ಬೆಂಗಳೂರು: ಬಹುಶಃ ಕೆಪಿಸಿಸಿ ಕಂಡ ಅತ್ಯಂತ ಅಸಹಾಯಕ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಅಸಹಾಯಕ ಅಧ್ಯಕ್ಷನೆಂಬ ಪಟ್ಟ ಡಿ.ಕೆ. ಶಿವಕುಮಾರ್ಗೆ ಒಲಿದುಬರಬಹುದು. ತಮ್ಮ ವಿರುದ್ಧ ಸಂಚು ರೂಪಿಸಿದ ವ್ಯಕ್ತಿ ವಿರುದ್ಧ ಶಿಸ್ತುಕ್ರಮ ಇಲ್ಲ. ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೂ ಡಿ.ಕೆ. ಶಿವಕುಮಾರ್ ಅಳುಕುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಎದುರು ಸಿದ್ದರಾಮಯ್ಯ ಕೈಮೇಲಾಯಿತೆ? ಎಂದು ಕೇಳಿ ಕರ್ನಾಟಕ ರಾಜ್ಯ ಬಿಜೆಪಿ ಘಟಕ ಸರಣಿ ಟ್ವೀಟ್ ಮಾಡಿದೆ. ಕೆಪಿಸಿಸಿ ಕಚೇರಿಯಲ್ಲಿ ಸಲೀಂ, ವಿ.ಎಸ್. ಉಗ್ರಪ್ಪ ಪಿಸುಮಾತು ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಉಪಚುನಾವಣೆ ನಂತರ ಉತ್ತರ ಕೊಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಕ್ರಮಕೈಗೊಳ್ಳುವ ಬದಲು ಡಿ.ಕೆ. ಶಿವಕುಮಾರ್ ಮೆತ್ತಗಾಗಿದ್ದಾರೆ. ಸಿದ್ದರಾಮಯ್ಯ ಬಣದ ಉಗ್ರಪ್ಪ ವಿರುದ್ಧ ಶಿಸ್ತುಕ್ರಮಕೈಗೊಂಡ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲಿ ಕೈತಪ್ಪುತ್ತೋ ಎಂಬ ಭಯವೇ? ಸಿದ್ದರಾಮಯ್ಯ ದೆಹಲಿ ಪ್ರವಾಸದಿಂದ ಡಿಕೆಶಿ ಕುಗ್ಗಿಹೋಗಿದ್ದಾರಾ? ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಪಿಸುಮಾತು ಪ್ರಕರಣ ಸಂಬಂಧ ಉಪಚುನಾವಣೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದಿದ್ದ @DKShivakumar ಈಗ ಮೆತ್ತಗಾಗಿ ಬಿಟ್ಟಿದ್ದಾರೆ
ಸಿದ್ದರಾಮಯ್ಯ ಬಣದ ಉಗ್ರಪ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಎಲ್ಲಿ ಅಧ್ಯಕ್ಷ ಪಟ್ಟ ಕೈ ತಪ್ಪುತ್ತದೆಯೆಂಬ ಭಯವೇ?
ಸಿದ್ದರಾಮಯ್ಯ ದಿಲ್ಲಿ ಪ್ರವಾಸದಿಂದ ಡಿಕೆಶಿ ಕುಗ್ಗಿ ಹೋಗಿದ್ದಾರೆಯೇ?#ಅಸಹಾಯಕಡಿಕೆಶಿ
— BJP Karnataka (@BJP4Karnataka) October 24, 2021
ಡಿಕೆಶಿ ಮಾಡಿದ್ದ ಪದಾಧಿಕಾರಿಗಳ ಪಟ್ಟಿ ನಿರ್ಲಕ್ಷ್ಯ ಮಾಡಿತು. ಸಿದ್ದರಾಮಯ್ಯ ಮೊದಲ ದೆಹಲಿ ಭೇಟಿಯಿಂದ ನಿರ್ಲಕ್ಷ್ಯ ಆಯಿತು. 2ನೇ ಭೇಟಿ ಪದಾಧಿಕಾರಿಗಳ ಪಟ್ಟಿ ತಿರಸ್ಕರಿಸುವಂತೆ ಮಾಡಿತು. 3ನೇ ಭೇಟಿ ಕೆಪಿಸಿಸಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ? ಎಂದು ಪ್ರಶ್ನಿಸಲಾಗಿದೆ. ಡಿಕೆಶಿ ಅಸಹಾಯಕ ಕೆಪಿಸಿಸಿ ಅಧ್ಯಕ್ಷರೆಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ‘ಶಾರುಖ್ ಖಾನ್ ಬಿಜೆಪಿ ಸೇರಿದರೆ, ಡ್ರಗ್ಸ್ ಸಕ್ಕರೆ ಪುಡಿಯಾಗಿ ಬದಲಾಗುತ್ತದೆ’-ಮಹಾ ಸಚಿವನ ವ್ಯಂಗ್ಯ
ಇದನ್ನೂ ಓದಿ: ಮಾಧ್ಯಮ ಪ್ರಕಟಣೆ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ!