ನನ್ನ ಪರವಾಗಿ ಜಮೀರ್ ಬ್ಯಾಟಿಂಗ್ ಮಾಡುವ ಅಗತ್ಯವಿಲ್ಲ; ಜೆಡಿಎಸ್ ಎಂಎಲ್ಸಿ ಬಿಎಂ ಫಾರೂಕ್
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಸ್ಲಿಂ ಮುಖಂಡರ ಮೋಸದಿಂದ ಸೋಲು ಅನುಭವಿಸಿದ್ದೆವು. ನಾವು 30-35 ಕ್ಷೇತ್ರಗಳನ್ನು ಕಳೆದುಕೊಂಡೆವು.
ಬೆಂಗಳೂರು: ನನ್ನ ಪರವಾಗಿ ಜಮೀರ್ ಬ್ಯಾಟಿಂಗ್ ಮಾಡುವ ಅಗತ್ಯವಿಲ್ಲ ಅಂತ ಜೆಡಿಎಸ್ ಎಂಎಲ್ಸಿ ಬಿಎಂ ಫಾರೂಕ್ (BM Farooq) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ದೇವರು ಇಚ್ಛಿಸಿದರೆ ನಾನು ಎಂದಾದರೂ ಸಚಿವನಾಗುತ್ತೇನೆ. ಅದಕ್ಕಾಗಿ ಪಕ್ಷಾಂತರ, ಸುಳ್ಳು ಹೇಳುವುದು ನನಗೆ ಬರಲ್ಲ. ರಾಜ್ಯಸಭೆ ಟಿಕೆಟ್ ಕೊಡಲು ಹೆಚ್ಡಿಕೆ ನನ್ನನ್ನ ಕರೆಸಿದ್ದರು. ಮುಂಬೈನಲ್ಲಿದ್ದ ನನ್ನನ್ನು ಫೋನ್ ಮಾಡಿ ಕರೆಸಿಕೊಂಡಿದ್ದರು. ಜಮೀರ್, ಇತರರು ನನಗೆ ದೋಖಾ ಮಾಡಿ ಹೋದರು ಅಂತ ಫಾರೂಕ್ ಕಿಡಿಕಾರಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಸ್ಲಿಂ ಮುಖಂಡರ ಮೋಸದಿಂದ ಸೋಲು ಅನುಭವಿಸಿದ್ದೆವು. ನಾವು 30-35 ಕ್ಷೇತ್ರಗಳನ್ನು ಕಳೆದುಕೊಂಡೆವು. ಐಎಎಸ್ ಮತ್ತು ಕೆಲವು ನಿವೃತ್ತ ಅಧಿಕಾರಿಗಳ ಜೊತೆಗೂಡಿ ಸಿದ್ದರಾಮಯ್ಯ ಇದಕ್ಕೆ ಪಿತೂರಿ ನಡೆಸಿದ್ದರು. ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆದರು. ಇದರಿಂದಾಗಿ ಬಿಜೆಪಿಗೆ 105 ಸ್ಥಾನ ಗೆಲ್ಲಲು ಕಾರಣವಾಯಿತು ಅಂತ ಜೆಡಿಎಸ್ ಎಂಎಲ್ಸಿ ಫಾರೂಕ್ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೆಖಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಡಬಲ್ ಗೇಮ್ನಿಂದ ಮುಸ್ಲಿಮರು ಅತಂತ್ರವಾಗಿದ್ದಾರೆ ಎಂದು ಆರೋಪ ಮಾಡಿದ ಫಾರೂಕ್, ಮುಸ್ಲಿಮರ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್, ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಮುಸ್ಲಿಮರನ್ನ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ. ಕೋಮು ಶಕ್ತಿಗಳನ್ನ ಮುಸ್ಲಿಮರ ವಿರುದ್ಧ ಬಿಜೆಪಿ ಎತ್ತಿ ಕಟ್ಟುತ್ತಿದೆ. ಬಿಜೆಪಿ, ಕಾಂಗ್ರೆಸ್ ನಡುವೆ ಯಾವುದೇ ರೀತಿ ವ್ಯತ್ಯಾಸ ಇಲ್ಲ. ಆರ್ಎಸ್ಎಸ್ ಬೆಳೆದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭ. ಆರ್ಎಸ್ಎಸ್ ಇಲ್ಲ ಅಂದ್ರೆ ಕಾಂಗ್ರೆಸ್ಗೆ ಬೆಲೆಯೇ ಇಲ್ಲ. ಆರ್ಎಸ್ಎಸ್ ಗುಮ್ಮ ತೋರಿಸಿ ಕಾಂಗ್ರೆಸ್ ಮುಸ್ಲಿಮರ ಮತ ಪಡೆಯುತ್ತದೆ. ಕಾಂಗ್ರೆಸ್ ಕೂಡ ಆರ್ಎಸ್ಎಸ್ಗೆ ಪರೋಕ್ಷ ಬೆಂಬಲ ಕೊಡುತ್ತಿದೆ ಅಂತ ಫಾರೂಕ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ
ನನ್ನ ಗುರಿ ಇರುವುದು ಏನಿದ್ದರೂ 2023ರ ಚುನಾವಣೆಗೆ; ಐದು ವರ್ಷ ಅಧಿಕಾರ ಮಾಡಲು ಅವಕಾಶ ನೀಡಿ: ಹೆಚ್ಡಿ ಕುಮಾರಸ್ವಾಮಿ
ಮುದ್ದಿಸುವ, ತಬ್ಬಿಕೊಳ್ಳುವ ದೃಶ್ಯಗಳನ್ನು ಟಿವಿಯಲ್ಲಿ ತೋರಿಸುವಂತಿಲ್ಲ; ಪಾಕಿಸ್ತಾನಿ ಕಿರುತೆರೆಗೆ ಸೆನ್ಸಾರ್ ಬರೆ
Published On - 3:42 pm, Sat, 23 October 21