ಸುರಕ್ಷತೆ ವಿಷಯದಲ್ಲಿ ಟಾಟಾ ಪಂಚ್ ಕಾರಿಗೆ ಸರಿಸಾಟಿಯಿಲ್ಲ, ವಯಸ್ಕರ ಸುರಕ್ಷತೆಯ ಎನ್ ಸಿ ಎ ಪಿ ಟೆಸ್ಟ್ಗಳಲ್ಲಿ ಟಾಪ್ ರೇಟಿಂಗ್!
ಗ್ಲೋಬಲ್ ಎನ್ ಸಿ ಎ ಪಿ ಟೆಸ್ಟ್ಗಳಲ್ಲಿ ಟಾಟಾ ಪಂಚ್ ಕಾರಿನಲ್ಲಿ ವಯಸ್ಕರ ಸುರಕ್ಷತೆಗೆ 5-ಸ್ಟಾರ್ ರೇಟಿಂಗ್, ಮತ್ತು ಮಕ್ಕಳ ಸುರಕ್ಷತೆ ಆಯಾಮಕ್ಕೆ 4-ಸ್ಟಾರ್ ರೇಟಿಂಗ್ ಪಡೆದು ಅತ್ಯಂತ ಸುರಕ್ಷಿತ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ಹೊಸ ಕಾರುಗಳ ಕಾರ್ಯಕ್ಷಮತೆ, ಸಾಮರ್ಥ್ಯ ಮತ್ತು ಸುರಕ್ಷತೆ ಮೊದಲಾದುವುಗಳನ್ನು ಪರಿಶೀಲಿಸಿ ತಕ್ಕದಾದ ರೇಟಿಂಗ್ ನೀಡುವ ಎನ್ ಸಿ ಎ ಪಿ (ನ್ಯೂ ಕಾರ್ ಅಸ್ಸೆಸ್ ಮೆಂಟ್ ಪ್ರೊಗ್ರಾಮ್) ಬಗ್ಗೆ ನಿಮಗೆ ಗೊತ್ತಿರಬಹುದು. ಇಲ್ಲಿ ಅಪಘಾತ ಪರೀಕ್ಷಾ ಪ್ರಯೋಗಾಲಯಗಳು ಅಧಿಕೃತ ಪ್ರೊಟೋಕಾಲ್ ಪ್ರಕಾರ ಪ್ರತಿ ಹೊಸ ವಾಹನದ ಕ್ರ್ಯಾಷ್ ಟೆಸ್ಟ್ಗಳನ್ನು ನಡೆಸಲಾಗುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಗ್ಲೋಬಲ್ ಎನ್ ಸಿ ಎ ಪಿ ಟೆಸ್ಟ್ಗಳಲ್ಲಿ ಟಾಟಾ ಪಂಚ್ ಕಾರಿನಲ್ಲಿ ವಯಸ್ಕರ ಸುರಕ್ಷತೆಗೆ 5-ಸ್ಟಾರ್ ರೇಟಿಂಗ್, ಮತ್ತು ಮಕ್ಕಳ ಸುರಕ್ಷತೆ ಆಯಾಮಕ್ಕೆ 4-ಸ್ಟಾರ್ ರೇಟಿಂಗ್ ಪಡೆದು ಅತ್ಯಂತ ಸುರಕ್ಷಿತ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ಟಾಟಾ ಪಂಚ್ ಕಾರನ್ನು ಅತ್ಯಂತ ಮೂಲಭೂತ ಸುರಕ್ಷತೆ ಆಯಾಮದಲ್ಲಿ ಪರೀಕ್ಷಿಸಲಾಯಿತು. ಎರಡು ಏರ್‌ಬ್ಯಾಗ್‌ಗಳು, ಎಬಿಎಸ್ ಬ್ರೇಕ್‌ಗಳು ಮತ್ತು ಐಸೋಫಿಕ್ಸ್ ಆಂಕೊರೇಜ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಸೈಡ್ ಹೆಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಸಿಸ್ಟಂಗಳನ್ನು ಸ್ಟ್ಯಾಂಡರ್ಡ್ ಆಗಿ ಮತ್ತು 3 ಆಸನ ಸ್ಥಾನಗಳಲ್ಲಿ 3 ಪಾಯಿಂಟ್ ಬೆಲ್ಟ್‌ಗಳೊಂದಿಗೆ ಮಾದರಿಯನ್ನು ಸಜ್ಜುಗೊಳಿಸುವ ಮೂಲಕ ಪಂಚ್ ಅನ್ನು ಸುಧಾರಿಸಬಹುದು.
ಟಾಟಾ ನಿರ್ಧಾರವನ್ನು ಮತ್ತೊಮ್ಮೆ ಹೈಲೈಟ್ ಮಾಡುವುದು ಮುಖ್ಯವಾಗಿದೆ. ಮಕ್ಕಳ ಸುರಕ್ಷತೆಗಾಗಿ ಸಂಸ್ಥೆಯು ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ. ಹಿಂಬದಿಯ ಆಸನಗಳು ಮಕ್ಕಳಿಗೆ ಸಂಪೂರ್ಣಾವಾಗಿ ಸೇಫ್ ಅಗಿರುವ ಹಾಗೆ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: Viral Video: ಒಂದೇ ಕಾಲಿನಲ್ಲಿ ಸೈಕಲ್ ತುಳಿಯುತ್ತಾ ಸಾಗಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ನೋಡಿ ಸೆಲ್ಯೂಟ್ ಎಂದ ನೆಟ್ಟಿಗರು