‘ದಯವಿಟ್ಟು ಸಿನಿಮಾ ಮಾಡೋದು ನಿಲ್ಲಿಸಣ್ಣ..’: ನಿಖಿಲ್​ ಕುಮಾರಸ್ವಾಮಿಗೆ ಮನವಿ ಮಾಡಿದ್ದು ಯಾರು?

ಸಿನಿಮಾ ಕ್ಷೇತ್ರದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ಸಖತ್​ ಆಸಕ್ತಿ ಇದೆ. ಪ್ರಸ್ತುತ ಅವರು ‘ರೈಡರ್​’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ನಿಖಿಲ್​ ಕುಮಾರಸ್ವಾಮಿ ಅವರು ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಅವರು ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಬಿಟ್ಟುಬಂದು, ಪೂರ್ತಿಯಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂದು ಅನೇಕರು ಬಯಸುತ್ತಿದ್ದಾರೆ. ಈ ಬಗ್ಗೆ ನಿಖಿಲ್​ ಬಹಿರಂಗವಾಗಿಯೇ ಮಾತನಾಡಿದ್ದಾರೆ.

‘ನಮ್ಮದು ರಾಜಕಾರಣದ ಕುಟುಂಬ. ನಾನು ಚಿತ್ರರಂಗ ಬಿಟ್ಟು ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂಬ ಭಾವನೆ ಹಲವು ಜನರಿಲ್ಲಿ ಇರುವುದು ಸತ್ಯ. ಸರವಣ ಅವರು ನನಗೆ ಈ ಮಾತು ಬಹಳ ಸಲ ಹೇಳುತ್ತಿರುತ್ತಾರೆ. ನೀವು ಸಿನಿಮಾ ಮಾಡಿದ್ದು ಸಾಕು ಅಂತ ಹೇಳುತ್ತಾರೆ. ಆದರೆ ನಾನು ರಾಜಕೀಯದಲ್ಲೂ ಸಕ್ರಿಯನಾಗಿದ್ದೇನೆ. ಸದ್ಯಕ್ಕೆ ಒಂದು ಸಿನಿಮಾ ಸಹಿ ಮಾಡಿದ್ದೇನೆ. ಅದನ್ನು ಬಿಡಲು ನನಗೆ ಮನಸ್ಸಾಗುತ್ತಿಲ್ಲ’ ಎಂದು ನಿಖಿಲ್​ ಹೇಳಿದ್ದಾರೆ.

ಇದನ್ನೂ ಓದಿ:

Jaguar: ‘ಜಾಗ್ವಾರ್’ ಚಿತ್ರಕ್ಕೆ 5 ವರ್ಷಗಳ ಸಂಭ್ರಮ; ದಾಸರಹಳ್ಳಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಖಿಲ್

ಮಗು ಜನಿಸಿದ ಬಗ್ಗೆ ಫಸ್ಟ್​ ರಿಯಾಕ್ಷನ್ ನೀಡಿದ ನಿಖಿಲ್​ ಕುಮಾರಸ್ವಾಮಿ

Click on your DTH Provider to Add TV9 Kannada