Crime News: ಬೈಕ್ ಕಳ್ಳರನ್ನು ಹಿಡಿಯಲು ಹೋದವರ ಮೇಲೆ ಫೈರಿಂಗ್; ಸಿಗರೇಟ್ ತುಂಬಿದ್ದ ಬ್ಯಾಗ್ ಕಳ್ಳತನ

TV9 Digital Desk

| Edited By: ganapathi bhat

Updated on:Sep 27, 2021 | 11:04 PM

Crime: ಬೈಕ್ ಬಿಟ್ಟು ಒಂದು ಬ್ಯಾಗ್ ಬಿಟ್ಟು ಕಳ್ಳರು ಪರಾರಿ ಆಗಿದ್ದಾರೆ. ಬ್ಯಾಗ್​ನಲ್ಲಿ ಬೈಕ್​ಗಳ ವಿವಿಧ ನಂಬರ್ ಪ್ಲೇಟ್​ಗಳು ಪತ್ತೆ ಆಗಿದೆ. ಗಾಯಾಳು ಗಂಗರಾಜು ಎಂಬವರನ್ನು ಚಿಕ್ಕಬಳ್ಳಾಫುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Crime News: ಬೈಕ್ ಕಳ್ಳರನ್ನು ಹಿಡಿಯಲು ಹೋದವರ ಮೇಲೆ ಫೈರಿಂಗ್; ಸಿಗರೇಟ್ ತುಂಬಿದ್ದ ಬ್ಯಾಗ್ ಕಳ್ಳತನ
ಬೈಕ್ ಕಳ್ಳರನ್ನು ಹಿಡಿಯಲು ಹೋದವರ ಮೇಲೆ ಫೈರಿಂಗ್

