ಹಲವಾರು ವೈಶಿಷ್ಟ್ಯತೆಗಳ ಹೊಸ ನೊಕಿಯ ಜಿ300 ಮಂಗಳದಂದು ಅಮೇರಿಕನಲ್ಲಿ ಲಾಂಚ್ ಆಗಲಿದೆ

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಫೋನಿನ ಅಧಿಕೃತ ಲಾಂಚ್ ಅಮೇರಿಕಲ್ಲಿ ಅಕ್ಟೋಬರ್ 19 ರಂದು ಆಗಲಿದ್ದು ಅಲ್ಲಿ 4ಜಿಬಿ ಮತ್ತು 64ಜಿಬಿ ಸ್ಟೋರೇಜ್ ಒಳಗೊಂಡ ಫೋನಿನ ಬೆಲೆ 199 ಡಾಲರ್ ಆಗಿರಲಿದೆ. ಭಾರತದಲ್ಲಾದರೆ, ರೂ. 15,000.

ನೊಕಿಯ ಜಿ300 5ಜಿ ಹೊಸ ಫೋನನ್ನು ಲಾಂಚ್ ಮಾಡಲು ಕಂಪನಿಯು ಸಿದ್ಧತೆಗಳನ್ನು ಮಾಡಿಕೊಂಡಿದೆ. ನೊಕಿಯಾ ಬ್ರ್ಯಾಂಡ್ ಲೈಸೆನ್ಸೀಯಾಗಿರುವ ಹೆಚ್ಎಮ್ಡಿ ಗ್ಲೋಬಲ್ ಬಿಡುಗಡೆ ಮಾಡುತ್ತಿರುವ ವಾಟರ್ಡ್ರಾಪ್-ಶೈಲಿ ಹಂತ ವಿನ್ಯಾಸ ಹೊಂದಿರುವ ಹೊಸ ಮಾಡೆಲ್ ಹಿಂಭಾಗದಲ್ಲಿ ಮೂರು ಕೆಮೆರಾಗಳೊಂದಿಗೆ ಬರುತ್ತದೆ. ಈ ಫೋನಿಗೆ ಒಜೆಡ್ಒ ಆಡಿಯೋ ಸಪೋರ್ಟ್ ಸಹ ಇದ್ದು ವಿಡಿಯೋಗಳಿಗೆ ಮೂರು-ಡೈಮೆನ್ಷನ್ ಅನುಭವ ನೀಡುತ್ತದೆ ಎಂದು ಕಂಪನಿ ಕ್ಲೇಮ್ ಮಾಡಿದೆ. ನೊಕಿಯ ಜಿ300 ಫೋನಲ್ಲಿ ನೈಟ್ ಮೋಡ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (ಈಐಎಸ್) ಸೇರಿದಂತೆ ಇತರ ಕೆಲ ವೈಶಿಷ್ಟ್ಯಗಳನ್ನು ಪ್ರೀ-ಲೋಡ್ ಮಾಡಲಾಗಿದೆ. ಮುಂದಿನ ಪೀಳಿಗೆಯ ಸೆಲ್ಯುಲಾರ್ ಸಂಪರ್ಕಕ್ಕಾಗಿ, ನೋಕಿಯಾ ಜಿ300 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 ಎಸ್ಒಸಿ ಹೊಂದಿದೆ. ಫೋನ್ 18ಡಬ್ಲ್ಯೂ ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಸೆಲ್ಫೀ ಮತ್ತು ವೀಡಿಯೋ ಚಾಟ್‌ಗಳಿಗಾಗಿ, ನೋಕಿಯಾ G300 ಮೊಬೈಲ್ ಸೆಟ್ ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕೆಮೆರಾವನ್ನು ಅಳವಡಿಸಲಾಗಿದೆ, ನೋಕಿಯಾ ಜಿ 300 ಮೈಕ್ರೊ ಎಸ್ಡಿ ಕಾರ್ಡ್ (1ಟಿಬಿ ವರೆಗೆ) ಮೂಲಕ ವಿಸ್ತರಣೆಯನ್ನು ಬೆಂಬಲಿಸುವ 64 ಜಿಬಿ ಆನ್‌ಬೋರ್ಡ್ ಸಂಗ್ರಹದೊಂದಿಗೆ ಬರುತ್ತದೆ. ಸಂಪರ್ಕ ಆಯ್ಕೆಗಳಲ್ಲಿ 5ಜಿ, 4ಜಿ ಎಲ್ಟಿಇ, ವೈ-ಫೈ 802.11ಎಸಿ, ಬ್ಲೂ ಟೂತ್ ವಿ5, ಜಿಪಿಎಸ್/ ಎ-ಜಿಪಿಎಸ್, ಎನ್ ಎಫ್ಸಿ, ಯೂಎಸ್ಬಿ ಟೈಪ್-C ಮತ್ತು 3.5 ಎಮ್ ಎಮ್ ಹೆಡ್‌ಫೋನ್ ಜ್ಯಾಕ್ ಸೇರಿವೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದ್ದು ಅದನ್ನು ಪವರ್ ಬಟನ್‌ನಲ್ಲಿ ಅಳವಡಿಸಲಾಗಿದೆ.

ಮೆಟಾಯರ್ ಗ್ರೇ ಬಣ್ಣದಲ್ಲಿ ಮಾತ್ರ ಸಿಗಲಿರುವ ನೊಕಿಯ ಜಿ ಬೆಲೆಯನ್ನು ನಿಮಗೆ ತಿಳಿಸದೆ ಹೋದರೆ, ನಮ್ಮ ಉದ್ದೇಶ ಅಪೂರ್ಣವೆನಿಸುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಫೋನಿನ ಅಧಿಕೃತ ಲಾಂಚ್ ಅಮೇರಿಕಲ್ಲಿ ಅಕ್ಟೋಬರ್ 19 ರಂದು ಆಗಲಿದ್ದು ಅಲ್ಲಿ 4ಜಿಬಿ ಮತ್ತು 64ಜಿಬಿ ಸ್ಟೋರೇಜ್ ಒಳಗೊಂಡ ಫೋನಿನ ಬೆಲೆ 199 ಡಾಲರ್ ಆಗಿರಲಿದೆ. ಭಾರತದಲ್ಲಾದರೆ, ರೂ. 15,000.

ಆದರೆ, ಬೇರೆ ದೇಶಗಳಲ್ಲಿ ದರ ಎಷ್ಟು ನಿಗದಿಗೊಳಿಸಬೇಕು ಎನ್ನುವ ಕುರಿತು ಇನ್ನೂ ನಿರ್ಣಯ ತೆಗೆದುಕೊಂಡಿಲ್ಲವಂತೆ.

ಇದನ್ನೂ ಓದಿ:  Viral Video: ರೈಲಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ವ್ಯಕ್ತಿ! ನೆಟ್ಟಿಗರ ಮನಗೆದ್ದ ವಿಡಿಯೋ ನೋಡಿ

Click on your DTH Provider to Add TV9 Kannada