ಜಪಾನಿನ ಕವಾಸಕಿ 4 ವರ್ಷಗಳ ನಂತರ ಇಲೆಕ್ಟ್ರಿಕ್ ಬೈಕ್ ತಯಾರಿಸಲಿದೆ, ಮಾರಾಟ ಮಾತ್ರ ಕೇವಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ!

ಗಮನಿಸಬೇಕಾದ ಸಂಗತಿಯೇನಂದರೆ, ಕವಾಸಕಿ ಕೇವಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ತನ್ನ ಎಲೆಕ್ಟ್ರಿಕ್ ಬೈಕ್ ಗಳನ್ನು ಮಾರಾಟ ಮಾಡಲಿದೆ. 2035 ಹೊತ್ತಿಗೆ ಅದು ಅಮೆರಿಕ, ಕೆನಡ, ಯುರೋಪ್, ಆಸ್ಟ್ರೇಲಿಯ ಮತ್ತು ಜಪಾನ್ಗಳಲ್ಲಿ ಮಾತ್ರ ವಿದ್ಯುಚ್ಛಾಲಿತ ಬೈಕ್​ಗಳನ್ನು ಬಿಡುಗಡೆ ಮಾಡಲಿದೆ.

TV9kannada Web Team

| Edited By: Arun Belly

Oct 16, 2021 | 7:56 PM

ಜಪಾನಿನ ಮೋಟಾರು ಸೈಕಲ್ ತಯಾರಿಕೆ ಕಂಪನಿ ಕವಾಸಕಿ ಒಂದು ದೊಡ್ಡ ನಿರ್ಧಾರಕ್ಕೆ ಬಂದಿದೆ. 2025 ರಿಂದ 2035ರವರೆಗೆ ಕೇವಲ ಎಲೆಕ್ಟ್ರಿಕ್ ಬೈಕ್ ಮತ್ತು ಮತ್ತು ಸ್ಕೂಟರ್ಗಳನ್ನು ಮಾತ್ರ ತಯಾರಿಸುತ್ತದಂತೆ. 2025 ರವರೆಗೆ ಅಂದರೆ ಇನ್ನು 4 ವರ್ಷಗಳ ಕಾಲ ಮಾತ್ರ ಅದು ಪೆಟ್ರೋಲ್ ಇಲ್ಲವೇ ಗ್ಯಾಸ್ನಿಂದ ಓಡುವ ಬೈಕ್ಗಳನ್ನು ತಯಾರಿಸಲಿದೆ. ಈ 4 ವರ್ಷಗಳಲ್ಲಿ ಅದು ತನ್ನ ಪ್ರತಿಸ್ಪರ್ಧಿಗಳಿಗೆ ಸ್ಪರ್ಧೆ ಒಡ್ಡುವಂಥ ಬೈಕ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವುದದೇ ಎಂಬ ಪ್ರಶ್ನೆ ಉದ್ಭವವಾಗಿದೆಯಾದರೂ, ಈಗ ಅದರ ಗಮನವೆಲ್ಲ ಎಲೆಕ್ಟ್ರಿಕ್ ಬೈಕ್ಗಳನ್ನು ತಯಾರಿಸುವುದರ ಮೇಲೆ ಕೇಂದ್ರೀಕೃವಾಗಿರುವುದರಿಂದ ಖುದ್ದು ಕಾವಾಸಾಕಿ ಕಂಪನಿಯೇ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ.

ಆದರೆ ಗಮನಿಸಬೇಕಾದ ಸಂಗತಿಯೇನಂದರೆ, ಕವಾಸಕಿ ಕೇವಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ತನ್ನ ಎಲೆಕ್ಟ್ರಿಕ್ ಬೈಕ್ ಗಳನ್ನು ಮಾರಾಟ ಮಾಡಲಿದೆ. 2035 ಹೊತ್ತಿಗೆ ಅದು ಅಮೆರಿಕ, ಕೆನಡ, ಯುರೋಪ್, ಆಸ್ಟ್ರೇಲಿಯ ಮತ್ತು ಜಪಾನ್ಗಳಲ್ಲಿ ಮಾತ್ರ ವಿದ್ಯುಚ್ಛಾಲಿತ ಬೈಕ್​ಗಳನ್ನು ಬಿಡುಗಡೆ ಮಾಡಲಿದೆ.

