BMTC Revenue: ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿಯಿಂದ ಟಾರ್ಗೆಟ್ ಟಾರ್ಚರ್!

ಯಾಣಿಕರು ಬರಲಿ, ಬರದೇ ಹೋಗಲಿ ಆದಾಯ ತರಬೇಕು ಅಂತ ಬಿಎಂಟಿಸಿ ಮೇಲಾಧಿಕಾರಿಗಳು ಒತ್ತಾಯಿಸುತ್ತಿದ್ದಾರಂತೆ. ಕೊವಿಡ್ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಬಾರಿ ಇಳಿಮುಖವಾಗಿದೆ.

BMTC Revenue: ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿಯಿಂದ ಟಾರ್ಗೆಟ್ ಟಾರ್ಚರ್!
ಬಿಎಂಟಿಸಿ ಬಸ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಸಾರಿಗೆ ಸಿಬ್ಬಂದಿಗೆ ಟಾರ್ಗೆಟ್ ಟಾರ್ಚರ್ ನೀಡುತ್ತಿದೆಯಾ ಎಂಬ ಅನುಮಾನ ಮೂಡಿದೆ. ಸಂಸ್ಥೆಯು ನಿಗದಿಪಡಿಸಿದ ಆದಾಯ ಗುರಿ ಮುಟ್ಟದ ಡ್ರೈವರ್ ಮತ್ತು ಕಂಡಕ್ಟರ್​ಗಳಿಗರ ಬಿಎಂಟಿಸಿ ನೋಟಿಸ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಾನಗರ ಸಾರಿಗೆ ಸಂಸ್ಥೆಯ ಟಾರ್ಗೆಟ್​ಗೆ ಡ್ರೈವರ್​ಗಳು ಮತ್ತು ಕಂಡಕ್ಟರ್​ಗಳು ಕಂಗಾಲಾಗಿದ್ದು, ರಾತ್ರಿ ಪಾಳಿಯ ಸಿಬ್ಬಂದಿಗಳಿಗೆ ಹೆಚ್ಚಿನ ಆದಾಯ ತರುವಂತೆ ಕಿರುಕುಳ ನೀಡುತ್ತಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

ಕಂಡಕ್ಟರ್​ಗಳು ಆದಾಯ ತರದೇ ಇದ್ದರೆ ನಿರ್ಲಕ್ಷ್ಯತನ, ಅಸಡ್ಡೆ, ಬೇಜವಾಬ್ದಾರಿ ಹಣೆಪಟ್ಟಿಯನ್ನು ಬಿಎಂಟಿಸಿ ಕಟ್ಟುತ್ತದೆ. ಹೀಗಾಗಿ ಗುರಿಯನ್ನು ತಲುಪಲಾಗದೆ ಸಿಬ್ಬಂದಿ ನಾನಾ ಸಂಕಷ್ಟವನ್ನು ಎದುರಿಸುತ್ತಿದೆ. ಪ್ರಯಾಣಿಕರು ಬರಲಿ, ಬರದೇ ಹೋಗಲಿ ಆದಾಯ ತರಬೇಕು ಅಂತ ಬಿಎಂಟಿಸಿ ಮೇಲಾಧಿಕಾರಿಗಳು ಒತ್ತಾಯಿಸುತ್ತಿದ್ದಾರಂತೆ. ಕೊವಿಡ್ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಬಾರಿ ಇಳಿಮುಖವಾಗಿದೆ. ಮಾತ್ರವಲ್ಲದೇ ಓಲಾ, ಊಬರ್ ಟ್ಯಾಕ್ಸಿ ಮತ್ತು ಮೆಟ್ರೋ ಸೇವೆ ಬಳಿಕ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬಿಎಂಟಿಸಿ ಬಸ್​ಗಳು ರಸ್ತೆಗೆ ಇಳಿದರೂ ನಿರೀಕ್ಷೆ ಮಟ್ಟದಲ್ಲಿ ಪ್ರಯಾಣಿಕರಿಲ್ಲ. ಹೀಗಾಗಿ ಬಿಎಂಟಿಸಿ ಆದೇಶ ಸಾರಿಗೆ ನೌಕರರಿಗೆ ತಲೆನೋವು ಶುರುವಾಗಿದೆ.

ಸಾಮಾನ್ಯ ಪಾಳಿಯಲ್ಲಿ ಕಾರ್ಯ ನಿರ್ವಹಿಸುವರಿಗೆ 7,500 ರೂ. ಆದಾಯ ಸಿಗುತ್ತದೆ. ರಾತ್ರಿ ತಂಗುವ ಪಾಳಿಯವರು 9 ರಿಂದ 10 ಸಾವಿರ ಆದಾಯ ದೊರೆಯುತ್ತದೆ. ರಾತ್ರಿ ಸೇವೆಯ ಬಸ್ಗಳಲ್ಲಿ ಕರ್ತವ್ಯ ನಿರ್ವಹಿಸುವರು 5 ಸಾವಿರ ಆದಾಯ ಸಂಗ್ರಹಿಸಿ ಡಿಪೋಗಳಲ್ಲಿ ಪಾವತಿ ಮಾಡಬೇಕು. ನಗರದಲ್ಲಿ ಖಾಸಗಿ ಬಸ್ ,ಮ್ಯಾಕ್ಸಿ ಕ್ಯಾಬ್​ಗಳ ಹಾವಳಿ ಹೆಚ್ಚಿದೆ. ಹೀಗಿರುವಾಗ ಆದಾಯ ಗುರಿ ಮುಟ್ಟವುದಾದರೂ ಹೇಗೆ ಅಂತ ಸಿಬ್ಬಂದಿ ಪ್ರಶ್ನಿಸಿದೆ.

ಈ ಮೊದಲು ಬಿಎಂಟಿಸಿಯಲ್ಲಿ ನಿತ್ಯ 52 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದಾರೆ. ಆದರೆ ಇದೀಗ 20 ಲಕ್ಷ ಪ್ರಯಾಣಿಕರು ಮಾತ್ರ ಓಡಾಡುತ್ತಿದ್ದಾರೆ. ಹೀಗಿದ್ದರೂ ಟಾರ್ಗೆಟ್ ರೀಚ್ ಮಾಡುವಂತೆ ಸಿಬ್ಬಂದಿಗೆ ಒತ್ತಡ ಹೇರುತ್ತಿರುವ ಆರೋಪ ಕೇಳಿಬಂದಿದೆ. ಘಟಕ 34ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗಪ್ಪ ಕಾಂಬ್ಳೆ ರಾತ್ರಿ ಪಾಳಯದಲ್ಲಿ ಕಡಿಮೆ ಈ.ಪಿ.ಕೆ.ಎಂ (revenue) ತಂದಿದ್ದೀರಿ. ಇದರಿಂದ ಸಂಸ್ಥೆಗೆ ನಷ್ಟ ಸಂಭವಿಸಿದೆ. ಈ ಹಿನ್ನೆಲೆ 3 ದಿನಗಳೊಳಗಾಗಿ ಸೂಕ್ತ ಸಮಜಾಯಿಶಿ ನೀಡಿ. ಇಲ್ಲದಿದ್ದರೆ ಏಕಪಕ್ಷೀಯವಾಗಿ ಕ್ರಮಕೈಗೊಳ್ಳುತ್ತೀವಿ ಅಂತ
ಬಿಎಂಟಿಸಿ ಘಟಕ ವ್ಯವಸ್ಥಾಪಕರು ನೋಟಿಸ್ ನೀಡಿದ್ದಾರೆ.

 

ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗಪ್ಪ ಕಾಂಬ್ಳೆಗೆ ಬಿಎಂಟಿಸಿ ಘಟಕ ವ್ಯವಸ್ಥಾಪಕರು ನೋಟಿಸ್ ನೀಡಿದ್ದಾರೆ

 

ಇದನ್ನೂ ಓದಿ

ಒಂದು ಬಿಲಿಯನ್ ಕೊವಿಡ್ ಲಸಿಕೆ ನೀಡಿದ ಸಾಧನೆ, ಭಾರತದಲ್ಲಿರುವ ಸ್ಮಾರಕಗಳಿಗೆ ದೀಪಾಲಂಕಾರ ಮಾಡಿ ಸಂಭ್ರಮಾಚರಣೆ!

ಇಂಟರ್ನ್​ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ; ಈವರೆಗೂ ಪತ್ತೆಯಾಗದ ವಕೀಲ ರಾಜೇಶ್ ಭಟ್

Click on your DTH Provider to Add TV9 Kannada