AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಬಸ್ ಮಾಲೀಕ, ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸ್ತಿರಲಿಲ್ಲ; ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ

ನಾನು ಬಸ್ ಮಾಲೀಕನಾಗಿದ್ದೆ. ಕುಮಾರಸ್ವಾಮಿ ಸಾಕಿದ್ದೇ ನಾನು. ನನ್ನ ತಾತನ ಜಮಾನದಿಂದ ಬಸ್ ಇದೆ. ನಿಮ್ಮ ಹಾಗೆ ನಾನು ಬಿಬಿಎಂಪಿಯಲ್ಲಿ ಸ್ಕೂಟರ್ ಇಟ್ಟುಕೊಂಡು ಕಸ ಗಿಡಿಸುತ್ತಿರಲಿಲ್ಲ.

ನಾನು ಬಸ್ ಮಾಲೀಕ, ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸ್ತಿರಲಿಲ್ಲ; ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ
ಶಾಸಕ ಜಮೀರ್ ಅಹ್ಮದ್
TV9 Web
| Updated By: sandhya thejappa|

Updated on:Oct 24, 2021 | 2:14 PM

Share

ಕಲಬುರಗಿ: ಬಸವಕಲ್ಯಾಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಸೂಟ್ಕೇಸ್ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ದಾರೆ. 10 ಕೋಟಿ ಪಡೆದು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದರು. ಜೆಡಿಎಸ್ ಪಕ್ಷ ಸೂಟ್ಕೇಸ್ ರಾಜಕಾರಣವನ್ನ ಮಾಡುತ್ತಿದೆ ಅಂತ ಸಿಂದಗಿ ಪಟ್ಟಣದಲ್ಲಿ ಶಾಸಕ ಜಮೀರ್ ಅಹ್ಮದ್ (Zameer Ahmed) ಆರೋಪಿಸಿದ್ದಾರೆ. 2005 ರಲ್ಲಿ ನನ್ನ ಸೋಲಿಸಲು ಕೈ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿರಲಿಲ್ಲ. ದೇವೇಗೌಡರ ಋಣ ನನ್ನ ಮೇಲಿದೆ. ದೇವೇಗೌಡರರಿಂದ ಶಾಸಕನಾಗಿದ್ದೇನೆ ವಿನಃ ಕುಮಾರಸ್ವಾಮಿ ಇಂದ ಅಲ್ಲ ಅಂತ ಜಮೀರ್ ಹೇಳಿದ್ದಾರೆ.

ನಾನು ಬಸ್ ಮಾಲೀಕನಾಗಿದ್ದೆ. ಕುಮಾರಸ್ವಾಮಿ ಸಾಕಿದ್ದೇ ನಾನು. ನನ್ನ ತಾತನ ಜಮಾನದಿಂದ ಬಸ್ ಇದೆ. ನಿಮ್ಮ ಹಾಗೆ ನಾನು ಬಿಬಿಎಂಪಿಯಲ್ಲಿ ಸ್ಕೂಟರ್ ಇಟ್ಟುಕೊಂಡು ಕಸ ಗಿಡಿಸುತ್ತಿರಲಿಲ್ಲ. ಕುಮಾರಸ್ವಾಮಿ ಬಗ್ಗೆ ಬಿಚ್ಚಿ ಹೇಳಬೇಕಾಗುತ್ತದೆ. ನಾನು ಸುಮ್ಮನೇ ಕೂರುವ ಮಗ ಅಲ್ಲ. ನನ್ನ ತಂಟೆಗೆ ಬಂದರೆ ಎಲ್ಲಾ ಬಿಚ್ಚಿಡಬೇಕಾಗುತ್ತದೆ. ನಮ್ಮ ನಾಯಕ ಸಿದ್ದರಾಮಯ್ಯ ಹುಲಿ ಇದ್ದಂಗೆ. ಕುಮಾರಸ್ವಾಮಿ ಬ್ರದರ್ ಬ್ರದರ್ ಅಂತ ಕತ್ತು ಕುಯ್ಯುತ್ತಾರೆ ಎಂದು ಜಮೀರ್ ತಿಳಿಸಿದರು.

ನಮ್ಮ ನಾಯಕ ಸಿದ್ದರಾಮಯ್ಯ ಹುಲಿ ಇದ್ದಂಗೆ. ನಾನು ಚರ್ಚೆಗೆ ಸಿದ್ಧ, ಬೇಕಾದ್ರೆ ಕುಮಾರಸ್ವಾಮಿ ಬರಲಿ. ಕುಮಾರಸ್ವಾಮಿ ಲಾಭ ಇಲ್ಲದೇ ಯಾವುದೇ ಕೆಲಸ ಮಾಡಲ್ಲ. ಕುಮಾರಸ್ವಾಮಿ ಹಣಕ್ಕಾಗಿ ಅಲ್ಪಸಂಖ್ಯಾತರನ್ನ ಬಲಿ ಕೊಡ್ತಾರೆ. ಕುಮಾರಸ್ವಾಮಿ ಆರ್​ಎಸ್​ಎಸ್ ಚಡ್ಡಿಯನ್ನ ಹಾಕಿರಬಹುದು ಅಂತ ಕುಮಾರಸ್ವಾಮಿ ವಿರುದ್ಧ ಜಮೀರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

2004 ರಲ್ಲಿ ಕುಮಾರಸ್ವಾಮಿ ಆಧಾಯ ನಿಲ್ ಇತ್ತು. 2008 ರಲ್ಲಿ 360 ಕೋಟಿ ರೂಪಾಯಿ ಆಧಾಯ ಕುಮಾರಸ್ವಾಮಿ ತೋರಿಸಿದ್ದಾರೆ. ಇಷ್ಟೊಂದು ಆಧಾಯ ಕುಮಾರಸ್ವಾಮಿ ಅವರಿಗೆ ಎಲ್ಲಿಂದ ಬಂತು. ನಾನು ಮನೆ ಕಟ್ಟಿರೋದು ಕೂಡಾ ಅವರಿಗೆ ಸಹಿಸಲು ಆಗಲಿಲ್ಲ. ನಾನು ಕುಮಾರಸ್ವಾಮಿಗಾಗಿ ಬಸ್ ಡ್ರೈವರ್ ಆಗಿದ್ದೆ. ಕುಮಾರಸ್ವಾಮಿ ಯಾರು ಬೆಳೆಯೋದನ್ನು ಸಹಿಸಲ್ಲಾ. ಅಲ್ಪಸಂಖ್ಯಾತರು ಮಾತ್ರವಲ್ಲಾ, ಒಕ್ಕಲಿಗರು ಕೂಡಾ ಬೆಳೆಯೋದನ್ನ ಸಹಿಸಲ್ಲ. ಜೆಡಿಎಸ್ ಬಿಜೆಪಿ ಜೊತೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ

ಇಬ್ಬರು ಪುತ್ರಿಯರ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ, 4 ವರ್ಷದ ಮಗುವನ್ನು ರಕ್ಷಿಸಿದ ಸ್ಥಳೀಯರು

ಬಿಎಂಟಿಸಿ ಬಸ್​ ಮೇಲೆ ಬಿತ್ತು ರೈಲ್ವೇ ಬ್ರಿಡ್ಜ್​ಗೆ ಹಾಕಿದ್ದ ಕಬ್ಬಿಣದ ಶೀಟ್​; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

Published On - 2:10 pm, Sun, 24 October 21