ನವರಾತ್ರಿ ಉತ್ಸವನಲ್ಲಿ ಬೆಳ್ಳಿಪರದೆಯ ಬೆಡಗಿಯರು ಪಿಂಕ್ ಬಣ್ಣದ ಉಡುಗೆಗಳನ್ನು ತೊಟ್ಟು ನಳನಳಿಸಿದ್ದು

ನವರಾತ್ರಿ ಉತ್ಸವನಲ್ಲಿ ಬೆಳ್ಳಿಪರದೆಯ ಬೆಡಗಿಯರು ಪಿಂಕ್ ಬಣ್ಣದ ಉಡುಗೆಗಳನ್ನು ತೊಟ್ಟು ನಳನಳಿಸಿದ್ದು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 16, 2021 | 5:23 PM

ಈಗ ಹೆಸರು ಮಾಡುತ್ತಿರುವ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರು. ಪಿಂಕ್ ಪ್ರಿಂಟೆಡ್ ಸೀರೆ ಮತ್ತು ತೋಳಿಲ್ಲದ ರವಿಕೆಯಲ್ಲಿ ಅವರು ಅಪ್ಸರೆಯಂತೆ ಕಾಣುತ್ತಿದ್ದಾರೆ. ಸೀರೆಯಲ್ಲಿ ಅವರ ಮೈಮಾಟ ಎದ್ದುಕಾಣುತ್ತಿದೆ.

ಕೇವಲ ಸಿನಿಮಾ ತಾರೆಯರೇ ಅಂತಲ್ಲ ಎಲ್ಲ ಮಹಿಳೆಯರಿಗೆ ಗುಲಾಬಿ, ತಿಳಿ ಗುಲಾಬಿ ಬಣ್ಣ ಅಂದರೆ ಬಹಳ ಇಷ್ಟ ಮಾರಾಯ್ರೇ. ಈಗ ಗುಲಾಬಿ ಹೂ ಹಲವಾರು ಬಣ್ಣಗಳಲ್ಲಿ ಬರುತ್ತಿರುವುದರಿಂದ ನಾವು ಪಿಂಕ್ ಶಬ್ದಕ್ಕೆ ಜೋತು ಬೀಳೋಣ. ಓಕೆ, ನಟಿಯರು ಸಿನಿಮಾಗಳಲ್ಲಿ ಪಿಂಕ್ ಬಣ್ಣದ ಉಡುಗೆಗಳಲ್ಲಿ ಮಿಂಚುವ ಹಾಗೆ ನಿಜ ಬದುಕಿನಲ್ಲೂ ಅದರಲ್ಲೂ ವಿಶೇಷವಾಗಿ ಹಬ್ಬ ಇಲ್ಲವೇ ಪಾರ್ಟಿಗಳಲ್ಲಿ ಆ ಬಣ್ಣದ ಡ್ರೆಸ್, ಸೀರೆ ಉಟ್ಟು ಲಕಲಕ ಹೊಳೆಯುತ್ತಿರುತ್ತಾರೆ. ಪ್ರತಿವರ್ಷ ದಸರಾ ಹಬ್ಬ ಸಂದರ್ಭದಲ್ಲಿ ನವರಾತ್ರಿ ಉತ್ಸವ ನಡೆಯುವಾಗ ನಟಿಯರು ದಿನಕ್ಕೊಂದು ಬಗೆಯ ಡ್ರೆಸ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ತಾರೆಯರೆಲ್ಲ ಸೌಂದರ್ಯದ ಖನಿಗಳೇ. ಪಿಂಕ್ ಉಡುಗೆಗಳಲ್ಲಿ ಅವರ ಮತ್ತಷ್ಟು ರೂಪವಂತೆಯರಾಗಿ ಕಾಣುತ್ತಾರೆ. ಈ ವಿಡಿಯೋನಲ್ಲಿ ಪಿಂಕ್ ಉಡುಗೆ ತೊಟ್ಟಿರುವ ತಾರೆಯರನ್ನು ನೋಡಿದರೆ ನಿಮಗೆ ಅದು ಸ್ಪಷ್ಟವಾಗುತ್ತದೆ.

