ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ: ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಹೇಗೆ?

ಬೆಂಗಳೂರಿನ ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್‌ಮೆಂಟ್‌ನ ನಾಲ್ವರು ಮಕ್ಕಳು ಪತ್ತೆಯಾಗಿದ್ದಾರೆ. ಸದ್ಯ ಈಗ ಪಾಂಡೇಶ್ವರ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ: ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಹೇಗೆ?
ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಮಂಗಳೂರು: ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಪತ್ತೆಯಾಗಿದ್ದಾರೆ.

ಬೆಂಗಳೂರಿನ ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್‌ಮೆಂಟ್‌ನ ನಾಲ್ವರು ಮಕ್ಕಳು ಪತ್ತೆಯಾಗಿದ್ದು ಸದ್ಯ ಈಗ ಪಾಂಡೇಶ್ವರ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಮನೆಯಿಂದ ಹೋಗುವಾಗ ಚಿನ್ನದ ನೆಕ್ಲೆಸ್, ಹಣ ತೆಗೆದುಕೊಂಡು ಹೋಗಿದ್ದ ಮಕ್ಕಳು
ಎಜಿಬಿ ಲೇಔಟ್‌ನ ನಾಲ್ವರು ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಅಮೃತವರ್ಷಿಣಿ ಮನೆಯಿಂದ ಹೋಗಬೇಕಾದ್ರೆ 70 ಗ್ರಾಂ ಚಿನ್ನದ ನೆಕ್ಲೆಸ್, 3000 ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಕ್ಕಳ ದಾಖಲೆಯನ್ನ ಎಲ್ಲಾ ಠಾಣೆಗಳಿಗೆ ರವಾನಿಸಿ ಮಕ್ಕಳನ್ನು ಹುಡುಕಲಾಗುತ್ತಿತ್ತು. ಸದ್ಯ ಈಗ ಮಕ್ಕಳು ಸಿಕ್ಕಿದ್ದಾರೆ.

ಬೆಂಗಳೂರು ಉತ್ತರ ವಲಯದಿಂದ 4 ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗಿದ್ದು ಸೋಲದೇವನಹಳ್ಳಿ ಠಾಣೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು. ಒಂದೆಡೆ ಮಕ್ಕಳ ಪೋಷಕರು ಪೊಲೀಸರ ಮೇಲೆ ಒತ್ತಡ ಹಾಕಿದ್ರೆ ಮತ್ತೊಂದೆಡೆ ಮೇಲಧಿಕಾರಿಗಳಿಂದಲೂ ಒತ್ತಡ ಹಿನ್ನೆಲೆ ಪೊಲೀಸರಿಗೆ ನಾಪತ್ತೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಈಗ ಈ ಪ್ರಕರಣ ಸುಖಾಂತ್ಯ ಕಂಡಿದೆ.

ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಹೇಗೆ?
ಕಳೆದ ಎರಡು ದಿನಗಳ ಹಿಂದೆ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ಮಕ್ಕಳು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಸೋಲದೇವನಹಳ್ಳಿಯ ಪೊಲೀಸರು ಎಲ್ಲಾ ಕಡೆಗೂ ಮಕ್ಕಳ ಮಾಹಿತಿಯನ್ನು ರವಾನಿಸಿದ್ದರು. ಮಕ್ಕಳು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಮುಖಾಂತರ ಪ್ರಯಾಣ ಮಾಡಿ ಮಂಗಳೂರಿನಲ್ಲಿ ಇಳಿದಿದ್ದಾರೆ. ಈ ವೇಳೆ ಮಂಗಳೂರಿನಲ್ಲಿ ವಿಳಾಸವೊಂದನ್ನು ಹುಡುಕುತ್ತಿದ್ದಾರೆ. ಆಗ ಆಟೋ ಚಾಲಕನಿಗೆ ಅನುಮಾನ ಬಂದು ವಿಚಾರಿಸಿ ಮಕ್ಕಳನ್ನು ಗುರುತು ಹಿಡಿದು ಪಾಂಡೇಶ್ವರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಮಕ್ಕಳನ್ನು ಒಪ್ಪಿಸಿದ್ದಾನೆ.

