ದುರ್ಗಾ ಪೂಜೆ ಸಂಭ್ರಮ: ಸೀರೆಗಳನ್ನುಟ್ಟು ನೋಡುಗರ ಎದೆಬಡಿತ ಹೆಚ್ಚಿಸಿದ ಬಾಲಿವುಡ್ ನಟಿಯರು!

ದುರ್ಗಾ ಪೂಜೆ ಸಂಭ್ರಮ: ಸೀರೆಗಳನ್ನುಟ್ಟು ನೋಡುಗರ ಎದೆಬಡಿತ ಹೆಚ್ಚಿಸಿದ ಬಾಲಿವುಡ್ ನಟಿಯರು!

TV9 Web
| Updated By: shivaprasad.hs

Updated on: Oct 16, 2021 | 7:59 AM

ವಿದ್ಯಾ ಬಾಲನ್ ಸೀರೆಯಲ್ಲಿ ಕಂಗೊಳಿಸುತ್ತಾರೆ ಅಂತ ಹೇಳಿದರೆ, ಖಂಡಿತವಾಗಿಯೂ ತಪ್ಪಾಗುತ್ತದೆ. ಯಾಕೆಂದರೆ, ರೀಯಲ್ ಲೈಫಲ್ಲಿ ಅವರು ಕೇವಲ ಸೀರೆಗಳನ್ನೇ ಉಡೋದು.

ಬಾಲಿವುಡ್ ನಟಿಯರು ಸೀರೆ ಉಡೋದು ಬಹಳ ಕಡಿಮೆ ಸಂದರ್ಭಗಳಲ್ಲಿ ಮಾತ್ರ. ಆದರೆ ಹಬ್ಬ-ಹುಣ್ಣಿಮೆಗಳಿಗೆ ಅವರಲ್ಲಿ ಹೆಚ್ಚಿನ ನಟಿಯರು ಸೀರೆ ಉಡಲು ಬಯಸುತ್ತಾರೆ. ಹಬ್ಬಗಳೆಂದರೆ, ಸಂತೋಷಪಡುವ, ಸಂಭ್ರಮಿಸುವ ಸಮಯ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಹಬ್ಬಗಳನ್ನು ಹೆಚ್ಚು ಎಂಜಾಯ್ ಮಾಡುತ್ತಾರೆ. ಹಾಗಾಗಿ, ಸಿನಿಮಾ ನಟಿಯರೂ ಇದಕ್ಕೆ ಹೊರತಲ್ಲ. ದಸರಾ ವಾರಗಟ್ಟಲೆ ನಡೆಯುವ ಹಬ್ಬ. ಬಾಲಿವುಡ್ ನಟಿಯರು ನವರಾತ್ರಿ ಉತ್ಸವ, ದುರ್ಗಾ ಪೂಜೆಯಲ್ಲಿ ಸಾಮಾನ್ಯವಾಗಿ ಸೀರೆಗಳನ್ನೇ ಉಡುತ್ತಾರೆ. ವಿದ್ಯಾಬಾಲನ್, ಬಿಪಾಶಾ ಬಸು, ನೋರಾ ಫತೇಹಿ, ಜಾಕ್ವೆಲಿನ್ ಫರ್ನಾಂಡೀಸ್ ಸಾಂಪ್ರದಾಯಿಕ ಶೈಲಯಲ್ಲಿ ಸೀರೆಗಳನ್ನು ಧರಿಸಿ ಹಬ್ಬ ಆಚರಿಸಿರುವ ವಿಡಿಯೋ ಇಲ್ಲಿದೆ.

ವಿದ್ಯಾ ಬಾಲನ್ ಸೀರೆಯಲ್ಲಿ ಕಂಗೊಳಿಸುತ್ತಾರೆ ಅಂತ ಹೇಳಿದರೆ, ಖಂಡಿತವಾಗಿಯೂ ತಪ್ಪಾಗುತ್ತದೆ. ಯಾಕೆಂದರೆ, ರೀಯಲ್ ಲೈಫಲ್ಲಿ ಅವರು ಕೇವಲ ಸೀರೆಗಳನ್ನೇ ಉಡೋದು. ಅವರ ಮುದ್ದು ಮುಖಕ್ಕೆ ಮತ್ತು ದಪ್ಪವೆನಿಸುವ ದೇಹಕ್ಕೆ ಸೀರೆ ಅದ್ಭುತವಾಗಿ ಒಪ್ಪುತ್ತದೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ವಿದ್ಯಾ ಅವರದ್ದು ಸಾಂಪ್ರದಾಯಿಕ ಚೆಲುವು. ಹಾಗಾಗಿ, ಸೀರೆಯಲ್ಲಿ ಅವರು ಸೌಂದರ್ಯ ದೇವತೆಯೇ. ಇಲ್ಲಿ ಕೆಂಪು ಮತ್ತು ಬಂಗಾರದ ಬಣ್ಣದ ಅಂಚಿನ ಬಿಳಿ ಸೀರೆ ಮತ್ತು ಅದಕ್ಕೊಪ್ಪುವ ಕೆಂಪು ಬಣ್ಣದ ರವಿಕೆ ಅವರು ಧರಿಸಿದ್ದಾರೆ.

