AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಧ್ಯಮ ಪ್ರಕಟಣೆ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ!

ಪಡಿತರ ವಿತರಣೆ ವ್ಯವಸ್ಥೆ ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಯುದ್ಧ, ಬರಗಾಲ, ಪ್ರವಾಹ ಪರಿಸ್ಥಿತಿ ಸಂದರ್ಭ ಎದುರಾಗಿತ್ತು. ಹಸಿವು ಮುಕ್ತ, ಹಾಹಾಕಾರದ ಸ್ಥಿತಿ ನಿಭಾಯಿಸಲು ಯೋಜನೆ ಜಾರಿಯಾಗಿತ್ತು.

ಮಾಧ್ಯಮ ಪ್ರಕಟಣೆ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ!
ಸಿದ್ದರಾಮಯ್ಯ
TV9 Web
| Updated By: sandhya thejappa|

Updated on:Oct 23, 2021 | 2:52 PM

Share

ಬೆಂಗಳೂರು: ಮಾಧ್ಯಮ ಪ್ರಕಟಣೆ ಮೂಲಕ ಬಿಜೆಪಿ ನಾಯಕರ ಮಾತುಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟಿದ್ದಾರೆ. ನಾವು ಅನ್ನಭಾಗ್ಯ ಯೋಜನೆ ತಂದಾಗ ಟೀಕೆ ಮಾಡಿದ್ದರು. ಈಗ ಅನ್ನಭಾಗ್ಯ ಯೋಜನೆ ಕ್ರೆಡಿಟ್ ಮೋದಿಗೆ ಕೊಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಎಂಬುದು ಸುಳ್ಳಿನ ಫ್ಯಾಕ್ಟರಿ. ಬಿಜೆಪಿಯವರು ಕನಿಷ್ಠ ಅನ್ನದ ವಿಚಾರದಲ್ಲಿ ನಿಜ ಹೇಳಬೇಕಿತ್ತು. ಕನಿಷ್ಠ ನೈತಿಕತೆ, ಪ್ರಾಮಾಣಿಕತೆ ಇಲ್ಲದಿರುವುದು ದುರಂತ. ಬಿಜೆಪಿ ನಾಯಕರು ಒಂದೇ ಸಮನೆ ಸುಳ್ಳನ್ನು ಉತ್ಪಾದಿಸ್ತಿದ್ದಾರೆ. ಸುಳ್ಳು ಉತ್ಪಾದಿಸಿ ಹಂಚುತ್ತಿರುವುದರಿಂದ ಸತ್ಯ ಸಂಗತಿ ಹೇಳಿದ್ದೇನೆ ಅಂತ ವಿಪಕ್ಷ ನಾಯಕ ಮಾಧ್ಯಮ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.

ಪಡಿತರ ವಿತರಣೆ ವ್ಯವಸ್ಥೆ ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಯುದ್ಧ, ಬರಗಾಲ, ಪ್ರವಾಹ ಪರಿಸ್ಥಿತಿ ಸಂದರ್ಭ ಎದುರಾಗಿತ್ತು. ಹಸಿವು ಮುಕ್ತ, ಹಾಹಾಕಾರದ ಸ್ಥಿತಿ ನಿಭಾಯಿಸಲು ಯೋಜನೆ ಜಾರಿಯಾಗಿತ್ತು. 1960ರಿಂದಲೇ ಉಚಿತ ಪಡಿತರ ವ್ಯವಸ್ಥೆ ಜಾರಿ ಮಾಡಿತ್ತು. 1992ರಲ್ಲಿ ಕಾಂಗ್ರೆಸ್ ವಿತರಣಾ ವ್ಯವಸ್ಥೆ ಜಾರಿ ಮಾಡಿತು. ಪರಿಷ್ಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾರಿ ಮಾಡಿತು. ರಿಯಾಯಿತಿ ದರದಲ್ಲಿ ಪಡಿತರವನ್ನು ವಿತರಣೆ ಮಾಡಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