ಮನೆಯಲ್ಲಿ ಟ್ರಿಪ್​ಗೆ ಕಳಿಸ್ತಿರಲಿಲ್ಲ. ಹಾಗಾಗಿ ಟ್ರಿಪ್​ ಗೆ ಹೋದೆವು
ಇನ್ನು ಮಕ್ಕಳು ಪತ್ತೆಯಾದ ಬಳಿಕ ಪಾಂಡೇಶ್ವರ್ ಠಾಣೆ ಪೊಲೀಸರು ಮಕ್ಕಳಿಗೆ ತಿಂಡಿ ನೀಡಿ ವಿಚಾರಣೆ ನಡೆಸಿದ್ದಾರೆ. ಮನೆಯಿಂದ ಹೊರ ಬರಲು ಕಾರಣ ಕೇಳಿದ್ದಾರೆ. ಈ ವೇಳೆ ಮಕ್ಕಳು ನಾವು ಮನೆಯಲ್ಲಿ ಟ್ರಿಪ್​ಗೆ ಕರೆದುಕೊಂಡು ಹೋಗಿ ಅಂದರೆ ಟ್ರಿಪ್​ಗೆ ಹೋಗುತ್ತಿರಲಿಲ್ಲ. ನಾವೇ ಹೋಗುತ್ತೀವೆ ಎಂದರೂ ಕಳಿಸುತ್ತಿರಲಿಲ್ಲ. ಹೀಗಾಗಿ ನಾವೆಲ್ಲ ವಾಕಿಂಗ್​ಗೆ ಹೋಗುತ್ತೇವೆ ಎಂದು ಹೇಳಿ ಮನೆಯಿಂದ ಹೊರ ಬಂದು ಟ್ರಿಪ್​ಗೆ ಬಂದೆವು ಎಂದು ತಿಳಿಸಿದ್ದಾರೆ. ಸದ್ಯ ಇಷ್ಟು ಮಾಹಿತಿ ಸಿಕ್ಕಿದ್ದು ಮುಂದೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಪೊಲೀಸರಿಂದ ಮಕ್ಕಳ ವಿಚಾರಣೆ ಮುಂದುವರೆದಿದೆ. ಮಕ್ಕಳು ಸಿಕ್ಕಿರುವ ಬಗ್ಗೆ ಪೋಷಕರಿಗೂ ಮಾಹಿತಿ ನೀಡಲಾಗಿದೆ.

‘ಮನೆಯಲ್ಲಿ ಮಕ್ಕಳಿಗೆ ಓದುವಂತೆ ಒತ್ತಡ ಹಾಕುತ್ತಿದ್ದರಂತೆ’
ಈ ಪ್ರಕರಣ ಸಂಬಂಧ ಟಿವಿ9 ಜೊತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿದ್ದಾರೆ. ಈ ವೇಳೆ ಅವರು, 2 ದಿನದಿಂದ ಮಕ್ಕಳಿಗಾಗಿ ನಾವೂ ಹುಡುಕಾಟ ನಡೆಸ್ತಿದ್ದೆವು. ಆದ್ರೆ ಇಂದು ಮಕ್ಕಳಲ್ಲಿದ್ದ ಒಬ್ಬ ಮನೆ ವಿಳಾಸ ವಿಚಾರಿಸಿದ್ದಾನೆ. ಈ ವೇಳೆ ಸ್ಥಳೀಯರೊಬ್ಬರಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳೀಯರ ಮಾಹಿತಿ ಆಧರಿಸಿ ಮಕ್ಕಳನ್ನು ಕರೆತರಲಾಗಿದೆ. ‘ಮನೆಯಲ್ಲಿ ಮಕ್ಕಳಿಗೆ ಓದುವಂತೆ ಒತ್ತಡ ಹಾಕುತ್ತಿದ್ದರೆಂದು ಪೊಲೀಸರ ಮುಂದೆ ಮಕ್ಕಳು ಹೇಳಿಕೊಂಡಿದ್ದಾರೆ. ಏನೇ ಆಗಲಿ ಮಕ್ಕಳು ಸಿಕ್ಕಿರುವುದು ಈಗ ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾಪತ್ತೆ ಆಗಿರುವ 4 ಮಕ್ಕಳು ಮಂಗಳೂರಿನತ್ತ ಪ್ರಯಾಣಿಸಿರುವ ಶಂಕೆ; ಏನೇನು ತರಬೇಕು ಎಂದು ಮಾಡಿದ್ದ ಪಟ್ಟಿ ಲಭ್ಯ

Read Full Article

Click on your DTH Provider to Add TV9 Kannada