Follow us on

ಚಿಕ್ಕಬಳ್ಳಾಪುರ: ಬೈಕ್​ ಕಳ್ಳರನ್ನು ಹಿಡಿಯಲು ಹೋದವರ ಮೇಲೆ ಫೈರಿಂಗ್​ ಮಾಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮರವೇನಹಳ್ಳಿ ಬಳಿ ನಡೆದಿದೆ. ಮರವೇನಹಳ್ಳಿ ನಿವಾಸಿ ಗಂಗರಾಜುಗೆ ಘಟನೆಯಲ್ಲಿ ಗುಂಡು ತಗುಲಿದೆ. ಗ್ರಾಮದ ಯುವಕ ಗಂಗರಾಜುಗೆ ಗುಂಡು ತಗುಲಿ ಗಾಯವಾಗಿದೆ. ಕಳ್ಳರು. ಗ್ರಾಮದ ರಾಮಚಂದ್ರರೆಡ್ಡಿ ಎನ್ನುವವರ ಬೈಕ್ ಕಳ್ಳತನ ಮಾಡ್ತಿದ್ದರು. ಗ್ರಾಮದ 3 ಜನ ಯುವಕರು ಕಳ್ಳರನ್ನು ಹಿಡಿಯಲು ಬೆನ್ನತ್ತಿದ್ದರು. ಈ ವೇಳೆ, ಗ್ರಾಮದ ಯುವಕರ ಮೇಲೆ ಕಳ್ಳರು 6 ಸುತ್ತು ಗುಂಡು ಹಾರಿಸಿದ್ದಾರೆ. ಕೊನೆಗೆ ಬೈಕ್ ಬಿಟ್ಟು ಒಂದು ಬ್ಯಾಗ್ ಬಿಟ್ಟು ಕಳ್ಳರು ಪರಾರಿ ಆಗಿದ್ದಾರೆ. ಬ್ಯಾಗ್​ನಲ್ಲಿ ಬೈಕ್​ಗಳ ವಿವಿಧ ನಂಬರ್ ಪ್ಲೇಟ್​ಗಳು ಪತ್ತೆ ಆಗಿದೆ. ಗಾಯಾಳು ಗಂಗರಾಜು ಎಂಬವರನ್ನು ಚಿಕ್ಕಬಳ್ಳಾಫುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ನೆಲಮಂಗಲ: ಸಿಗರೇಟ್ ತುಂಬಿದ್ದ ಬ್ಯಾಗ್ ಕಳ್ಳತನ ಗಮನ ಬೇರೆಡೆ ಸೆಳೆದು ಬೈಕ್ ನಲ್ಲಿ ಇದ್ದ ಸಿಗರೇಟ್ ತುಂಬಿದ್ದ ಬ್ಯಾಗ್ ಕಳ್ಳತನ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ನಡೆದಿದೆ. ವ್ಯಾಪಾರಿ ಬಸವರಾಜು, 50 ಸಾವಿರ ಬೆಲೆಬಾಳುವ ಸಿಗರೇಟ್ ಕಳೆದುಕೊಂಡಿದ್ದಾರೆ. ಬೈಕ್ ನಿಲ್ಲಿಸಿ ಅಂಗಡಿಗೆ ಸಿಗರೇಟ್ ಸರಬರಾಜು ಮಾಡುವ ವೇಳೆ ಕೃತ್ಯ ನಡೆದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ: ಎಸ್​ಪಿ ಗನ್​ಮ್ಯಾನ್ ಅಡ್ಡಗಟ್ಟಿ ದರೋಡೆಕೋರರಿಂದ ಹಲ್ಲೆ ಎಸ್​​ಪಿ ಗನ್​ಮ್ಯಾನ್​​ ಅಡ್ಡಗಟ್ಟಿ ದರೋಡೆಕೋರರಿಂದ ಹಲ್ಲೆ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಅಜ್ಜಪ್ಪಲ್ಲಿ‌ ಗ್ರಾಮ ಸಮೀಪ ನಡೆದಿದೆ. ಕೆಜಿಎಫ್​ ಎಸ್​​​ಪಿ ಇಲಕ್ಕಿಯಾ ಕರುಣಾಗರನ್ ಗನ್​​ಮ್ಯಾನ್ ಮುನಿರತ್ನಂ‌ ಮೇಲೆ ಹಲ್ಲೆ ಮಾಡಲಾಗಿದೆ. ಬೈಕ್​​ನಲ್ಲಿ ತೆರಳ್ತಿದ್ದ ವೇಳೆ ಅಡ್ಡಗಟ್ಟಿ ದರೋಡೆಗೆ ಯತ್ನಿಸಿ ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ಐವರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಗನ್​ಮ್ಯಾನ್​ ಮುನಿರತ್ನಂಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೋಲಾರ: ಗೋವುಗಳನ್ನು ಸಾಗಿಸುತ್ತಿದ್ದ 2 ಲಾರಿ ವಶಕ್ಕೆ ಅಕ್ರಮವಾಗಿ ಗೋವುಗಳ‌ನ್ನ ಸಾಗಿಸ್ತಿದ್ದ 2 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಲಾರ ತಾಲೂಕಿನ ಚಾಕರಸನಹಳ್ಳಿ ಗ್ರಾಮದಲ್ಲಿ‌ ಘಟನೆ ನಡೆದಿದೆ. 20ಕ್ಕೂ ಹೆಚ್ಚು ಗೋವುಗಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗೋವುಗಳನ್ನ ರಕ್ಷಿಸಿ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಐಪಿಎಲ್​ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಇಬ್ಬರ ಬಂಧನ; 16 ಸಾವಿರ ನಗದು, 2 ಮೊಬೈಲ್ ಜಪ್ತಿ

ಇದನ್ನೂ ಓದಿ: ಕಳ್ಳತನಕ್ಕೆ ಅಡ್ಡಿಯಾಗುತ್ತೆಂದು ಸಿಸಿ ಕ್ಯಾಮರಾ ಒಡೆದು ಹಾಕಿದ ಮಹಿಳೆ; ವಿಡಿಯೋ ನೋಡಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada