ಸುದೀಪ್-ಪ್ರಿಯಾ ದಾಂಪತ್ಯಕ್ಕೆ 20 ವರ್ಷ; ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿಶೇಷ ಕವನ
Sudeep Priya Wedding Anniversary: ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವದ ಸಲುವಾಗಿ ಆತ್ಮೀಯರು ಬರೆದ ಕವನವನ್ನು ಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ. ಇಂಗ್ಲಿಷ್ನಲ್ಲಿರುವ ಆ ಕವನವನ್ನು ಸುದೀಪ್ ಕೂಡ ಮೆಚ್ಚಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ‘ಕೋಟಿಗೊಬ್ಬ 3’ ಚಿತ್ರದ ಗೆಲುವಿನ ಸಂಭ್ರಮದಲ್ಲಿದ್ದಾರೆ. ಅ.15ರಂದು ತೆರೆಕಂಡ ಈ ಚಿತ್ರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದರ ನಡುವೆ ಅವರ ಸಂತಸ ಹೆಚ್ಚಿಸಿದ ಮತ್ತೊಂದು ಸಂಗತಿ ಅಂದರೆ ಅದು ವಿವಾಹ ವಾರ್ಷಿಕೋತ್ಸವ. ಹೌದು, ಸುದೀಪ್ ಮತ್ತು ಪ್ರಿಯಾ ದಾಂಪತ್ಯಕ್ಕೆ ಈಗ 20 ವರ್ಷ ತುಂಬಿದೆ. ಈ ಸಂಭ್ರಮವನ್ನು ಅವರು ಒಟ್ಟಾಗಿ ಆಚರಿಸಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಈ ಜೋಡಿಗೆ ವೆಡ್ಡಿಂಗ್ ಆ್ಯನಿವರ್ಸರಿಯ ಶುಭಾಶಯ ಕೋರುತ್ತಿದ್ದಾರೆ.
ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಆತ್ಮೀಯರು ಬರೆದ ಕವನವನ್ನು ಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ. ಇಂಗ್ಲಿಷ್ನಲ್ಲಿರುವ ಆ ಕವನವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ.
‘ಈಗಾಗಲೇ 20 ವರ್ಷ ಆಯ್ತು. ಸಮಯ ತುಂಬ ಬೇಗ ಸಾಗುತ್ತಿದೆ. ಖುಷಿಯ 20 ವರ್ಷಗಳು. ಧನ್ಯವಾದಗಳು ಪ್ರಿಯಾ. ಈ ಪ್ರೀತಿಯ ಕವನಕ್ಕೂ ಧನ್ಯವಾದ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಪತ್ನಿಯ ಜೊತೆಗಿರುವ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
20 already!!!!!! ? Time fliessssss…. Happy 20 priii @iampriya06 ❤? Thank u for everythn. Thank you Tas&Chan for this lovely poem❤??. https://t.co/JsenPed483 pic.twitter.com/RAH2wtyJlE
— Kichcha Sudeepa (@KicchaSudeep) October 19, 2021
ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಮಗಳು ಸಾನ್ವಿ ಸುದೀಪ್ ಕೂಡ ವಿಶ್ ಮಾಡಿದ್ದಾರೆ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮಕ್ಕೆ ಕೇಕ್ ಕತ್ತರಿಸಲಾಗಿದೆ. ಆಪ್ತರ ಜೊತೆ ಸೇರಿ ಸಂಭ್ರಮಿಸಲಾಗಿದೆ. ಆ ಫೋಟೋಗಳನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ತಂದೆ-ತಾಯಿಗೆ ಸಾನ್ವಿ ವಿಶ್ ಮಾಡಿದ್ದಾರೆ. 2001ರ ಅಕ್ಟೋಬರ್ನಲ್ಲಿ ಸುದೀಪ್ ಮತ್ತು ಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ 2004ರಲ್ಲಿ ಸಾನ್ವಿ ಜನಿಸಿದರು. ಇವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಪ್ರಿಯಾ ಸಕ್ರಿಯರಾಗಿದ್ದಾರೆ. ಪತಿಯ ಸಿನಿಮಾ ಜರ್ನಿಗೆ ಅವರು ಬೆಂಬಲವಾಗಿ ನಿಂತಿದ್ದಾರೆ.
‘ಕೋಟಿಗೊಬ್ಬ 3’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದಲ್ಲಿ ‘ಕೋಟಿಗೊಬ್ಬ 3’ ಬಿಡುಗಡೆಗೆ ವಿಘ್ನ ಎದುರಾಗಿತ್ತು. ವಿತರಕರು ಮತ್ತು ನಿರ್ಮಾಪಕರ ನಡುವೆ ಹಣಕಾಸಿನ ಕಿರಿಕ್ ಉಂಟಾಗಿದ್ದರಿಂದ ಅ.14ರಂದು ರಿಲೀಸ್ ಆಗಬೇಕಿದ್ದ ಚಿತ್ರ ಒಂದು ದಿನ ತಡವಾಗಿ (ಅ.15) ಬಿಡುಗಡೆ ಆಯಿತು.
ಇದನ್ನೂ ಓದಿ:
‘ಕೋಟಿಗೊಬ್ಬ 4’ ಮಾಡುವ ಬಗ್ಗೆ ಸೂರಪ್ಪ ಬಾಬು ಮಾತು; ಸುದೀಪ್ ಅಭಿಮಾನಿಗಳೇ ಇಲ್ಲಿ ಕೇಳಿ
‘ಕೋಟಿಗೊಬ್ಬ 3’ ರಿಲೀಸ್ ಮಾಡಬೇಡಿ ಅಂತ ಚಿತ್ರಮಂದಿರಕ್ಕೆ ಫೋನ್ ಮಾಡಿದ್ರು: ಸುದೀಪ್ ಸ್ಫೋಟಕ ಆರೋಪ