‘ಭಜರಂಗಿ 2’ ಸಿನಿಮಾದಲ್ಲಿ ತಮ್ಮ ಪಾತ್ರದ ಗುಟ್ಟು ಬಿಚ್ಚಿಟ್ಟ ಭಜರಂಗಿ ಲೋಕಿ

‘ಭಜರಂಗಿ 2’ ಚಿತ್ರದಲ್ಲಿ ಭಜರಂಗಿ ಲೋಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪಾತ್ರ ಹೇಗಿದೆ? ಎಂಬ ಬಗ್ಗೆ ಅವರು ಟಿವಿ9 ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ

‘ಭಜರಂಗಿ 2’ ರಿಲೀಸ್​ಗೆ ಕೌಂಟ್​ಡೌನ್​ ಶುರುವಾಗಿದೆ. ಅಕ್ಟೋಬರ್ 29ರಂದು ಸಿನಿಮಾ ತೆರೆಗೆ ಬರುತ್ತಿದೆ. ಅದನ್ನು ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಇತ್ತೀಚೆಗೆ ‘ಭಜರಂಗಿ 2’ ಸಿನಿಮಾ ಟ್ರೇಲರ್​ ರಿಲೀಸ್​ ಆಗಿತ್ತು. ಟ್ರೇಲರ್ ಮೂಲಕ ಚಿತ್ರ ಹೇಗಿರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನವನ್ನು ಮಾಡಿದ್ದರು ನಿರ್ದೇಶಕ ಎ.ಹರ್ಷ. ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಸಾಕಷ್ಟು ಗಮನ ಸೆಳೆಯುತ್ತಿವೆ.

‘ಭಜರಂಗಿ 2’ ಚಿತ್ರದಲ್ಲಿ ಭಜರಂಗಿ ಲೋಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪಾತ್ರ ಹೇಗಿದೆ? ಈ ಪಾತ್ರ ಮೂಡಿ ಬಂದಿದ್ದು ಹೇಗೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಅವರು ಟಿವಿ9 ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಗಣೇಶ ಚತುರ್ಥಿಗೆ ಶಿವರಾಜ್​ಕುಮಾರ್​ ನಟನೆಯ ಬಹುನಿರೀಕ್ಷಿತ ‘ಭಜರಂಗಿ 2’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದ್ದಿದ್ದರಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಈಗ ಚಿತ್ರ ಅಕ್ಟೋಬರ್ 29ರಂದು ತೆರೆಗೆ ಬರುತ್ತಿದೆ.

ಇದನ್ನೂ ಓದಿ: Bhajarangi 2: ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರದ ಟ್ರೇಲರ್​ನಲ್ಲಿ ಡೈಲಾಗ್ಸ್ ಯಾಕಿಲ್ಲ?; ಇಲ್ಲಿದೆ ಉತ್ತರ

‘ಭಜರಂಗಿ 2’ಗೆ ಗೆಲುವು ಸಿಗಲಿ ಎಂದು ಫ್ಯಾನ್ಸ್​ ಹರಕೆ; ವಿಡಿಯೋ ಕಾಲ್​ ಮಾಡಿ ಮಾತನಾಡಿದ ಶಿವರಾಜ್​ಕುಮಾರ್

Click on your DTH Provider to Add TV9 Kannada