಕಾಳಜಿಯ ಮಾತುಗಳನ್ನು ಆಡಿದ್ದರು. ಈಗ ಸಮಂತಾರ ಸ್ಟೈಲಿಸ್ಟ್​ ಪ್ರೀತಮ್​ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ
ಸಮಂತಾ, ಶ್ರೀರೆಡ್ಡಿ
TV9 Web
| Edited By: |

Updated on: Oct 18, 2021 | 9:59 AM

Share

ನಟಿ ಸಮಂತಾ ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ನೀಡಿರುವುದು ಅವರ ಅಭಿಮಾನಿಗಳಿಗೆ ಸಖತ್​ ಬೇಸರ ಮೂಡಿಸಿದೆ. ಅವರಿಬ್ಬರೂ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಕೆಲವು ದಿನಗಳು ಕಳೆದಿವೆ. ಆದರೂ ಅದರ ಕುರಿತಾದ ಚರ್ಚೆ ಇನ್ನೂ ನಿಂತಿಲ್ಲ. ಇಬ್ಬರ ನಡುವೆ ವೈಮನಸ್ಸು ಮೂಡಲು ಕಾರಣ ಏನಿರಬಹುದು ಎಂದು ಅನೇಕರು ಕೆದಕುತ್ತಿದ್ದಾರೆ. ಸಮಂತಾ-ನಾಗಚೈತನ್ಯ ಡಿವೋರ್ಸ್​ ಬಗ್ಗೆ ಕಾಂಟ್ರವರ್ಸಿ ನಟಿ ಶ್ರೀರೆಡ್ಡಿ ಮಾತನಾಡಿದ್ದಾರೆ. ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಸಮಂತಾರ ಸ್ಟೈಲಿಸ್ಟ್​ ಆಗಿರುವ ಪ್ರೀತಮ್​ ಜುಕಲ್ಕರ್​ ಅವರನ್ನು ಸಲಿಂಗಕಾಮಿ ಎಂದು ಶ್ರೀರೆಡ್ಡಿ ಅವಹೇಳನ ಮಾಡಿದ್ದಾರೆ.

ಸ್ಟೈಲಿಸ್ಟ್​​ ಪ್ರೀತಮ್​ ಜೊತೆ ಸಮಂತಾ ಹೆಚ್ಚು ಕ್ಲೋಸ್​ ಆಗಿದ್ದಾರೆ. ಅದಕ್ಕೆ ಅನೇಕ ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಪ್ರೀತಮ್​ ಜೊತೆಗಿನ ಆಪ್ತತೆಯ ಕಾರಣದಿಂದಲೇ ನಾಗ ಚೈತನ್ಯ ಜೊತೆ ಸಮಂತಾ ಕಿರಿಕ್​ ಮಾಡಿಕೊಂಡರು ಎಂಬುದು ಕೆಲವರ ವಾದ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಪ್ರೀತಮ್​ ಅವರು ಟ್ರೋಲಿಗರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಆದರೆ ಅವರ ಬಗ್ಗೆ ಶ್ರೀರೆಡ್ಡಿ ಬೇರೆ ವಾದವನ್ನೇ ಮುಂದಿಟ್ಟಿದ್ದಾರೆ.

‘ಪ್ರೀತಮ್​ ಓರ್ವ ಸಲಿಂಗಕಾಮಿ. ಆತನ ಜೊತೆ ಸಮಂತಾ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಹಾಗಾಗಿ ಅವರು ಈ ಡಿವೋರ್ಸ್​ಗೆ ಕಾರಣ ಅಲ್ಲ’ ಎಂದು ಶ್ರೀರೆಡ್ಡಿ ಹೇಳಿದ್ದಾರೆ ಎಂದು ಅನೇಕ ಕಡೆಗಳಲ್ಲಿ ವರದಿ ಆಗಿದೆ. ಈ ಮಾತಿಗೆ ಪ್ರೀತಮ್​ ಮತ್ತು ಸಮಂತಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಈ ವಿಚ್ಛೇದನಕ್ಕೆ ತಾವೇ ಕಾರಣ ಎಂಬ ಗಾಸಿಪ್​ ಹಬ್ಬಿದಾಗ ಪ್ರೀತಮ್ ಅವರು ಚಿಂತೆಗೆ ಒಳಗಾಗಿದ್ದರು. ‘ನಾಗ ಚೈನತ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಬಹುದಿತ್ತು. ನನ್ನ ಪಾಲಿಗೆ ಸಮಂತಾ ಸಹೋದರಿ ಇದ್ದಂತೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ವಿಷಯವನ್ನು ಬಹಿರಂಗ ಪಡಿಸುವುದಕ್ಕೂ ಮುನ್ನ ಅವರ ಸಂಸಾರದ ಬಗ್ಗೆ ಶ್ರೀರೆಡ್ಡಿ ತುಂಬ ಕಾಳಜಿಯ ಮಾತುಗಳನ್ನು ಆಡಿದ್ದರು. ‘ನೀವಿಬ್ಬರೂ ಒಂದಾಗಿ ಇರಬೇಕು ಅಂತ ನಾವೆಲ್ಲರೂ ಬಯಸುತ್ತೇವೆ. ನೀವು ಎಲ್ಲರಿಗೂ ಸ್ಫೂರ್ತಿ ತುಂಬುವಂತಹ ಜೋಡಿ ಆಗಿರಬೇಕು. ನಿಮ್ಮನ್ನು ನೋಡಿದರೆ ಅನೇಕರಿಗೆ ಸ್ಫೂರ್ತಿ ಬರುತ್ತದೆ. ನಿಮ್ಮಿಬ್ಬರ ನಡುವೆ ಏನೇ ಆಗಿರಬಹುದು. ಆದರೆ ನೀವೀಗ ಜೊತೆಯಾಗಿರಬೇಕು. ಅದೇ ನನ್ನ ಕೋರಿಕೆ’ ಎಂದು ಶ್ರೀರೆಡ್ಡಿ ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ.

ಇದನ್ನೂ ಓದಿ:

ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿ

ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್​ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