Pragya Thakur: ನಾನು ಕಬಡ್ಡಿಯಾಡಿದ್ದನ್ನು ವಿಡಿಯೋ ಮಾಡಿದವರು ರಾವಣರು; ಬಿಜೆಪಿ ನಾಯಕಿ ಪ್ರಗ್ಯಾ ಠಾಕೂರ್ ಆಕ್ರೋಶ
Viral Video: ಕಬಡ್ಡಿ ಆಡಿದ ವಿಡಿಯೋಗೂ ಮೊದಲು ಪ್ರಜ್ಞಾ ಸಿಂಗ್ ಠಾಕೂರ್ ಬಾಸ್ಕೆಟ್ ಬಾಲ್ ಆಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ಹೀಗಾಗಿ, ಜೈಲು ವಾಸದಿಂದ ತಪ್ಪಿಸಿಕೊಳ್ಳಲು ಅವರು ಅನಾರೋಗ್ಯದ ಕಾರಣವೊಡ್ಡಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದರು.
ಭೂಪಾಲ್: ಮಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಭೂಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿತ್ತು. ಆದರೆ ಮೈದಾನದಲ್ಲಿ ಅವರು ಕಬಡ್ಡಿ ಆಡುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು. ವೈದ್ಯಕೀಯ ಕಾರಣ ನೀಡಿ ಜಾಮೀನು ಪಡೆದಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುವಷ್ಟು ದೈಹಿಕವಾಗಿ ಫಿಟ್ ಇದ್ದಾರೆ ಎಂದ ಮೇಲೆ ಜಾಮೀನು ಪಡೆದಿದ್ದೇಕೆ? ಎಂದು ಹಲವು ಆ ವಿಡಿಯೋ ನೋಡಿ ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಜ್ಞಾ ಸಿಂಗ್, ನಾನು ಕಬಡ್ಡಿ ಆಡಿರುವ ವಿಡಿಯೊ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದವರು ರಾವಣರು ಎಂದಿದ್ದಾರೆ. ನನ್ನ ವಿಡಿಯೋ ಮಾಡಿ ವೈರಲ್ ಮಾಡಿದವರ ಮುಂದಿನ ಜನ್ಮ ಹಾಳಾಗಿ ಹೋಗುತ್ತದೆ ಎಂದು ಶಾಪವನ್ನೂ ಹಾಕಿದ್ದಾರೆ!.
Pragya Thakur, 51, is out on bail in the Malegaon blasts case on health grounds and has begged off several court hearings over medical issues. But critics say the BJP MP has displayed no infirmity in recent videos that went viral.After Garba Dance,Pragya Thakur Plays Kabaddi pic.twitter.com/LDTbDRglRk
— S H B Kalai (@shbkalai) October 14, 2021
ಜಾಮೀನು ಪಡೆದ ಬಳಿಕ ಸಾಕಷ್ಟು ಸಮಯದಿಂದ ವ್ಹೀಲ್ ಚೇರ್ ಮೇಲೆ ಕುಳಿತೇ ಸಂಚರಿಸುವ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುತ್ತಿರುವ ವಿಡಿಯೋ ನೋಡಿದವರು ಆಶ್ಚರ್ಯ ಹೊರಹಾಕಿದ್ದರು. ಇದಕ್ಕೂ ಮೊದಲು ಅವರು ಬಾಸ್ಕೆಟ್ ಬಾಲ್ ಆಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ಹೀಗಾಗಿ, ಜೈಲು ವಾಸದಿಂದ ತಪ್ಪಿಸಿಕೊಳ್ಳಲು ಅವರು ಅನಾರೋಗ್ಯದ ಕಾರಣವೊಡ್ಡಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದರು.
BJP MP Pragya Singh Thakur, who was confined to a wheelchair for a long time and had obtained bail in 2008 Malegaon blast case on medical grounds, termed the one who shot a video showing her playing kabaddi, ‘Ravana’; said his old age, next birth will get spoiled
— Press Trust of India (@PTI_News) October 16, 2021
ನಾನು ಎರಡು ದಿನಗಳ ಹಿಂದೆ ದುರ್ಗಾ ಪೂಜೆಯ ವೇಳೆ ಆರತಿ ಬೆಳಗಲು ಹೋಗಿದ್ದೆ. ಮೈದಾನದಲ್ಲಿ ಆಟವಾಡುತ್ತಿದ್ದ ಕೆಲವು ಕ್ರೀಡಾಪಟುಗಳು ನನಗೆ ಕಬಡ್ಡಿ ಆಡುವಂತೆ ಕೇಳಿಕೊಂಡರು. ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಸಿಂಧಿಗಳಲ್ಲಿ ಯಾರೋ ರಾವಣನ ವ್ಯಕ್ತಿತ್ವದವರು ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಿನಂತೆ ನೋಡುತ್ತಿದ್ದಾರೆ. ದೇಶಭಕ್ತರು, ಕ್ರಾಂತಿಕಾರಿಗಳು, ನನ್ನ ರೀತಿಯ ಸಂತರೊಡನೆ ಸಂಘರ್ಷಕ್ಕಿಳಿದರೆ ನಿಮ್ಮ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗಿ ಹೋಗುತ್ತದೆ ಎಂದು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Nitin Gadkari: ಬೇರೆ ಪ್ರಯಾಣಿಕರೊಂದಿಗೆ ಕ್ಯೂನಲ್ಲಿ ನಿಂತು ವಿಮಾನ ಹತ್ತಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ವಿಡಿಯೋ ವೈರಲ್
Viral Video: ಮೊದಲ ಬಾರಿ ವಿಮಾನ ಹತ್ತಿದ ಮಗಳಿಗೆ ಸರ್ಪ್ರೈಸ್ ಕೊಟ್ಟ ಅಪ್ಪ; ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ!