‘ಕೋಟಿಗೊಬ್ಬ 4’ ಮಾಡುವ ಬಗ್ಗೆ ಸೂರಪ್ಪ ಬಾಬು ಮಾತು; ಸುದೀಪ್​ ಅಭಿಮಾನಿಗಳೇ ಇಲ್ಲಿ ಕೇಳಿ…

ಅನೇಕ ಅಡೆತಡೆಗಳ ಬಳಿಕ ‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆ ಆಗಿದೆ. ನಟ ಸುದೀಪ್​ ಮತ್ತು ನಿರ್ಮಾಪಕ ಸೂರಪ್ಪ ಬಾಬು ಜೊತೆಯಾಗಿ ‘ಕೋಟಿಗೊಬ್ಬ 4’ ಮಾಡುತ್ತಾರಾ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ..

ನಟ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್​ನಲ್ಲಿ ‘ಕೋಟಿಗೊಬ್ಬ 2’ ಮತ್ತು ‘ಕೋಟಿಗೊಬ್ಬ 3’ ಚಿತ್ರಗಳು ಮೂಡಿಬಂದಿವೆ. ಹಲವು ವಿಘ್ನಗಳನ್ನು ದಾಟಿಕೊಂಡು ‘ಕೋಟಿಗೊಬ್ಬ 3’ ತೆರೆಕಾಣಬೇಕಾದ ಪರಿಸ್ಥಿತಿ ಬಂತು. ಅದಕ್ಕೆ ನಿರ್ಮಾಪಕ ಸೂರಪ್ಪ ಬಾಬು ಅವರು ಅಭಿಮಾನಿಗಳಲ್ಲಿ ಕ್ಷಮೆಯನ್ನೂ ಕೇಳಿದ್ದಾಯ್ತು. ತಮಗೆ ಮೋಸ ಮಾಡಿ, ರಿಲೀಸ್​ಗೆ ಅಡ್ಡಿ ಉಂಟು ಮಾಡಿದವರ ವಿರುದ್ಧ ಕಾನೂನು ಸಮರ ಕೈಗೊಳ್ಳುವುದು ಖಚಿತ ಎಂದು ಸೂರಪ್ಪ ಬಾಬು ಹೇಳಿದ್ದಾರೆ. ‘ಕೋಟಿಗೊಬ್ಬ 4’ ಸಿನಿಮಾದ ಪ್ಲ್ಯಾನ್​ ಬಗ್ಗೆಯೂ ಅವರು ಮಾತನಾಡಿದ್ದಾರೆ.

‘ಸುದೀಪ್​ ಜತೆ ‘ಕೋಟಿಗೊಬ್ಬ 4’ ಚಿತ್ರ ಮಾಡಲು ನಾನು ಸಿದ್ಧನಿದ್ದೇನೆ. ಆದರೆ ಅದನ್ನು ನಾನು ತೀರ್ಮಾನ ಮಾಡುವುದಲ್ಲ. ಸೂಕ್ತವಾದ ಕಥೆ ಬೇಕು. ಅದನ್ನು ಸುದೀಪ್​ ಇಷ್ಟಪಡಬೇಕು. ‘ಕೋಟಿಗೊಬ್ಬ 4’ ಮಾಡಬೇಕು ಎಂಬ ಇಚ್ಛೆ ನಮ್ಮಿಬ್ಬರಿಗೂ ಇದೆ. ಯಾವುದೇ ಕಾರಣಕ್ಕೂ ಕಥೆ ಇಲ್ಲದೇ ಸಿನಿಮಾ ಮಾಡುವುದಿಲ್ಲ. ಇವತ್ತು ನಮ್ಮನ್ನು ಗೆಲ್ಲಿಸಿರುವುದೇ ಕಥೆ’ ಎಂದು ಸೂರಪ್ಪ ಬಾಬು ಹೇಳಿದ್ದಾರೆ.

ಇದನ್ನೂ ಓದಿ:

‘ಕೋಟಿಗೊಬ್ಬ 3’ ರಿಲೀಸ್​ ಮಾಡಬೇಡಿ ಅಂತ ಚಿತ್ರಮಂದಿರಕ್ಕೆ ಫೋನ್​ ಮಾಡಿದ್ರು: ಸುದೀಪ್​ ಸ್ಫೋಟಕ ಆರೋಪ

Kotigobba 3: ಕಿಚ್ಚನ ಒಂದೇ ಒಂದು ಟ್ವೀಟ್​ನಿಂದ​ ಹೆಚ್ಚಿತು ‘ಕೋಟಿಗೊಬ್ಬ 3’ ಕ್ರೇಜ್​; ಅಂಥ ವಿಶೇಷ ಇದರಲ್ಲೇನಿದೆ?

Click on your DTH Provider to Add TV9 Kannada