ಕನ್ನಡತಿ ಶಿಲ್ಪಾ ಶೆಟ್ಟಿ ಅದ್ಭುತವಾದ ದೇಹಸಿರಿ ಹೊಂದಿರುವ ಲಾವಣ್ಯವತಿ. ವೈಯಕ್ತಿಕ ಬದುಕಿನಲ್ಲಿ ನಡೆದ ಆಘಾತಕಾರಿ ಘಟನೆಯಿಂದ ಅವರು ಚೇತರಿಸಿಕೊಂಡು ಮೊದಲಿನಂತೆ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಅವರ ಎತ್ತರದ ನಿಲುವು, ಸೌಂದರ್ಯ ಮತ್ತು ಮೈಮಾಟಕ್ಕೆ ಪಿಂಕ್ ಸೀರೆ ಅತ್ಯಾಕರ್ಷಕ ಮೆರಗು ನೀಡಿದೆ.

ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ಗೆ ಈಗ 54 ರ ಪ್ರಾಯ ಅಂದರೆ ನೀವು ನಂಬ್ತೀರಾ? ಮಾಧುರಿ, ರೇಖಾ, ಕಾಜೋಲ್, ಟ್ವಿಂಕಲ್ ಖನ್ನಾ ಇವರೆಲ್ಲ ಯಾವತ್ತೂ ಮಾಸದ ಚೆಲುವಿನ ಒಡತಿಯರು. ಇಲ್ಲಿ ಮಾಧುರಿ ಪಿಂಕ್ ಬಣ್ಣದ ಶರಾರಾ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ.

ಈಗ ಹೆಸರು ಮಾಡುತ್ತಿರುವ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರು. ಪಿಂಕ್ ಪ್ರಿಂಟೆಡ್ ಸೀರೆ ಮತ್ತು ತೋಳಿಲ್ಲದ ರವಿಕೆಯಲ್ಲಿ ಅವರು ಅಪ್ಸರೆಯಂತೆ ಕಾಣುತ್ತಿದ್ದಾರೆ. ಸೀರೆಯಲ್ಲಿ ಅವರ ಮೈಮಾಟ ಎದ್ದುಕಾಣುತ್ತಿದೆ.

ಪಟೌಡಿ ಮನೆತನದ ಹುಡುಗಿ ಸಾರಾ ಅಲಿ ಖಾನ್ ಪಿಂಕ್ ಲೆಹೆಂಗಾನಲ್ಲಿ ಮುದ್ದುಮುದ್ದಾಗಿ ಕಾಣುತ್ತಿದ್ದಾರೆ. ಅವರ ಮೈಬಣ್ಣವೂ ಪಿಂಕ್ ಅಗಿದೆ. ಅಂದಹಾಗೆ, ಸಾರಾ ಅವರ ತಾಯಿ ಅಮೃತಾ ಸಿಂಗ್ ಪಂಜಾಬನ್ ಆಗಿರುವುದರಿಂದ ಸಾರಾ, ದಸರಾ, ದೀಪಾವಳಿ ಹಬ್ಬಗಳನ್ನೂ ವಿಜೃಂಭಣೆಯಿಂದ ಆಚರಿಸುತ್ತಾರೆ.

ಶ್ರದ್ಧಾ ಕಪೂರ್, ಆಲಿಯಾ ಭಟ್, ಕೃತಿ ಸನೋನ್ ಸಹ ಪಿಂಕ್ ಉಡುಗೆಗಳನ್ನು ತೊಟ್ಟು ವಿಜಯದಶಮಿಯನ್ನು ಆಚರಿಸುತ್ತಿದ್ದಾರೆ.

ಇದನ್ನೂ ಓದಿ:  Pragya Thakur: ನಾನು ಕಬಡ್ಡಿಯಾಡಿದ್ದನ್ನು ವಿಡಿಯೋ ಮಾಡಿದವರು ರಾವಣರು; ಬಿಜೆಪಿ ನಾಯಕಿ ಪ್ರಗ್ಯಾ ಠಾಕೂರ್ ಆಕ್ರೋಶ