ನಿರೂಪಣೆಯಿಂದ ಅರುಣ್​ ಸಾಗರ್​ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್​

‘ರಿಟೈರ್ಡ್​ ಆ್ಯಂಕರ್​ ಕರೆದುಕೊಂಡು ಬಂದಿದ್ದೀರಿ. ಸನ್ಮಾನ ಸಮಾರಂಭ ನಡೆಸುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ’ ಎಂದು ‘ಕೋಟಿಗೊಬ್ಬ 3’ ಸಕ್ಸಸ್​ ಮೀಟ್​ನಲ್ಲಿ ಅರುಣ್​ ಸಾಗರ್​ ಬಗ್ಗೆ ಸುದೀಪ್​ ಹೇಳಿದರು.

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಚಿತ್ರ ಯಶಸ್ವಿ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಖತ್​ ಕಲೆಕ್ಷನ್​ ಆಗುತ್ತಿದೆ. ಈ ಖುಷಿಗಾಗಿ ಮತ್ತೆ ಒಂದೆಡೆ ಸೇರಿ ಸಂಭ್ರಮಿಸಿದೆ ಇಡೀ ಚಿತ್ರತಂಡ. ಈ ಕಾರ್ಯಕ್ರಮವನ್ನು ಅರುಣ್​ ಸಾಗರ್​ ನಿರೂಪಣೆ ಮಾಡಿದರು. ಆದರೂ ಇಡೀ ವಾತಾವರಣ ಯಾಕೋ ಡಲ್​ ಆಗಿತ್ತು. ಅದನ್ನು ಗಮನಿಸಿದ ಸುದೀಪ್ ಅವರು ಕೊಂಚ ಕಾಲೆಳೆದರು.

‘ರಿಟೈರ್ಡ್​ ಆ್ಯಂಕರ್​ ಕರೆದುಕೊಂಡು ಬಂದಿದ್ದೀರಿ. ಸನ್ಮಾನ ಸಮಾರಂಭ ನಡೆಸುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅವರ ಗೆಟಪ್​ ನೋಡಿಯೇ ಜನ ಸೈಲೆಂಟ್​ ಆಗಿದ್ದಾರೆ. ಈ ಕಾರ್ಯಕ್ರಮ ಮುಗಿದ ನಂತರ ಅಧಿಕೃತವಾಗಿ ಅವರಿಗೆ ನಾವು ನಿವೃತ್ತಿ ಕೊಡಿಸೋಣ’ ಎಂದು ಕಿಚ್ಚ ಹೇಳಿದರು. ನಂತರ ಆ ಮಾತು ತಮಾಷೆಗೆ ಹೇಳಿದ್ದು ಎಂದರು ಸುದೀಪ್. ‘ಕೋಟಿಗೊಬ್ಬ 3’ ಚಿತ್ರಕ್ಕೆ ಕಲಾ ನಿರ್ದೇಶಕರಾಗಿಯೂ ಅರುಣ್​ ಸಾಗರ್​ ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ಕಿಚ್ಚನಿಂದ ಮೆಚ್ಚುಗೆ ವ್ಯಕ್ತವಾಯಿತು.​

ಇದನ್ನೂ ಓದಿ:

‘ಸುದೀಪ್​ ಜತೆ ಜಗಳವಾಗಿದ್ದು ನಿಜ, ಆದರೆ..’; ‘ಕೋಟಿಗೊಬ್ಬ 3’ ಸಕ್ಸಸ್​ಮೀಟ್​ನಲ್ಲಿ ಸೂರಪ್ಪ ಬಾಬು ಮಾತು

ಸುದೀಪ್​-ಪ್ರಿಯಾ ದಾಂಪತ್ಯಕ್ಕೆ 20 ವರ್ಷ; ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿಶೇಷ ಕವನ

Click on your DTH Provider to Add TV9 Kannada