AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snehith: ಹಲ್ಲೆ ಆರೋಪ; ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲು

Soundarya Jagadeesh: ಸ್ಯಾಂಡಲ್​ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಹಾಗೂ ಇತರರ ಮೇಲೆ ಎಫ್​ಐಆರ್ ದಾಖಲಾಗಿದೆ. ಮಹಿಳೆ ಗೌರವಕ್ಕೆ ಧಕ್ಕೆ, ಹಲ್ಲೆ ಸೇರಿದಂತೆ ವಿವಿಧ ಪರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

Snehith: ಹಲ್ಲೆ ಆರೋಪ; ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲು
ಸ್ನೇಹಿತ್​ ವಿರುದ್ಧ ಹಲ್ಲೆ ಆರೋಪ
TV9 Web
| Updated By: Digi Tech Desk|

Updated on:Oct 25, 2021 | 2:45 PM

Share

Soundarya Jagadish | ಸ್ಯಾಂಡಲ್​ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಪುಂಡಾಟ ಆರೋಪಕ್ಕೆ ಸಂಬಂಧಪಟ್ಟಂತೆ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 354- ಮಹಿಳೆ ಗೌರವಕ್ಕೆ ಧಕ್ಕೆ, ಐಪಿಸಿ ಸೆಕ್ಷನ್ 323-ಕೈಯಿಂದ ಹಲ್ಲೆ ನಡೆಸುವುದು, ಐಪಿಸಿ‌ ಸೆಕ್ಷನ್ 448 ಅತಿಕ್ರಮಣ ಪ್ರವೇಶ, 506 ಜೀವ ಬೆದರಿಕೆ ಸೇರಿ ವಿವಿಧ ಸೆಕ್ಷನ್​ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಹಲ್ಲೆಗೊಳಗಾದವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ. ಬೆಂಗಳೂರಿನ (Bangalore)  ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರಕರಣ ನಡೆದಿತ್ತು.

ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕರಾದ ರಜತ್ ಮನೆಗೆ ನುಗ್ಗಿ ಇಬ್ಬರು ಮಹಿಳಾ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.  ಸ್ನೇಹಿತ್ ಹತ್ತು ಜನ ಬೌನ್ಸರ್​ಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ. ಮಹಿಳೆಯರಿಗೆ ಬಟ್ಟೆ ಹರಿದು ಹೋಗುವಂತೆ ಹಾಗು ಗಾಯವಾಗಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ರಜತ್ ಮನೆ ಕೆಲಸದವರು ಮನೆ ಕಸ ಗುಡಿಸುತ್ತಿದ್ದಾಗ, ಧೂಳು ಬಿದ್ದಿದೆ ಎಂದು ಅರೋಪಿಸಿ ಮನೆ ಕೆಲಸದವರ ಮೇಲೆ ಹಲ್ಲೆ ನಡೆಸಲಾಗಿದೆ. ನಂತರ ರಜತ್ ಮನೆಯ ಒಳಗೆ ನುಗ್ಗಿ ಗಲಾಟೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಜೊತೆಗೆ ಈ ಹಿಂದೆಯೂ ಮೂರು ಬಾರಿ ಸ್ನೇಹಿತ್ ಮತ್ತು ತಂಡ ಗಲಾಟೆ ನಡೆಸಿತ್ತು. ಪ್ರಕರಣದ ಕುರಿಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಸೌಂದರ್ಯ ಜಗದೀಶ್ ಮತ್ತು ರೇಖ ಹೇಳಿದ್ದೇನು? ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಈಸ್ಟ್ ವೆಸ್ಟ್ ಗ್ರೂಪ್ ಮಾಲಿಕ ರಜತ್ ಅವರ ಮನೆ ಕೆಲಸದವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಸೌಂದರ್ಯ ಜಗದೀಶ್ ಮತ್ತು ರೇಖ ಟಿವಿನೈನ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಅವರ ಬೌನ್ಸರ್​​ಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಪ್ರತಕ್ರಿಯೆ ನೀಡಿರುವ ಸೌಂದರ್ಯ ಜಗದೀಶ್ ಮತ್ತು ರೇಖ, ‘‘ಯಾವ ಉದ್ದೇಶಕ್ಕೆ ಈ ರೀತಿ ಮಾಡುತ್ತಾ ಇದ್ದಾರೆ ಗೊತ್ತಿಲ್ಲ. ಮನೆ ಕೆಲಸದವರು ಜಗಳ ಮಾಡಿಕೊಂಡಿದ್ದಾರೆ. ಆ ಸಮಯದಲ್ಲಿ ನಾವು ಮನೆಯಲ್ಲಿ ಇರಲಿಲ್ಲ, ಹೊರಗಡೆ ಹೋಗಿದ್ದೆವು’’ ಎಂದು ಹೇಳಿದ್ದಾರೆ.

‘‘ಮನೆಯಿಂದ ಹೊರಹೋಗಿದ್ದ ಸಮಯದಲ್ಲಿ ನಮ್ಮ ಮನೆ ಕೆಲಸದವರು, ಅವರ ಮನೆ ಕೆಲಸದವರು ಜಗಳ ಆಡಿದ್ದಾರೆ. ನಾವು ಬಂದ ಬಳಿಕ ಘಟನೆ ಬಗ್ಗೆ ಹೇಳಿದರು. ಈ ವೇಳೆ ಏನ್ ಆಯ್ತು ಅಂತ ಕೇಳಲು ಹೋಗಿದ್ದಾರೆ. ನಮ್ಮ‌ ಮಕ್ಕಳು ಜಗಳ ಬಿಡಿಸಲು ಹೋಗಿದ್ದಾರೆ.ಈ ಟೈಂನಲ್ಲಿ ಮಾತಿಗೆ ಮಾತು ಬೆಳೆದು ಹೀಗೆ ಆಗಿದೆ. ನಮಗೆ ಗಲಾಟೆ ಮಾಡೋ ಉದ್ದೇಶ ಇರಲಿಲ್ಲ’’ ಎಂದು  ಸೌಂದರ್ಯ ಜಗದೀಶ್ ಮತ್ತು ರೇಖ ಟಿವಿನೈನ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

ಸ್ಯಾಂಡಲ್​ವುಡ್​ ನಿರ್ಮಾಪಕನ ಮಗನ ಪುಂಡಾಟ? ಕಸ ಗುಡಿಸುವಾಗ ಧೂಳು ಬಿದ್ದಿದ್ದಕ್ಕೆ ರಕ್ತಬರುವಂತೆ ಹಲ್ಲೆ

Shilpa Shetty: ಮಕ್ಕಳು ಹಾಗೂ ತಾಯಿಯೊಂದಿಗೆ ಶಿಲ್ಪಾ ಶೆಟ್ಟಿ ಭರ್ಜರಿ ಸುತ್ತಾಟ; ರಾಜ್ ಕುಂದ್ರಾ ಎಲ್ಲಿ ಎಂದು ಪ್ರಶ್ನಿಸಿದ ಫ್ಯಾನ್ಸ್

Viral Video: ಪುಟ್ಟ ಬಾಲಕ ಏಣಿ ಇಳಿಯುವ ವೇಗ ನೋಡಿ ಬೆರಗಾದ ನೆಟ್ಟಿಗರು; ವಿಡಿಯೋ ಫುಲ್ ವೈರಲ್

Published On - 11:47 am, Sun, 24 October 21

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು