AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jaguar: ‘ಜಾಗ್ವಾರ್’ ಚಿತ್ರಕ್ಕೆ 5 ವರ್ಷಗಳ ಸಂಭ್ರಮ; ದಾಸರಹಳ್ಳಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಖಿಲ್

Nikhil Kumaraswamy: ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಜಾಗ್ವಾರ್’ ಚಿತ್ರಕ್ಕೆ 5 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದಾರೆ.

Jaguar: ‘ಜಾಗ್ವಾರ್’ ಚಿತ್ರಕ್ಕೆ 5 ವರ್ಷಗಳ ಸಂಭ್ರಮ; ದಾಸರಹಳ್ಳಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಖಿಲ್
‘ಜಾಗ್ವಾರ್​’ನಲ್ಲಿ ನಿಖಿಲ್ ಕುಮಾರಸ್ವಾಮಿ
TV9 Web
| Edited By: |

Updated on: Oct 24, 2021 | 4:14 PM

Share

ಬೆಂಗಳೂರು: ನಿಖಿಲ್ ಕುಮಾರಸ್ವಾಮಿಯವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ‘ಜಾಗ್ವಾರ್’ ಚಿತ್ರಕ್ಕೆ ಐದನೇ ವರ್ಷದ ಸಂಭ್ರಮ. ಈ ಹಿನ್ನೆಲೆಯೆಲ್ಲಿ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಕಛೇರಿ ಮುಂಭಾಗದಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಲಾಗಿತ್ತು. ‘ನಿಖಿಲ್ ಸೈನ್ಯ ಸಮಿತಿ’ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥ್, ಮಾಜಿ ಪರಿಷತ್ ಸದಸ್ಯ ಟಿ.ಎ ಶರವಣ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಜಾಗ್ವಾರ್ ಚಿತ್ರದ ತುಣುಕುಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವು, ಕೊರೊನಾದಿಂದ ಸಂಕಷ್ಟದಲ್ಲಿದ್ದ ಜನರಿಗೆ ಕಿಟ್ ವಿತರಣೆಯನ್ನೂ ನಡೆಸಲಾಯಿತು.

ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗಿ ಸೆಲ್ಫಿಗೆ ಮುಗಿಬಿದ್ದರು. ನಂತರ ನಿಖಿಲ್ ಜನರ ನಡುವೆ ಕುಳಿತು ತಮ್ಮದೇ ಚಿತ್ರದ ತುಣುಕುಗಳನ್ನು ವೀಕ್ಷಿಸಿದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸಿದ್ದರು.

ಚಿತ್ರರಂಗ ಹಾಗೂ ರಾಜಕೀಯ ಎರಡು ಕಣ್ಣುಗಳಿದ್ದಂತೆ; ಮಾಜಿ ಪರಿಷತ್ ಸದಸ್ಯ ಟಿ.ಎ ಶರವಣ ಹೇಳಿಕೆ ಕಾರ್ಯಕ್ರಮದಲ್ಲಿ ಮಾಜಿ ಪರಿಷತ್ ಸದಸ್ಯ ಟಿ.ಎ ಶರವಣ ಉಪಸ್ಥಿತರಿದ್ದು ಮಾತನಾಡಿದರು. ‘‘ಕುಮಾರಸ್ವಾಮಿಯವರು ಚಿತ್ರ ವಿತರಕರಾಗಿದ್ದರು. ಆದರೆ ಎಂದೂ ನಟನೆ ಮಾಡಿರಲಿಲ್ಲ. ಚಿತ್ರರಂಗಕ್ಕೆ ನಿಖಿಲ್ ಎಂಟ್ರಿ ಬಗ್ಗೆ ಆರಂಭದಲ್ಲಿ ನನಗೇ ಕುತೂಹಲ ಇತ್ತು. ನಿಖಿಲ್ ಸಿನಿಮಾರಂಗ ಪ್ರವೇಶದ‌ ಬಗ್ಗೆ ಕುಮಾರಣ್ಣ ನನ್ನ ಬಳಿ ಚರ್ಚಿಸಿದ್ದರು. ಇವರಿಗೆ ನಟನೆ ಎಲ್ಲಿ ಬರುತ್ತೆ ಅಂದುಕೊಂಡಿದ್ದೆ. ಆದರೆ ಜಾಗ್ವಾರ್ ಚಿತ್ರ ಬಿಡುಗಡೆಯಾದ ನಂತರವೇ ನಿಖಿಲ್ ಸಾಮರ್ಥ್ಯ ನನಗೆ ತಿಳಿಯಿತು’’ ಎಂದು ಶರವಣ ನಿಖಿಲ್ ಅಭಿನಯವನ್ನು ಹೊಗಳಿದ್ದಾರೆ.

ವಿಧಾನಸಭಾ ಉಪಚುನಾವಣೆಯ ಕುರಿತಂತೆ ಶರವಣ ಮಾತನಾಡುತ್ತಾ, ‘‘ಎರಡು ಕ್ಷೇತ್ರಗಳ ಉಪಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಅಲ್ಲಿ ಬಿಜೆಪಿ, ಕಾಂಗ್ರೆಸ್ ವಿವಾದವನ್ನೇ ಮಾಡುತ್ತಿದ್ದಾರೆ. ಯುವರಾಜ(ನಿಖಿಲ್) ಅಲ್ಲಿಗೆ ಹೋಗಬೇಕಾಗಿತ್ತು. ಸಿನಿಮಾ ಕೆಲಸದ ಕಾರಣ ಹೋಗಲು ಸಾಧ್ಯವಾಗಿಲ್ಲ. ಚಿತ್ರರಂಗ, ರಾಜಕೀಯ ಕ್ಷೇತ್ರಗಳು ಎರಡು ಕಣ್ಣುಗಳು ಇದ್ದಂತೆ. ಎರಡರಲ್ಲೂ ನಿಖಿಲ್ ದೊಡ್ಡ ಮಟ್ಟದ ಯಶಸ್ಸು ಸಿಗಲಿ’’ ಎಂದು ನುಡಿದಿದ್ದಾರೆ.

ಇದನ್ನೂ ಓದಿ:

KBC 13: ನಾನ್ ಸ್ಟಾಪ್ ಸಾಂಸಾರಿಕ ಸಮಸ್ಯೆ ಹೇಳಿಕೊಂಡ ಜೋಡಿ; ಉತ್ತರ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತ ಅಮಿತಾಭ್

ನೋರಾ ಫತೇಹಿಗೆ ಗಿಫ್ಟ್​ ಆಗಿ ಸಿಕ್ಕಿತ್ತು ಐಷಾರಾಮಿ ಕಾರು; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಗೆ ಸಂಕಷ್ಟ

ನಾನು ಬಸ್ ಮಾಲೀಕ, ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸ್ತಿರಲಿಲ್ಲ; ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