ಬಿಪಾಶಾ ಬಸು ಬಂಗಾಳಿ ಅಂತ ಎಲ್ಲರಿಗೂ ಗೊತ್ತು. ಅವರು ಸಹ ಕೆಂಪು ಸೀರೆ ಮತ್ತು ಕೆಂಪು ರವಿಕೆ ತೊಟ್ಟು ಕುಟುಂಬದ ಸದಸ್ಯರು ಮತ್ತು ಸ್ನೇಹಿತೆಯರೊಂದಿಗೆ ದುರ್ಗಾ ಪೂಜೆ ಉತ್ಸವನಲ್ಲಿ ಭಾಗವಹಿಸಿದ್ದಾರೆ. ಶ್ರೀಲಂಕಾದ ಬೆಡಗಿ, ಜಾಕ್ವೆಲಿನ್ ಫರ್ನಾಂಡೀಸ್ ಸೀರೆ ಉಟ್ಟಿರೋದೇ ಅಚ್ಚರಿ ಹುಟ್ಟಿಸುವ ಸಂಗತಿ. ಬಾಲಿವುಡ್ನಲ್ಲಿ ಅತಿ ಬ್ಯೂಸಿಯಾಗಿರುವ ಅವರು ಸೀರೆಗಳನ್ನು ಉಡೋದು ಅಪರೂಪ.

ಜಾಕ್ವೆಲಿನ್ ಸೀರೆ ಉಟ್ಟಿರುವ ರೀತಿ ಭಿನ್ನವಾಗಿದೆ. ಅದು ನಿಸ್ಸಂದೇಹವಾಗಿ ಸಾಂಪ್ರದಾಯಿಕ ಅಲ್ಲ. ಆ ವಿಷಯವೆಲ್ಲ ಬೇಡ ಬಿಡಿ, ಅವರು ಸೀರೆ ಉಟ್ಟಿರೋದು ಸಂತೋಷದ ವಿಷಯ, ಅದನ್ನಷ್ಟೇ ಆನಂದಿಸುವ.

ಜಾಕ್ವೆಲಿನ್​ ಗಿಂತ ನೋರಾ ಫತೇಹಿ ಸೀರೆಯಲ್ಲಿ ಮಿಂಚುತ್ತಿರುವುದು ಜಾಸ್ತಿ ಆಶ್ಚರ್ಯ ಹುಟ್ಟಿಸುತ್ತದೆ. ಅವರನ್ನು ಬಾಡಿಕಾನ್ ಮತ್ತು ಇನ್ನೂ ಬೇರೆ ಬೇರೆ ಸೆಕ್ಸೀ ಉಡುಗೆಗಳಲ್ಲಿ ನೋಡಿ ಅಭ್ಯಾಸವಾಗಿರುವುದರಿಂದ ಈ ವಿಡಿಯೋನಲ್ಲಿ ಅವರು ಸರ್ಪ್ರೈಸ್ ಪ್ಯಾಕೇಜ್. ಆದರೆ, ಸೀರೆಯಲ್ಲೂ ಈ ಮಾದಕ ಮೈಮಾಟದ ಬೆಡಗಿ ನಮ್ಮೆಲ್ಲರ ಮನಸೂರೆಗೊಳ್ಳುತ್ತಾರೆ, ವ್ಹಾವ್!

ಇದನ್ನೂ ಓದಿ:  Viral Video: ಮಿಸ್ಟರ್ ಬೀನ್ ಥರಾನೇ ಕಾಣ್ತಾರೆ; ನಟನೆ ಕೂಡ ಸೂಪರ್! ವಿಡಿಯೋ ನೋಡಿ