ವಿಪಕ್ಷ ನಾಯಕರು ಮಾತಿನಲ್ಲೇ ಮಂಟಪ ಕಟ್ಟಿಸುತ್ತಿದ್ದಾರೆ; ಹಾನಗಲ್ನಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ
ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ಪಂಥಾಹ್ವಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರದು ಮಾತಿನ ಮಂಟಪ ಎಂದು ತಿರುಗೇಟು ನೀಡಿದ್ದಾರೆ. ವಿಧಾನಸೌಧದ ವೇದಿಕೆಯೇ ದೊಡ್ಡ ಅಖಾಡ.
ಹಾವೇರಿ: ಚುನಾವಣಾ ಪ್ರಚಾರಕ್ಕೆಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹುಬ್ಬಳ್ಳಿಯಿಂದ ಹಾನಗಲ್ಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಬೊಮ್ಮಾಯಿ, ವಿಪಕ್ಷ ನಾಯಕರು ಮಾತಿನಲ್ಲೇ ಮಂಟಪ ಕಟ್ಟಿಸುತ್ತಿದ್ದಾರೆ. ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಅಂತ ಹೇಳಿಕೆ ನೀಡಿದರು. ಇನ್ನು ಸಿಎಂ ಬೊಮ್ಮಾಯಿ, ಬಿಎಸ್ವೈ ಜಂಟಿ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜ್ಯದ ಮುಖ್ಯಮಂತ್ರಿ, ಕಾಂಗ್ರೆಸ್ನಲ್ಲಿ ಡಿಕೆಶಿ, ಸಿದ್ದರಾಮಯ್ಯರಿಂದ ಜಂಟಿ ಪ್ರಚಾರ ಮಾಡುತ್ತಿಲ್ವಾ? ಅಂತ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ಪಂಥಾಹ್ವಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರದು ಮಾತಿನ ಮಂಟಪ ಎಂದು ತಿರುಗೇಟು ನೀಡಿದ್ದಾರೆ. ವಿಧಾನಸೌಧದ ವೇದಿಕೆಯೇ ದೊಡ್ಡ ಅಖಾಡ. ವಿಧಾನಸೌಧದಲ್ಲಿಯೇ ಬಹಿರಂಗ ಚರ್ಚೆ ಮಾಡಲಿ. ನಾವು ಮಾಡಿದ್ದನ್ನು ನಿನ್ನೆಯೇ ದಾಖಲೆ ಸಮೇತ ಹೇಳಿದ್ದೇನೆ. ಕೆಲವು ಊರುಗಳ ಹೆಸರನ್ನು ಕೂಡ ಉಲ್ಲೇಖಿಸಿದ್ದೇನೆ. ವಿಪಕ್ಷದವರು ಅಲ್ಲಿಗೆ ಹೋಗಿ ನೋಡಿಕೊಂಡು ಬರಲಿ ಅಂತ ಹಾನಗಲ್ನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಿಎಸ್ವೈ ಆಗಮನದಿಂದ ನಮ್ಮ ಬಲ ಇಮ್ಮಡಿಯಾಗಿದೆ. ನಮ್ಮ ಗೆಲುವಿನ ಅಂತರ ಕೂಡ ಇಮ್ಮಡಿಯಾಗಿದೆ ಎಂದು ಟಿವಿ9ಗೆ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರದ ವೇಳೆ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ನಾನು ಮಾತಾಡಲ್ಲ. ಹಾನಗಲ್ ಕ್ಷೇತ್ರದಲ್ಲಂತೂ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆದಾಗ ರೈತರಿಗೆ ನಾಲ್ಕು ಸಾವಿರ ಕೊಡೋಕೆ ತೀರ್ಮಾನ ಮಾಡಿದರು. ತಾಲೂಕಿನ 38,433 ಜನ ರೈತರಿಗೆ ಕಿಸಾನ್ ಸಮ್ಮಾನ ಹಣ ಸಿಕ್ಕಿದೆ. ಈ ಕುಟುಂಬಗಳು ಯಾರಿಗೆ ವೋಟು ಹಾಕ್ತಾರೆ? ಯಡಿಯೂರಪ್ಪ, ಮೋದಿಯವರ ಪಕ್ಷದ ಬಿಜೆಪಿಗೆ ಮತ ಹಾಕ್ತಾರೆ. ನಮ್ಮ ವಿಶ್ವಾಸ ದಾಖಲೆಗಳಲ್ಲಿದೆ. ಕೊವಿಡ್ ಸಮಯದಲ್ಲಿ ಮಾಡಿದ ಸಹಾಯವನ್ನ ರಾಜಕೀಯ ಬಂಡವಾಳ ಮಾಡಿಕೊಳ್ತಿದ್ದಾರೆ. ಇದು ನ್ಯಾಯನಾ? ಯೋಗ್ಯನಾ? ಅಂತ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ
OMG 2: ‘ಓಹ್ ಮೈ ಗಾಡ್ 2’ ಪೋಸ್ಟರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಅಕ್ಷಯ್ ಕುಮಾರ್; ಹೇಗಿದೆ ಹೊಸ ಗೆಟಪ್?
ಸಿದ್ದರಾಮಯ್ಯನ್ನ ತಾಲಿಬಾನ್ ಪ್ರದೇಶಕ್ಕೆ ಕಳಿಸಬೇಕು: ಕೇಂದ್ರಕ್ಕೆ ಮನವಿ ಮಾಡಿದ ಸಂಸದ ಶ್ರೀನಿವಾಸ್ ಪ್ರಸಾದ್
Published On - 12:44 pm, Sat, 23 October 21