ಉಪ್ಪಿನಂಗಡಿ ಬಳಿ ಭೀಕರ ಅಪಘಾತ; ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು

ಅತಿ ವೇಗದಿಂದ ಬಸ್ ನಿಲ್ದಾಣದ ಒಳಗೆ ಬಂದ ಕೆಎಸ್ಆರ್ಟಿಸಿ ಬಸ್ ಅಡಿ ತಾಯಿ ಮಗ ಸಿಕ್ಕಿ ಸಾವನ್ನಪ್ಪಿದ್ದಾರೆ. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳುತ್ತಿದ್ದರು.

ಉಪ್ಪಿನಂಗಡಿ ಬಳಿ ಭೀಕರ ಅಪಘಾತ; ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು
ಉಪ್ಪಿನಂಗಡಿ ಬಳಿ ಭೀಕರ ಅಪಘಾತ; ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು

ಮಂಗಳೂರು: ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಶಾಹಿದಾ(25) ಮತ್ತು ಒಂದು ವರ್ಷದ ಪುತ್ರ ಶಾಹೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅತಿ ವೇಗದಿಂದ ಬಸ್ ನಿಲ್ದಾಣದ ಒಳಗೆ ಬಂದ ಕೆಎಸ್ಆರ್ಟಿಸಿ ಬಸ್ ಅಡಿ ತಾಯಿ ಮಗ ಸಿಕ್ಕಿ ಸಾವನ್ನಪ್ಪಿದ್ದಾರೆ. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳುತ್ತಿದ್ದರು. ಈ ವೇಳೆ ಬಸ್ಗೆ ಸಿಕ್ಕಿ ಕೆಳಗೆ ಬಿದ್ದಿದ್ದಾರೆ. ತಲೆಯ ಮೇಲೆ ಬಸ್ ಹರಿದ ಕಾರಣ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಪ್ಪಿನಗಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಯ್ಸ್ ರೆಕಾರ್ಡ್ ಕಳಿಸಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ
ವಾಯ್ಸ್ ರೆಕಾರ್ಡ್ ಕಳಿಸಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿಯ 41 ಘಟಕದ ಸಿಬ್ಬಂದಿ ಜಟ್ಟಪ್ಪ ಪಟೇಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಯಂತ್ರಣಾಧಿಕಾರಿಗಳ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ್ದು, ಬೇರೆ ಬೇರೆ ಡಿಪೋಗಳಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಾಯ್ಸ್ ರೆಕಾರ್ಡ್ ಕಳುಹಿಸಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನಗೆ ತುಂಬಾ ಹಿಂಸೆ ಮಾಡಿದ್ದಾರೆ. ಇವತ್ತು ನಿಮಗೆ ಕೈ‌ಮುಗಿದು ಹೋಗುತ್ತಿದ್ದೇನೆ. ನಿಯಂತಣಾಧಿಕಾರಿಗಳು ಹಾಗೂ 41ನೇ ಡಿಪೋ ಅಧಿಕಾರಿಗಳು ಬಹಳ‌ ತೊಂದರೆ ಕೊಟ್ಟಿದ್ದಾರೆ. ಲಂಚ ಕೊಡದಿದ್ದಕ್ಕೆ ಬೇರೆ ಡಿಪೋಗೆ ವರ್ಗಾವಣೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಡಿಪೋ 6 ರಿಂದ 15ಕ್ಕೆ ವರ್ಗಾವಣೆ, 21ರಿಂದ 41ಕ್ಕೆ ವರ್ಗಾವಣೆ ಮಾಡುತ್ತೇನೆ ಎಂದಿದ್ದಾರೆ ಎಂದು ವಾಯ್ಸ್ ರೆಕಾರ್ಡ್ ಮಾಡಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಸರಣಿ ಅಪಘಾತ; ಅದೃಷ್ಟವಶಾತ್ ಸ್ಥಳದಲ್ಲಿದ್ದ ಎಲ್ಲರೂ ಬಚಾವ್

Read Full Article

Click on your DTH Provider to Add TV9 Kannada