2004ರಲ್ಲಿ 2 ಕೋಟಿ ಜನರಿಗೆ ಅಂತ್ಯೋದಯ ಯೋಜನೆ ಜಾರಿಯಾಗಿದ್ದು, 2005ರಲ್ಲಿ ಫಲಾನುಭವಿಗಳ ಸಂಖ್ಯೆ 2.5 ಕೋಟಿಗೆ ಏರಿಕೆ ಮಾಡಲಾಗಿದೆ. 2013ರಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದರು. ಡಾ.ಸಿಂಗ್ ನೇತೃತ್ವದ ಯುಪಿಎ ಸರ್ಕಾರದಿಂದ ಕಾಯ್ದೆ ಜಾರಿ ಮಾಡಲಾಗಿದೆ. ಪೌಷ್ಟಿಕಾಂಶವುಳ್ಳ ಆಹಾರ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಇಂತಹ ಕ್ರಾಂತಿಕಾರಕ ನಿಲುವು ಕಾಂಗ್ರೆಸ್ ಕೈಗೊಂಡಿತ್ತು. ಈ ಕಾಯ್ದೆಯಿಂದ ತಮ್ಮ ಹಕ್ಕಿಗಾಗಿ ಬೇಡಿಕೆ ಇಡಬಹುದು. 2005ರಲ್ಲಿ ಫಲಾನುಭವಿಗಳ ಸಂಖ್ಯೆ 2.5 ಕೋಟಿ ಇತ್ತು. ಈ ಕಾಯ್ದೆಯಿಂದ ಒಮ್ಮೆಗೆ 80 ಕೋಟಿಗೆ ಏರಿಕೆಯಾಯ್ತು. ಫಲಾನುಭವಿಗಳ ಸಂಖ್ಯೆ 80 ಕೋಟಿಗೆ ಏರಿಕೆಯಾಯಿತು. ಈ ಕಾಯ್ದೆಯಿಂದ ಪ್ರತಿ ಕುಟುಂಬಕ್ಕೆ 35 ಕೆಜಿ ಅಕ್ಕಿ ನೀಡಲಾಯಿತು ಅಂತ ಮಾಧ್ಯಮ ಪ್ರಕಟಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

3 ರೂಪಾಯಿಗೆ ಕೆಜಿ ಅಕ್ಕಿ, 2 ರೂಪಾಯಿಗೆ ಕೆಜಿ ಗೋದಿ, ಬೇಳೆ ಕಾಳುಗಳನ್ನು 1 ರೂಪಾಯಿಗೆ ಒದಗಿಸಲಾಗುತ್ತಿತ್ತು. ರಾಜ್ಯದಲ್ಲಿ 4.2 ಕೋಟಿ ಜನರಿಗೆ ಈ ಯೋಜನೆಯಿಂದ ಲಾಭ ಸಿಗುತ್ತಿತ್ತು. ಬಳಿಕ ಕೆಜಿ ಅಕ್ಕಿಯನ್ನು 1 ರೂ.ನಂತೆ 30 ಕೆಜಿ ನೀಡಲಾಯಿತು. 2017ರ ಏಪ್ರಿಲ್ನಿಂದ ಕುಟುಂಬದ ಪ್ರತಿ ಸದಸ್ಯನಿಗೆ 7 ಕೆಜಿ ಅಕ್ಕಿ, 1 ಕೆಜಿ ಗೋಧಿ, 1 ಕೆಜಿ ಬೇಳೆಯನ್ನು ವಿತರಿಸಲು ಆರಂಭಿಸಲಾಯಿತು. ಬಿಜೆಪಿ ಸರ್ಕಾರ ಬಂದ ಬಳಿಕ 2 ಕೆಜಿಯನ್ನು ಇಳಿಸಲಾಗಿದೆ. ಹೆಚ್ಚು ಅಕ್ಕಿ ನೀಡುವಂತೆ ಜನ ಕೇಳಿದರೆ ಸಾಯಲು ಹೇಳಿದರು ಅಂತ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

2020ರಲ್ಲಿ ಬಿಜೆಪಿ ಸರ್ಕಾರ ಕೇವಲ ಅಕ್ಕಿ ಮಾತ್ರ ನೀಡುತ್ತಿದೆ. ಗೋಧಿ, ಸಕ್ಕರೆ, ಬೇಳೆ ಎಲ್ಲವನ್ನೂ ರದ್ದು ಮಾಡಿದ್ದಾರೆ. ಯುಪಿಎ ಸರ್ಕಾರ ಜಾರಿ ಮಾಡಿದ್ದ ಯೋಜನೆಗೆ ಹೆಸರು ಬದಲಿಸಿದರು. ಆಹಾರ ಭದ್ರತಾ ಕಾಯ್ದೆ, ಅನ್ನಭಾಗ್ಯ ಯೋಜನೆ ಕಾಪಿ ಮಾಡಿದ್ರು. ಅದಕ್ಕೆ ಹೆಸರು ಬದಲಿಸಿ ಯೋಜನೆಯನ್ನು ಜಾರಿ ಮಾಡಿದರು. ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಮಾಡಿದ್ರು ಅಂತ ಮಾಧ್ಯಮ ಪ್ರಕಟಣೆಯ ಮೂಲಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ

IND vs PAK, T20 World Cup: ಧೋನಿ ಚಾಂಪಿಯನ್ ಪಟ್ಟಕ್ಕೇರಿದ ಪಿಚ್​ನಲ್ಲಿ ಕದನಕ್ಕಿಳಿಯಲಿದ್ದಾರೆ ಬದ್ಧ ವೈರಿಗಳು!

ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು; ಬೆಂಕಿ ಇಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

Published On - 2:50 pm, Sat, 23 October 21