ಅದರರ್ಥ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅದು ಮಾಮೂಲು ಬೈಕ್ಗಳನ್ನು ತಯಾರು ಮಾಡಲಿದೆ. ಕಂಪನಿ ಬಿಡುಗಡೆ ಮಾಡಿರುವ ಹೇಳಿಕೆ ಕೊಂಚ ಗೊಂದಲಮಯವಾಗಿದೆ. ವಿಷಯಗಳ ಬಗ್ಗೆ ಸ್ಪಷ್ಟತೆಯಿಲ್ಲ.

ಗಮನಹರಿಸಬೇಕಾದ ಮತ್ತೊಂದು ಅಂಶವೆಂದರೆ, ಕವಾಸಕಿ ಸಂಸ್ಥೆಗೆ ಇದುವರೆಗೆ ಇಲೆಕ್ಟ್ರಿಕ್ ಬೈಕ್ ಗಳನ್ನು ತಯಾರಿಸಿರುವ ಅನುಭವವಿಲ್ಲ. 4 ವರ್ಷಗಳ ಹಿಂದೆ ಮಿಲಾನ್ನಲ್ಲಿ ನಡೆದ ಈ ಐ ಸಿ ಎಮ್ ಎ ಮೊಟಾರ್ಸೈಕಲ್ ಶೋನಲ್ಲಿ ಕಂಪನಿಯ ಮಾಲೀಕರು ಎಲೆಕ್ಟ್ರಿಕ್ ವಾಹನಗಳನ್ನು ತಯಾರು ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಅದಾದ ಮೇಲೆ ಕಂಪನಿಯು ಸ್ವ್ಯಾಪೇಬಲ್ ಬ್ಯಾಟರಿಗಳನ್ನು ಅಳವಡಿಸಿದ ನಿಂಜಾ 400 ಎಲೆಕ್ಟ್ರಿಕ್ ವಾಹನ ತಯಾರಿಸುತ್ತಿರುವ ಕುರಿತು ವದಂತಿ ಹರಡಿತ್ತು. ಮುಂದೇನಾಯ್ತೋ ಯಾರಿಗೂ ಗೊತ್ತಿಲ್ಲ.

ಆದರೆ ನಮಗೆ ಈಗ ಲಭ್ಯವಾಗಿರುವ ಮಾಹಿತಿ ಏನೆಂದರೆ, 2025 ರ ಹೊತ್ತಿಗೆ ಕವಾಸಕಿ ಸಂಸ್ಥೆಯು 10 ಎಲೆಕ್ಟ್ರಿಕ್ ಬೈಕ್ ಗಳನ್ನು ಲಾಂಚ್ ಮಾಡುವ ಸಂಕಲ್ಪ ತೊಟ್ಟಿದೆ.

ಓಕೆ ನಿಮ್ಮ ಮಾಹಿತಿಗಾಗಿ ಇದನ್ನು ಹೇಳುತ್ತಿದ್ದೇವೆ. ಕಂಪನಿಯು ಪ್ರತಿವರ್ಷ 3,80,000 ಬೈಕ್ಗಳನ್ನು ತಯಾರಿಸುತ್ತದೆ ಮತ್ತು ಉತ್ತರ ಅಮೆರಿಕಾನಲ್ಲಿ ಕವಾಸಕಿ ಬೈಕ್​ಗಳು ಬಹಳ ಜನಪ್ರಿಯ.

ಇದನ್ನೂ ಓದಿ:  Viral Videos: ಆಹಾ, ಇಷ್ಟೊಂದು ಮುದ್ದುಮುದ್ದಾಗಿ ಕದಿಯಬಹುದಾ?; ಚಾಣಾಕ್ಷ ಶ್ವಾನಗಳ ವಿಡಿಯೋ ನೋಡಿ

Follow us on

Click on your DTH Provider to Add TV9 Kannada