ಡಿಕೆ ಶಿವಕುಮಾರ್ ಬಗ್ಗೆ ಪಿಸುಮಾತು ವಿಚಾರ: ಘಟನೆಯ ಬಗ್ಗೆ ಕೆಪಿಸಿಸಿಗೆ ಉತ್ತರ ನೀಡಿದ ವಿಎಸ್ ಉಗ್ರಪ್ಪ
Karnataka Congress: ಘಟನೆಯ ಬಗ್ಗೆ ವಿ.ಎಸ್. ಉಗ್ರಪ್ಪ ಉತ್ತರ ಕೊಟ್ಟಿದ್ದಾರೆ. ಮುಚ್ಚಿದ ಲಕೋಟೆಯಲ್ಲಿಟ್ಟಿದ್ದಾರೆ. ಉಗ್ರಪ್ಪ ಅವರ ಉತ್ತರವನ್ನು ನಾನು ಕೂಡ ಇನ್ನೂ ನೋಡಿಲ್ಲ. ಉಗ್ರಪ್ಪರ ಉತ್ತರ ಏನಿದೆ ಎಂದು ಬಹಿರಂಗ ಪಡಿಸಲು ಆಗಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಸಲೀಂ ಹಾಗೂ ವಿ.ಎಸ್. ಉಗ್ರಪ್ಪ ಪಿಸುಮಾತು ವಿಚಾರವಾಗಿ ಇಂದು (ಅಕ್ಟೋಬರ್ 23) ಕೆಪಿಸಿಸಿ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿಕೆ ನೀಡಿದ್ದಾರೆ. ಘಟನೆಯ ಬಗ್ಗೆ ವಿ.ಎಸ್. ಉಗ್ರಪ್ಪ ಉತ್ತರ ಕೊಟ್ಟಿದ್ದಾರೆ. ಮುಚ್ಚಿದ ಲಕೋಟೆಯಲ್ಲಿಟ್ಟಿದ್ದಾರೆ. ಉಗ್ರಪ್ಪ ಅವರ ಉತ್ತರವನ್ನು ನಾನು ಕೂಡ ಇನ್ನೂ ನೋಡಿಲ್ಲ. ಉಗ್ರಪ್ಪರ ಉತ್ತರ ಏನಿದೆ ಎಂದು ಬಹಿರಂಗ ಪಡಿಸಲು ಆಗಲ್ಲ ಎಂದು ತಿಳಿಸಿದ್ದಾರೆ. ಮೊದಲು ಉತ್ತರವನ್ನ ನಮ್ಮ ಶಿಸ್ತು ಕಮಿಟಿ ಮುಂದೆ ಇಡಬೇಕು. ಸದ್ಯದಲ್ಲಿ ಕಮಿಟಿಯನ್ನ ಕರೆದು, ಆ ವರದಿ ಮುಂದಿಡುತ್ತೇನೆ . ಮುಂದೆ ಏನು ಆಗುತ್ತೆ ಎಂದು ನೋಡೋಣ ಎಂದು ರೆಹಮಾನ್ ಖಾನ್ ಹೇಳಿದ್ದಾರೆ.
ಇದೇ ವೇಳೆ, ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ 22 ಕೋಟಿ ಇದೆ. ಮುಸ್ಲಿಮರು ಹೇಗೆ ಅಲ್ಪಸಂಖ್ಯಾತ ಆಗುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮುಸ್ಲಿಮರ ಕೈಹಿಡಿಯಲು ಯಾವ್ದೇ ರಾಜಕೀಯ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು ಮುಸ್ಲಿಮರ ಕೈಹಿಡಿಯುವುದಕ್ಕೆ. ಕಾಂಗ್ರೆಸ್ ಕೂಡ ಜ್ಯಾತ್ಯತೀತ ಪಕ್ಷ, ಹೀಗಾಗಿ ಮುಸ್ಲಿಮರು ನಮ್ಮ ಕಾಂಗ್ರೆಸ್ ಪಕ್ಷದ ಜೊತೆಗೆ ಇದ್ದಾರೆ. ಬಿಜೆಪಿ ಜಾತ್ಯತೀತ ಆದ್ರೆ ಬಿಜೆಪಿ ಜೊತೆ ಕೂಡ ಇರ್ತಾರೆ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ನಡುವಣ ಸ್ಫೋಟಕ ಮಾತುಗಳು ಬಹಿರಂಗವಾಗುತ್ತಿದ್ದಂತೆ ಸಲೀಂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಗೇಟ್ ಪಾಸ್ ನೀಡಲಾಗಿತ್ತು. ಇನ್ನು ಸಂಭಾಷಣೆ ವೇಳೆ ಮೌನವಾಗಿ ಮಾತುಗಳನ್ನು ಆಲಿಸಿದ ಉಗ್ರಪ್ಪಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡಿದ ಉಗ್ರಪ್ಪಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ ರೆಹಮಾನ್ ಖಾನ್ರಿಂದ ನೋಟಿಸ್ ನೀಡಲಾಗಿತ್ತು. ಪಕ್ಷದಲ್ಲಿ ಅಶಿಸ್ತಿನ ನಡವಳಿಕೆಗಾಗಿ ಕಾರಣ ಕೇಳಿ ರೆಹಮಾನ್ ಖಾನ್ ಸಹಿಯುಳ್ಳ ನೋಟಿಸ್ ಪತ್ರ ಜಾರಿಯಾಗಿತ್ತು.
ಇದನ್ನೂ ಓದಿ: ಹಿರಿಯ ನಾಯಕರೇ ಈ ರೀತಿ ಮಾಡಿದರೆ ಹೇಗೆ? ಘಟನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ: ವಿಎಸ್ ಉಗ್ರಪ್ಪಗೆ ಸಿದ್ದರಾಮಯ್ಯ ಎಚ್ಚರಿಕೆ
ಇದನ್ನೂ ಓದಿ: ಏನೂ ಹೇಳಬೇಡ ಸುಮ್ನಿರಪ್ಪ, ಸ್ಪಷ್ಟನೆ ನೀಡುವುದಕ್ಕೆ ಮುಂದಾದ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಉಗ್ರ ರೂಪ!
Published On - 4:04 pm, Sat, 23 October 21