ಉಪೇಂದ್ರ ಬಗ್ಗೆ ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಸುದೀಪ್​ ಮಾತು; ಉಪ್ಪಿ ಅಂದ್ರೆ ಸ್ಫೂರ್ತಿಯ ಕಿಚ್ಚು

ಉಪೇಂದ್ರ ಬಗ್ಗೆ ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಸುದೀಪ್​ ಮಾತು; ಉಪ್ಪಿ ಅಂದ್ರೆ ಸ್ಫೂರ್ತಿಯ ಕಿಚ್ಚು

TV9 Web
| Updated By: ಮದನ್​ ಕುಮಾರ್​

Updated on: Oct 24, 2021 | 9:58 AM

ಸುದೀಪ್​ ಅವರಿಗೆ ಕಾಲೇಜು ದಿನಗಳಿಂದಲೇ ಉಪೇಂದ್ರ ಸ್ಫೂರ್ತಿ ಆಗಿದ್ದರು. ಆ ಕಾಲವನ್ನು ಕಿಚ್ಚ ಮೆಲುಕು ಹಾಕಿದರು. ಈ ಮಾತುಗಳಿಗೆ ‘ಕೋಟಿಗೊಬ್ಬ 3’ ಚಿತ್ರದ ಸಕ್ಸಸ್​ ಮೀಟ್​ ವೇದಿಕೆ ಸಾಕ್ಷಿ ಆಯಿತು.

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಚಿತ್ರ ಗೆದ್ದು ಬೀಗುತ್ತಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾಗೆ ಒಳ್ಳೆಯ ಆದಾಯ ಸಿಕ್ಕಿದೆ. ಬಿಡುಗಡೆ ಸಮಯದಲ್ಲಿ ಒಂದಷ್ಟು ವಿಘ್ನಗಳು ಎದುರಾಗಿದ್ದರೂ ಕೂಡ ಅದು ಸಿನಿಮಾದ ಗೆಲುವಿಗೆ ಅಡ್ಡಿ ಬಂದಿಲ್ಲ. ಶನಿವಾರ (ಅ.23) ಈ ಸಿನಿಮಾದ ಸಕ್ಸಸ್​ ಮೀಟ್​ ನಡೆಯಿತು. ಆ ಕಾರ್ಯಕ್ರಮಕ್ಕೆ ‘ರಿಯಲ್​ ಸ್ಟಾರ್​’ ಉಪೇಂದ್ರ ಅವರು ಅತಿಥಿಯಾಗಿ ಆಗಮಿಸಿದ್ದರು. ಆ ವೇದಿಕೆಯಲ್ಲಿ ಉಪ್ಪಿ ಬಗ್ಗೆ ಸುದೀಪ್​ ಪ್ರೀತಿಯ ಮಾತುಗಳನ್ನು ಆಡಿದರು.

ಸುದೀಪ್​ ಅವರಿಗೆ ಕಾಲೇಜು ದಿನಗಳಿಂದಲೇ ಉಪೇಂದ್ರ ಸ್ಫೂರ್ತಿ ಆಗಿದ್ದರು. ಆ ಕಾಲವನ್ನು ವೇದಿಕೆ ಮೇಲೆ ಕಿಚ್ಚ ಮೆಲುಕು ಹಾಕಿದರು. ‘ಅನೇಕ ವಿಚಾರಗಳಲ್ಲಿ ನನಗೆ ನೀವು ಸ್ಫೂರ್ತಿ ತುಂಬಿದ್ದೀರಿ. ತಾಂತ್ರಿಕವಾಗಿ, ಮಾತುಗಾರಿಕೆಯಲ್ಲಿ ನೀವೇ ಸ್ಫೂರ್ತಿ. ಕಾಲೇಜು ದಿನಗಳಲ್ಲಿ ನಾನು ನಿಮ್ಮ ಬಳಿ ಬರುವಾಗ ಕಿಚ್ಚು ಎಬ್ಬಿಸಿದ್ರಿ. ಅದನ್ನು ನಾನು ಯಾವತ್ತೂ ಮರೆಯಲ್ಲ ಸರ್. ಇಂದು ಚಿತ್ರರಂಗದ ಪರವಾಗಿ ನೀವು ನನಗೆ ಧನ್ಯವಾದ ಹೇಳಿದ್ದೀರಿ. ಅದು ನನ್ನ ಪಾಲಿಗೆ ದೊಡ್ಡ ಗೌರವ’ ಎಂದು ಸುದೀಪ್​ ಹೇಳಿದರು.

ಇದನ್ನೂ ಓದಿ:

ನಿರೂಪಣೆಯಿಂದ ಅರುಣ್​ ಸಾಗರ್​ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್​

ಸುದೀಪ್​-ಪ್ರಿಯಾ ದಾಂಪತ್ಯಕ್ಕೆ 20 ವರ್ಷ; ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿಶೇಷ ಕವನ