ಸಖತ್​ ಆಗಿದೆ ‘ಸಖತ್’ ಟೀಸರ್​; ಪ್ರೇಕ್ಷಕರ ತಲೆಗೆ ಕುತೂಹಲದ ಹುಳ ಬಿಟ್ಟ ಗಣೇಶ್​, ಸಿಂಪಲ್​ ಸುನಿ

ಸಖತ್​ ಆಗಿದೆ ‘ಸಖತ್’ ಟೀಸರ್​; ಪ್ರೇಕ್ಷಕರ ತಲೆಗೆ ಕುತೂಹಲದ ಹುಳ ಬಿಟ್ಟ ಗಣೇಶ್​, ಸಿಂಪಲ್​ ಸುನಿ
ಸಿಂಪಲ್​ ಸುನಿ, ಗಣೇಶ್​

Sakath movie teaser: ‘ಸಖತ್’​ ಸಿನಿಮಾದಲ್ಲಿ ಗಣೇಶ್​ ಜೊತೆ ಸುರಭಿ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಮುಂತಾದ ಕಲಾವಿದರು ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ.

TV9kannada Web Team

| Edited By: Madan Kumar

Oct 24, 2021 | 12:59 PM


ನಟ ‘ಗೋಲ್ಡನ್​ ಸ್ಟಾರ್​’ ಗಣೇಶ್​ ಮತ್ತು ನಿರ್ದೇಶಕ ಸಿಂಪಲ್​ ಸುನಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಸಖತ್​’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕೌತುಕ ಮೂಡಿದೆ. ಅದನ್ನು ದುಪ್ಪಟ್ಟು ಮಾಡಲು ಈಗ ಟೀಸರ್​ ರಿಲೀಸ್​ ಆಗಿದೆ. ಇದೇ ಮೊದಲ ಬಾರಿಗೆ ಕುರುಡನ ಪಾತ್ರದಲ್ಲಿ ಗಣೇಶ್​ ಕಾಣಿಸಿಕೊಂಡಿದ್ದಾರೆ. ಆದರೆ ಹೀರೋ ಪಾತ್ರಕ್ಕೆ ನಿಜಕ್ಕೂ ಕಣ್ಣಿಲ್ಲವೋ ಅಥವಾ ಕಣ್ಣಿಲ್ಲದ ರೀತಿಯಲ್ಲಿ ಆತ ನಾಟಕ ಮಾಡುತ್ತಾನೋ ಎಂಬ ಕೌತುಕದ ಪ್ರಶ್ನೆಯನ್ನು ಪ್ರೇಕ್ಷಕರ ಮನದಲ್ಲಿ ಮೂಡಿಸುವಲ್ಲಿ ಈ ಟೀಸರ್ ಯಶಸ್ವಿ ಆಗಿದೆ. ನ.12ಕ್ಕೆ ‘ಸಖತ್​’ ರಿಲೀಸ್​ ಆಗಲಿದೆ.

ಕಾಮಿಡಿ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ತಾಕತ್ತು ಗಣೇಶ್​ ಅವರಿಗಿದೆ. ಅವರ ಜೊತೆ ಸುನಿ ಕೂಡ ಕೈ ಜೋಡಿಸಿದರೆ ಇಬ್ಬರ ಕಾಂಬಿನೇಷನ್​ಗೆ ಆನೆ ಬಲ ಬಂದಂತಾಗುತ್ತದೆ. ಸದ್ಯ ‘ಸಖತ್​’ ಸಿನಿಮಾದಲ್ಲಿ ಇವರಿಬ್ಬರ ಕಾಂಬಿನೇಷನ್​ ಸೂಪರ್​ ಆಗಿ ವಕೌರ್ಟ್​ ಆಗುವ ಲಕ್ಷಣ ಗೋಚರಿಸುತ್ತಿದೆ. ಚಿಕ್ಕ ಟೀಸರ್​ ಮೂಲಕವೇ ಸುನಿ ಮತ್ತು ಗಣೇಶ್​ ಅವರು ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.

ಇಂದು (ಅ.24) ‘ಸಖತ್​’ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇರಲಿದೆ ಎಂಬುದಕ್ಕೆ ಈ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಕಚಗುಳಿ ಇಡುವ ಡೈಲಾಗ್​ಗಳು, ಗಣೇಶ್​ ಅವರ ನಟನೆ, ಜೂಡಾ ಸ್ಯಾಂಡಿ ಸಂಗೀತ ಎಲ್ಲರ ಗಮನ ಸೆಳೆಯುತ್ತಿದೆ. ಗಣೇಶ್​, ಸುನಿ, ಜೂಡಾ ಸ್ಯಾಂಡಿ ಕಾಂಬಿನೇಷನ್​ನಲ್ಲಿ ಈ ಹಿಂದೆ ‘ಚಮಕ್​’ ಚಿತ್ರ ಮೂಡಿಬಂದಿತ್ತು. ಅದು ಕೂಡ ಪ್ರೇಕ್ಷಕರಿಗೆ ತುಂಬ ಇಷ್ಟವಾಗಿತ್ತು. ಈಗ ಮತ್ತೊಮ್ಮೆ ಮೋಡಿ ಮಾಡಲು ಈ ಮೂವರು ಒಂದಾಗಿದ್ದಾರೆ.

(ಸಖತ್​ ಸಿನಿಮಾ ಟೀಸರ್​)

ಸಖತ್​ ಸಿನಿಮಾದಲ್ಲಿ ಗಣೇಶ್​ ಜೊತೆ ಸುರಭಿ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಮುಂತಾದ ಕಲಾವಿದರು ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.​ ನಿಶಾ ವೆಂಕಟ್​ ಕೋನಂಕಿ ಮತ್ತು ಸುಪ್ರಿತ್​ ಬಂಡವಾಳ ಹೂಡಿದ್ದಾರೆ. ಶಾಂತ್​ ಕುಮಾರ್​ ಸಂಕಲನ, ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ.

ಇದಲ್ಲದೇ ನಿರ್ದೇಶಕ ಸುನಿ ಅವರು ‘ಅವತಾರ ಪುರುಷ’ ಚಿತ್ರದ ಬಿಡುಗಡೆಗೂ ಸಿದ್ಧವಾಗುತ್ತಿದ್ದಾರೆ. ಅತ್ತ ಗಣೇಶ್​ ಅವರು ‘ಗಾಳಿಪಟ 2’, ‘ತ್ರಿಬಲ್​ ರೈಡಿಂಗ್​’ ಮುಂತಾದ ಸಿನಿಮಾಗಳ ಕೆಲಸದಲ್ಲೂ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Rathnan Prapancha Movie Review: ಸಂಬಂಧಗಳ ಅರ್ಥ ತಿಳಿಯಲು ಪ್ರಪಂಚ ಸುತ್ತಿದ ರತ್ನ; ಧನಂಜಯ ಖಾತೆಗೆ ಇನ್ನೊಂದು ಭಿನ್ನ ಸಿನಿಮಾ

Follow us on

Related Stories

Most Read Stories

Click on your DTH Provider to Add TV9 Kannada