ಒಂದು ಬಿಲಿಯನ್ ಕೊವಿಡ್ ಲಸಿಕೆ ನೀಡಿದ ಸಾಧನೆ, ಭಾರತದಲ್ಲಿರುವ ಸ್ಮಾರಕಗಳಿಗೆ ದೀಪಾಲಂಕಾರ ಮಾಡಿ ಸಂಭ್ರಮಾಚರಣೆ!

ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಕೊವಿಡ್ ವಾರಿಯರ್​​​ಗಳು, ಅಭಿನಂದನಾರ್ಹರು. ಅವರ ಅವಿರತ ಶ್ರಮದಿಂದಲೇ 100 ಕೋಟಿ ಡೋಸ್ ಗಳನ್ನು ಜನರಿಗೆ ನೀಡಿದ ಖ್ಯಾತಿಗೆ ಭಾರತ ಪಾತ್ರವಾಗಿದೆ.

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವದಾದ್ಯಂತ ನಡೆಯುತ್ತಿರುವ ಸಮರದಲ್ಲಿ ಭಾರತ 100 ಕೋಟಿ ಡೋಸ್ಗಳನ್ನು ನೀಡಿದ ಮೈಲಗಲ್ಲು ಸ್ಥಾಪಿಸಿದೆ. ಭಾರತದಲ್ಲಿ ಈಗ ಜಾರಿಯಲ್ಲಿರುವ ಲಸಿಕಾ ಅಭಿಯಾನ ಪ್ರಚಂಡ ಯಶ ಕಂಡಿದೆ. ಭಾರತದಂಥ ಬೃಹತ್ ದೇಶದಲ್ಲಿ 130 ಕೋಟಿಗೂ ಹೆಚ್ಚಿರುವ ಜನರಿಗೆ ಲಸಿಕೆ ಹಾಕಿಸುವುದು ಸಾಮಾನ್ಯ ಕೆಲಸವಲ್ಲ. ಮತ್ತೊಂದು ಮುಖ್ಯ ಸಂಗತಿಯೆಂದರೆ, ಎಲ್ಲ ಭಾರತೀಯರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ನೀಡುವ ಕೇಂದ್ರಗಳಲ್ಲಿ, ಬಡವ-ಶ್ರೀಮಂತ, ಆ ಧರ್ಮ-ಈ ಧರ್ಮ, ಆ ಜಾತಿ-ಈ ಜಾತಿ ಎಂಬ ತಾರತಮ್ಯವಿಲ್ಲ. ಯಾರೇ ಆಗಿದ್ದರೂ, ಎಲ್ಲರ ಹಾಗೆ ಸರದಿಯಲ್ಲಿ ತಮ್ಮ ಪಾಳಿ ಬಂದಾಗಲೇ ಲಸಿಕೆ ಹಾಕಿಸಿಕೊಳ್ಳಬೇಕು. ಅದಕ್ಕೂ ಮೊದಲು ಲಸಿಕೆ ಪಡೆಯವವರು ಕೊವಿನ್ ಸೈಟ್​ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು.

ಈ ಎಲ್ಲ ಸಂಗತಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಕೊವಿಡ್ ವಾರಿಯರ್​​​ಗಳು, ಅಭಿನಂದನಾರ್ಹರು. ಅವರ ಅವಿರತ ಶ್ರಮದಿಂದಲೇ 100 ಕೋಟಿ ಡೋಸ್ ಗಳನ್ನು ಜನರಿಗೆ ನೀಡಿದ ಖ್ಯಾತಿಗೆ ಭಾರತ ಪಾತ್ರವಾಗಿದೆ. ಈ ಸಂದರ್ಭವನ್ನು ಭಾರತಾದ್ಯಂತ ವಿಶಿಷ್ಟವಾದ ರೀತಿಯಲ್ಲಿ ಆಚರಿಸಲಾಗುತ್ತಿದೆ.

ನೀವಿಲ್ಲಿ ನೋಡುತ್ತಿರುವ ಹೈದರಾಬಾದಿನ ವಿಶ್ವ ವಿಖ್ಯಾತ ಚಾರ್ ಮಿನಾರ್ ತಿರಂಗದದಲ್ಲಿನ ಬಣ್ಣಗಳ ದೀಪಗಳಲ್ಲಿ ಕಂಗೊಳಿಸುತ್ತಿದೆ. ಭಾರತದ 100 ಕ್ಕೂ ಹೆಚ್ಚು ಸ್ಮಾರಕಗಳನ್ನು ಶುಕ್ರವಾರದಂದು ಹೀಗೆ ಕೇಸರಿ, ಬಿಳಿ ಮತ್ತು ಹಸಿರು ದೀಪದ ಬಣ್ಣಗಳಿಂದ ಅಲಂಕರಿಸಲಾಗಿತ್ತು.

ದೇಶದ ಇತಿಹಾಸದಲ್ಲಿ ಇದು ನಿಜಕ್ಕೂ ಬಹು ದೊಡ್ಡ ಸಾಧನೆಯಾಗಿಯೇ ದಾಖಲಾಗುತ್ತದೆ. ಕೋವಿಡ್ ವಿರುದ್ಧ ಎಲ್ಲ ದೇಶಗಳು ಹೋರಾಡುತ್ತಿವೆ. ಆದರೆ ಈ ಹೋರಾಟದಲ್ಲಿ ನಾವು ಉಳಿದವರಿಗಿಂತ ಮುಂದಿದ್ದೇವೆ.

ಜೈ ಭಾರತಾಂಬೆ!!

ಇದನ್ನೂ ಓದಿ:  Shocking Video: ಟ್ರ್ಯಾಕ್ ಮೇಲೆ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ; ಆಘಾತಕಾರಿ ವಿಡಿಯೋವಿದು

Click on your DTH Provider to Add TV9 Kannada